ಮೈಸೂರು ಮೆಡಿಕಲ್ ಕಾಲೇಜ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ನೇಮಕಾತಿ

Posted By:

ಮೈಸೂರು ಮೆಡಿಕಲ್ ಕಾಲೇಜ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ರೇಡಿಯೋಥೆರಾಪಿ ವಿಭಾಗದಲ್ಲಿ ಖಾಲಿ ಇರುವ ಫಿಸಿಸ್ಟ್ (ಆರ್ ಎಸ್ ಒ) ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 

ಈ ಹುದ್ದೆಯನ್ನು ಸಂದರ್ಶನದ ಮೂಲಕ ಭರ್ತಿ ಮಾಡಿಕೊಳ್ಳುತ್ತಿದ್ದು ದಿನಾಂಕ 27-06-2017 ರಂದು ಸಂದರ್ಶನ ನಡೆಯಲಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ವೆಬ್ಸೈಟ್ ವಿಳಾಸದ ಮೂಲಕ ಡೌನ್ಲೋಡ್ ಮಾಡಿಕೊಂಡು ಅಗತ್ಯ ದಾಖಲೆ ಮತ್ತು ಡಿಡಿಯೊಂದಿಗೆ ಅರ್ಜಿಯನ್ನು ತುಂಬಿ ಸಂದರ್ಶನದ ವೇಳೆ ಹಾಜರುಪಡಿಸತಕ್ಕದ್ದು.

ಹುದ್ದೆಯ ವಿವರ

ವಿಭಾಗ: ರೇಡಿಯೋಥೆರಾಪಿ
ಹುದ್ದೆಯ ಹೆಸರು: ಫಿಸಿಸ್ಟ್ (ಆರ್ ಎಸ್ ಒ)
ಒಟ್ಟು ಹುದ್ದೆ: 01
ವೇತನ ಶ್ರೇಣಿ: ರೂ.28100-50100/-

ರೇಡಿಯೋಥೆರಾಪಿ ಫಿಸಿಸ್ಟ್ ನೇಮಕಾತಿ

ವಿದ್ಯಾರ್ಹತೆ

  • ಭೌತಸಾಸ್ತ್ರದಲ್ಲಿ ಪದವಿ ಹೊಂದಿದ್ದು, ರೇಡಿಯಾಲಜಿ/ಮೆಡಿಕಲ್ ಫಿಸಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರಬೇಕು ಅಥವಾ ರೇಡಿಯೋಲಜಿ/ಮೆಡಿಕಲ್ ಫಿಸಿಕ್ಸ್ ನಲ್ಲಿ ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
  • ಆರ್ ಎಸ್ ಒ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು.

ವಯೋಮಿತಿ

  • ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ
  • ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ
  • ಎಸ್.ಸಿ/ಎಸ್.ಟಿ/ಪ್ರ-1 ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತ ಒಬಿಸಿ ಅಭ್ಯರ್ಥಿಗಳಿಗೆ ರೂ.500/-
  • ಎಸ್.ಸಿ/ಎಸ್.ಟಿ/ಪ್ರ-1 ರ ಅಭ್ಯರ್ಥಿಗಳಿಗೆ ರೂ.250/-
  • ಡಿ.ಡಿ ಯನ್ನು "Director and Dean, MMC&RI" ಇವರ ಹೆಸರಿಗೆ ಸಂದಾಯವಾಗುವಂತೆ ಪಾವತಿಸುವುದು.

ಸೂಚನೆ

  • ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ದಿನಾಂಕ 27-06-2017 ರಂದು ಬೆಳಗ್ಗೆ 11:00 ಗಂಟೆಯೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳತಕ್ಕದ್ದು.
  • ಅಭ್ಯರ್ಥಿಗಳು ಸಂದರ್ಶನದ ವೇಳೆ ತಮ್ಮ ಮೂಲ ದಾಖಲೆಗಳೊಂದಿಗೆ ಎರಡು ಸೆಟ್ ದೃಡೀಕರಿಸಿದ ನಕಲು ಪ್ರತಿಗಳು ಮತ್ತು ಇತ್ತೀಚಿನ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ತೆಗೆದುಕೊಂಡು ಹೋಗತಕ್ಕದ್ದು.

ಸಂದರ್ಶನ ನಡೆಯುವ ಸ್ಥಳ

Chambers of Director and Dean, MMCRI, Mysore

ಸಂದರ್ಶನದ ದಿನಾಂಕ ಮತ್ತು ಸಮಯ

27-06-2017 ರಂದು ಬೆಳಗ್ಗೆ 11:00 ರಿಂದ ಸಂಜೆ 5:00 ಗಂಟೆಯವರೆಗೆ.

English summary
MMC&RI is looking for eligible candidate for filling up of the post of Physicist (RSO) in the department of Radiotherapy.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia