ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಲ್ಲಿ 174 ಹುದ್ದೆಗಳು ಖಾಲಿ ಇವೆ

ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಮೈಸೂರು ಇದರಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಒಟ್ಟು 174 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 168 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಮತ್ತು 6 ಬ್ಯಾಕ್‌ಲಾಗ್ ಹುದ್ದೆಗಳಿಗೆ ಆಫ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.ಆಸಕ್ತರು ಯಾವೆಲ್ಲಾ ಹುದ್ದೆಗಳು ಖಾಲಿ ಇವೆ ಮತ್ತು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾಗುವ ವೇತನವೆಷ್ಟು ಎಂದು ತಿಳಿಯಲು ಮುಂದೆ ಓದಿ.

174 ಹುದ್ದೆಗಳ ನೇರ ನೇಮಕಾತಿ : ಆಸಕ್ತರು ಈ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಶೈಕ್ಷಣಿಕ ವಿದ್ಯಾರ್ಹತೆ ಏನಿರಬೇಕು ? :
 

ಶೈಕ್ಷಣಿಕ ವಿದ್ಯಾರ್ಹತೆ ಏನಿರಬೇಕು ? :

ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಸಂಬಂಧಿಸಿದ ಹುದ್ದೆಗಳಿಗೆ ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಲೇ ಬೇಕು.

ಬಿ.ವಿ.ಎಸ್ಸಿ ಮತ್ತು ಎ.ಹೆಚ್ ಪದವಿ, ಕೃಷಿ ವಿಜ್ಞಾನದಲ್ಲಿ ಪದವಿ, ಬಿ.ಟೆಕ್ (ಡಿ.ಟೆಕ್) / ಬಿ.ಎಸ್ಸಿ (ಡಿಟಿ) ಪದವಿ, ಎಂ.ಬಿ.ಎ (ಫೈನಾನ್ಸ್) (ಬಿ.ಬಿ.ಎಂ ಪದವಿ) / ಎಂ.ಕಾಂ (ಬಿ.ಕಾಂ ಪದವಿಯೊಂದಿಗೆ ), ಎಲ್‌.ಎಲ್‌.ಎಂ (ಎಲ್‌.ಎಲ್‌.ಬಿ ಪದವಿಯೊಂದಿಗೆ) / ಎಂ.ಬಿ.ಎ (ಹೆಚ್‌.ಆರ್‌.) (ಬಿ.ಬಿ.ಎಂ ಪದವಿಯೊಂದಿಗೆ) / ಎಂ.ಎಸ್‌.ಡಬ್ಲ್ಯೂ. (ಬಿ.ಎಸ್‌.ಡಬ್ಲ್ಯೂ ಪದವಿಯೊಂದಿಗೆ) ಸ್ನಾತಕೋತ್ತರ ಪದವಿ, ಎಂ.ಕಾಂ / ಎಂ.ಬಿ.ಎ (ಫೈನಾನ್ಸ್) ಸ್ನಾತಕೋತ್ತರ ಪದವಿ, ಏಂ.ಎಸ್ಸಿ, ಪದವಿ, ಬಿ.ಇ ಪದವಿ, ಡಿಪ್ಲೋಮಾ, ಎಸ್‌.ಎಸ್‌.ಎಲ್‌.ಸಿ ಮತ್ತು ಐಟಿಐ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಖಾಲಿ ಹುದ್ದೆಗಳ ವಿವರ :

ಖಾಲಿ ಹುದ್ದೆಗಳ ವಿವರ :

ಸಹಾಯಕ ವ್ಯವಸ್ಥಾಪಕ (ಎ.ಹೆಚ್. & ಎ.ಐ ) - 17 ಹುದ್ದೆಗಳು

ಸಹಾಯಕ ವ್ಯವಸ್ಥಾಪಕ (ಎಫ್ & ಎಫ್ ) -2 ಹುದ್ದೆಗಳು

ತಾಂತ್ರಿಕ ಅಧಿಕಾರಿ (ಡಿ.ಟಿ) - 06 ಹುದ್ದೆಗಳು

ಖರೀದಿ / ಉಗ್ರಾಣಾಧಿಕಾರಿ - 1 ಹುದ್ದೆ

ಆಡಳಿತಾಧಿಕಾರಿ - 1 ಹುದ್ದೆ

ಲೆಕ್ಕಾಧಿಕಾರಿ - 1 ಹುದ್ದೆ

ಎಂಐಎಸ್ / ಸಿಸ್ಟಂ ಆಫೀಸರ್ - 1 ಹುದ್ದೆ

ತಾಂತ್ರಿಕ ಅಧಿಕಾರಿ (ಗು.ನಿ ) - 2ಹುದ್ದೆಗಳು

ಮಾರುಕಟ್ಟೆ ಅಧಿಕಾರಿ - 2 ಹುದ್ದೆಗಳು

ಭದ್ರತಾ ಅಧಿಕಾರಿ - 1 ಹುದ್ದೆ

ತಾಂತ್ರಿಕಾಧಿಕಾರಿ (ಇಂಜಿನಿಯರಿಂಗ್) - 5 ಹುದ್ದೆಗಳು

ಡೈರಿ ಸೂಪರ್‌ವೈಸರ್ ದರ್ಜೆ -2 - 4 ಹುದ್ದೆಗಳು

ವಿಸ್ತರಣಾಧಿಕಾರಿ ದರ್ಜೆ -3- 15 ಹುದ್ದೆಗಳು

ಕೆಮಿಸ್ಟ್ ದರ್ಜೆ-2 - 12 ಹುದ್ದೆಗಳು

ಲೆಕ್ಕ ಸಹಾಯಕ ದರ್ಜೆ -2 - 4 ಹುದ್ದೆಗಳು

ಆಡ್ಮಿನ್ ಅಸಿಸ್ಟೆಂಟ್ ದರ್ಜೆ -2 - 18 ಹುದ್ದೆಗಳು

ಭದ್ರತಾ ಸಹಾಯಕರು - 8 ಹುದ್ದೆಗಳು

ಮಾರುಕಟ್ಟೆ ಸಹಾಯಕ ದರ್ಜೆ -2 - 18 ಹುದ್ದೆಗಳು

ಜ್ಯೂನಿಯರ್ ಸಿಸ್ಟಂ ಆಪರೇಟರ್ - 7 ಹುದ್ದೆಗಳು

ಜ್ಯೂನಿಯರ್ ಟೆಕ್ನೀಷಿಯನ್‌ / ಬಾಯ್ಲರ್ ಅಟೆಂಡೆಂಟ್ - 49 ಹುದ್ದೆಗಳು

ವಯೋಮತಿ ಎಷ್ಟಿರಬೇಕು ? :
 

ವಯೋಮತಿ ಎಷ್ಟಿರಬೇಕು ? :

ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 9.10.2019 ರಂದು ಕನಿಷ್ಟ / ಗರಿಷ್ಟ ವಯೋಮಿತಿ ಈ ಕೆಳಕಂಡಂತೆ ಇರತಕ್ಕದ್ದು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 - ಕನಿಷ್ಟ 18 ರಿಂದ ಗರಿಷ್ಟ 40 ವರ್ಷ

ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ - ಕನಿಷ್ಟ 18 ರಿಂದ ಗರಿಷ್ಟ 38ವರ್ಷ

ಸಾಮಾನ್ಯ ಅಭ್ಯರ್ಥಿಗಳಿಗೆ - ಕನಿಷ್ಟ 18 ರಿಂದ ಗರಿಷ್ಟ 35 ವರ್ಷ

ಮಾಜಿ ಸೈನಿಕರಿಗೆ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿರುವ ಅವಧಿಗೆ ಹಾಗೂ ಅಂಗವಿಕಲರು ಮತ್ತು ವಿಧವೆಯರಿಗೆ 10 ವರ್ಷಗಳ ಅವಧಿಯ ವಯೋಮಿತಿ ಸಡಿಲಿಕೆ ಇರುತ್ತದೆ.

ವೇತನದ ವಿವರ :

ವೇತನದ ವಿವರ :

ಸಹಾಯಕ ವ್ಯವಸ್ಥಾಪ ವ್ಯವಸ್ಥಾಪಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 52,650/- ರಿಂದ 97,100/-ರೂ ವೇತನ.

ತಾಂತ್ರಿಕ ಅಧಿಕಾರಿ (ಡಿ.ಟಿ), ಖರೀದಿ / ಉಗ್ರಾಣಾಧಿಕಾರಿ, ಆಡಳಿತಾಧಿಕಾರಿ, ಲೆಕ್ಕಾಧಿಕಾರಿ, ಎಂಐಎಸ್ / ಸಿಸ್ಟಂ ಆಫೀಸರ್, ತಾಂತ್ರಿಕ ಅಧಿಕಾರಿ (ಗು.ನಿ ), ಮಾರುಕಟ್ಟೆ ಅಧಿಕಾರಿ, ಭದ್ರತಾ ಅಧಿಕಾರಿ ಮತ್ತು ತಾಂತ್ರಿಕಾಧಿಕಾರಿ (ಇಂಜಿನಿಯರಿಂಗ್) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 43,100/- ರಿಂದ 83,900/-ರೂ ವೇತನ.

ಡೈರಿ ಸೂಪರ್‌ವೈಸರ್ ದರ್ಜೆ -2 ಮತ್ತು ವಿಸ್ತರಣಾಧಿಕಾರಿ ದರ್ಜೆ -3 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 33,450/ - ರಿಂದ 62,600/-ರೂ ವೇತನ.

ಕೆಮಿಸ್ಟ್ ದರ್ಜೆ-2, ಲೆಕ್ಕ ಸಹಾಯಕ ದರ್ಜೆ -2, ಆಡ್ಮಿನ್ ಅಸಿಸ್ಟೆಂಟ್ ದರ್ಜೆ -2, ಭದ್ರತಾ ಸಹಾಯಕರು, ಮಾರುಕಟ್ಟೆ ಸಹಾಯಕ ದರ್ಜೆ -2 ಮತ್ತು ಜ್ಯೂನಿಯರ್ ಸಿಸ್ಟಂ ಆಪರೇಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 27,650/- ರಿಂದ 52,650/-ರೂ ವೇತನ.

ಜ್ಯೂನಿಯರ್ ಟೆಕ್ನೀಷಿಯನ್‌ / ಬಾಯ್ಲರ್ ಅಟೆಂಡೆಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 21,400/- ರಿಂದ 42,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ :

ಆಯ್ಕೆ ಪ್ರಕ್ರಿಯೆ :

ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನೀಡಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿಸಂದರ್ಶನಕ್ಕೆ ಕರೆಯಲಾಗುವುದು.ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ :

ಅರ್ಜಿ ಶುಲ್ಕ :

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರು, ಮಾಜಿ ಸೈನಿಕರು ಹಾಗೂ ಪ್ರವರ್ಗ-1 ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ- ರೂ.300/- + ಅಂಚೆ ಕಛೇರಿ ಶುಲ್ಕ ಪ್ರತ್ಯೇಕ.

ಇತರೆ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಅಜಿ ಶುಲ್ಕ - ರೂ.600/- + ಅಂಚೆ ಕಛೇರಿ ಶುಲ್ಕ ಪ್ರತ್ಯೇಕ.

ಅರ್ಜಿ ಶುಲ್ಕವನ್ನು ಯಾವುದೇ ವಿದ್ಯುನ್ಮಾನ ಪಾವತಿ ಅಂಚೆ ಕಚೇರಿಗೆ ತೆರಳಿ ನಿಗದಿತ ಶುಲ್ಕ + ಅಂಚೆ ಕಛೇರಿ ಶುಲ್ಕ ಪ್ರತ್ಯೇಕ ಪಾವತಿ ಮಾಡತಕ್ಕದ್ದು. ಶುಲ್ಕವನ್ನು ಪಾವತಿಸಲು 10.10.2019 ರೊಳಗೆ ಪಾವತಿಸತಕ್ಕದ್ದು.

ಪ್ರಮುಖ ದಿನಾಂಕಗಳು :

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ - 9.9.2019

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 9.10.2019

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ - 10.10.2019

ಅರ್ಜಿ ಸಲ್ಲಿಸುವುದು ಹೇಗೆ :

ಅರ್ಜಿ ಸಲ್ಲಿಸುವುದು ಹೇಗೆ :

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ http://www.mymul.coop/ ಗೆ ಹೋಗಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಅಕ್ಟೋಬರ್ 9,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ನೇರ ನೇಮಕಾತಿಯ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

ಮತ್ತು ಬ್ಯಾಕ್ ಲಾಗ್ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

For Quick Alerts
ALLOW NOTIFICATIONS  
For Daily Alerts

English summary
Mysore milk union limited recruitment 2019 notification has been released on official website for the recruitment of 174 posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X