ಎನ್ಎಎಲ್ 28 ವಿವಿಧ ಹುದ್ದೆಗಳ ನೇಮಕಾತಿ

Posted By:

ಬೆಂಗಳೂರಿನಲ್ಲಿರುವ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ನಲ್ಲಿ (ಎನ್ಎಎಲ್) ವಿವಿಧ 28 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸರ್ಕಾರೇತರ ಸಂಸ್ಥೆ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿಯಲ್ಲಿ ಖಾಲಿ ಇರುವ ತಾಂತ್ರಿಕ ಅಧಿಕಾರಿ ಮತ್ತು ಹಿರಿಯ ತಾಂತ್ರಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ಮಾರ್ಚ್ 25 ರೊಳಗೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.

ಆಫೀಸರ್ ಹುದ್ದೆಗಳ ನೇಮಕಾತಿ

ಹುದ್ದೆಗಳ ವಿವರ

ಟೆಕ್ನಿಕಲ್ ಅಸಿಸ್ಟೆಂಟ್

ಒಟ್ಟು 25 ಹುದ್ದೆಗಳು ಖಾಲಿ ಇದ್ದು ಎಂಜಿನಿಯರಿಂಗ್ / ಟೆಕ್ನಾಲಜಿಯಲ್ಲಿ ಪ್ರಥಮ ಶ್ರೇಣಿಯಲ್ಲಿ 3 ವರ್ಷದ ಡಿಪ್ಲೊಮಾ ಪಾಸು ಮಾಡಿದವರು ಅರ್ಜಿ ಸಲ್ಲಿಸಬಹುದು.

ವೇತನ : ರೂ.39,000/-

ಟೆಕ್ನಿಕಲ್ ಆಫೀಸರ್/ಸೀನಿಯರ್ ಟೆಕ್ನಿಕಲ್ ಆಫೀಸರ್

02 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗೆ ಬಿಇ/ಬಿಟೆಕ್ ಅಥವಾ ಶೇ.55 ಅಂಕಗಳೊಂದಿಗೆ ಏರೋನಾಟಿಕಲ್/ಏರೋಸ್ಪೇಸ್ ಇಂಜಿನಿಯರಿಂಗ್ ಪಾಸ್ ಮಾಡಿರಬೇಕು ಅಥವಾ ಶೇ.55 ಅಂಕಗಳೊಂದಿಗೆ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಬಿಇ/ಬಿಟೆಕ್ ಪೂರ್ಣಗೊಳಿಸಿರಬೇಕು.

ವೇತನ : ರೂ.48,500/-

ಲೇಡಿ ಮೆಡಿಕಲ್ ಆಫೀಸರ್

ಈ ಹುದ್ದೆಗೆ ಅಂಗೀಕೃತ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿರಬೇಕು

ವೇತನ : ರೂ.62,000/-

ವಯೋಮಿತಿ

ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ 28 ವರ್ಷ ಹಾಗೂ ಟೆಕ್ನಿಕಲ್ ಆಫೀಸರ್/ಸೀನಿಯರ್ ಟೆಕ್ನಿಕಲ್ ಹುದ್ದೆಗೆ 35 ವರ್ಷ

ಆಯ್ಕೆ ವಿಧಾನ

ಸಂದರ್ಶನ ಮತ್ತು ಅಭ್ಯರ್ಥಿಗಳ ನೈಪುಣ್ಯತೆ ಪರೀಕ್ಷೆ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಶುಲ್ಕ

100 /- ರೂ. ಎಸ್.ಸಿ/ಎಸ್.ಟಿ/ಅಂಗವಿಕಲ/ಮಹಿಳೆ ಹಾಗೂ ಸಿಎಸ್ಐಆರ್ ನ ಖಾಯಂ ಉದ್ಯೋಗಿಗಳಿಗೆ ಶುಲ್ಕ ವಿನಾಯಿತಿ ಇದೆ.

ಡೈರೆಕ್ಟರ್, ಎನ್ಎಎಲ್, ಬೆಂಗಳೂರು ಹೆಸರಿನಲ್ಲಿ ಡಿಡಿ ತೆಗೆದು ಪಾವತಿಸಬೇಕು. ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿದ್ದು, ಭರ್ತಿ ಮಾಡಿದ ಅರ್ಜಿಯ ಪ್ರಿಂಟೌಟ್ ಹಾಗೂ ಅಗತ್ಯ ದಾಖಲೆಗಳನ್ನು ದಿ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಸಿಎಸ್ಐಆರ್, ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್, ಪೋಸ್ಟ್ ನಂ.1779 ,ಎಚ್ಎಎಲ್ ಏರ್ಪೋರ್ಟ್ ರೋಡ್, ಕೋಡಿಹಳ್ಳಿ, ಬೆಂಗಳೂರು-560017 ಈ ವಿಳಾಸಕ್ಕೆ ಕಳುಹಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-03-2017
ಹೆಚ್ಚಿನ ಮಾಹಿತಿಗಾಗಿ: www.nal.res.in

ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ (ಎನ್ಎಎಲ್)

ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ (ಎನ್ಎಎಲ್) ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ (ಸಿಎಸ್ಐಆರ್)ನ ಘಟಕವಾಗಿದ್ದು, ಭಾರತದ ಅಂತರಿಕ್ಷಯಾನ ಆರ್ & ಡಿ ಪ್ರಯೋಗಾಲಯವಾಗಿದೆ. ಸಿಎಸ್ಐಆರ್-ಎನ್ಎಎಲ್ ಏರೋಸ್ಪೇಸ್ ಮತ್ತು ಸಂಬಂಧಿತ ವಿಷಯಗಳಲ್ಲಿ ಉನ್ನತ ಮಟ್ಟದ ಅಧ್ಯಯನ ಮತ್ತು ಸಂಶೋಧನೆ ನಡೆಸುವ ಹೈಟೆಕ್ ಸಂಸ್ಥೆ ಇದಾಗಿದ್ದು, ವಿಮಾನಗಳ ವಿನ್ಯಾಸ, ಅಂತರಿಕ್ಷ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ನಾಗರಿಕ ವಿಮಾನ ನಿರ್ಮಿಸಲು ಮತ್ತು ಎಲ್ಲಾ ರಾಷ್ಟ್ರೀಯ ವೈಮಾನಿಕ ಕಾರ್ಯಕ್ರಮಗಳನ್ನು ಬೆಂಬಲಿಸುವ ದ್ಯೇಯೋದ್ದೇಶ ಹೊಂದಿದೆ.

ಸಿಎಸ್ಐಆರ್-ಎನ್ಎಎಲ್ ಅತ್ಯುತ್ತಮ ಸೌಲಭ್ಯವನ್ನು ಹೊಂದಿದೆ. ಮತ್ತು ಇಲ್ಲಿನ ಸೌಲಭ್ಯಗಳು ಅನೇಕ ರಾಷ್ಟ್ರೀಯ ಸೌಲಭ್ಯಗಳ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದೆ. ಇದರ ಜೊತೆಗೆ ಆರ್ & ಡಿ ಸಾಮರ್ಥ್ಯ ಮತ್ತು ಯಶಸ್ಸು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಗಮನಾರ್ಹ. ಧೇಶದ ವೈಮಾನಿಕ ಮತ್ತು ಅಂತರಿಕ್ಷ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನ ಬೆಳವಣಿಗೆಗಳು ಮತ್ತು ಅತ್ಯುನ್ನತ ಮಟ್ಟದ ಸಾಧನೆಗೆ ಸಿಎಸ್ಐಆರ್ ಎನ್ಎಎಲ್-ನೆರವಾಗಿದೆ.

English summary
National Aerospace Laboratories released new notification on their official website for the recruitment of total 28 vacancies.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia