ಬೆಂಗಳೂರು ಸಿಎಸ್ಐಆರ್-ಎನ್ಎಎಲ್ ನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಟ್ರೇಡ್ ಟ್ರೈನಿಂಗ್ ಪ್ರೋಗ್ರಾಮ್ (ಎಟಿಪಿಟಿ) ಅಡಿಯಲ್ಲಿ ಶಿಷ್ಯವೃತ್ತಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರತಿಭಾವಂತ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಐಟಿಐ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಒಂದು ವರ್ಷದ ಈ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಸಲ್ಲಿಸ ಬಯಸುವವರು ಸೆಪ್ಟೆಂಬರ್ 14 ರೊಳಗೆ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದೆ.

ಹುದ್ದೆಯ ವಿವರ
ಹುದ್ದೆಯ ಕೋಡ್: ಎಟಿಪಿಟಿ/01
ವಿದ್ಯಾರ್ಹತೆ
ಎಸ್ ಎಸ್ ಎಲ್ ಸಿ ಮತ್ತು ಐಟಿಐ (ಎನ್ ಸಿವಿಟಿ ಪ್ರಮಾಣ ಪತ್ರ ಹೊಂದಿರುವವರು ಮಾತ್ರ)
ಟ್ರೇಡ್ ವಿವರ
ಎಲೆಕ್ಟ್ರಿಷಿಯನ್, ಫಿಟರ್, ಮೆಶಿನಿಸ್ಟ್, ಮೆಕ್ಯಾನಿಕ್ ಮೋಟರ್ ವೆಹಿಕಲ್, ಟರ್ನರ್, ವೆಲ್ಡರ್ (ಗ್ಯಾಸ್ ಎಲೆಕ್ಟ್ರಿಕ್) ಟ್ರೇಡ್ ಗಳಲ್ಲಿ ಐಟಿಐ ಪೂರ್ಣಗಳಿಸಿರುವವರು ಅರ್ಜಿಗಳನ್ನು ಸಲ್ಲಿಸಬಹುದು
ಸ್ಟೈಪೆಂಡ್: ತಿಂಗಳಿಗೆ ರೂ.6841/- (ಪರಿಷ್ಕರಣದ ಸಾಧ್ಯತೆ ಇದೆ)
2014 ಮತ್ತು ಅದರ ನಂತರದ ವರ್ಷಗಳಲ್ಲಿ ಐಟಿಐ ಅರ್ಹತಾ ಪರೀಕ್ಷೆಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 2017 ರಲ್ಲಿ ಐಟಿಐ ಪರೀಕ್ಷೆಗೆ ಹಾಜರದಂಥ ವಿದ್ಯಾರ್ಥಿಗಳೂ ಕೂಡ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ
ಖಾಲಿ ಹಾಳೆಯ ಮೇಲೆ ಅಭ್ಯರ್ಥಿಗಳು ತಮ್ಮ ವಿವರಗಳ ಜೊತೆಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಕಚೇರಿಯ ವಿಳಾಸಕ್ಕೆ ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಕಳುಹಿಸತಕ್ಕದ್ದು.
ಲಗತ್ತಿಸಬೇಕಾದ ದಾಖಲೆಗಳು
- ಸಂಪೂರ್ಣ ಅಂಚೆ ವಿಳಾಸ, ಇ-ಮೇಲ್ ವಿಳಾಸ, ಎನ್ ಸಿವಿಟಿ-ಎಂಐಎಸ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ್ದರೆ ಅದರ ನೋಂದಣಿ ಸಂಖ್ಯೆ
- ಎಸ್ ಎಸ್ ಎಲ್ ಸಿ ಅಂಕಪಟ್ಟಿ ಮತ್ತು ಐಟಿಐ ಅಂಕಪಟ್ಟಿಗಳ ಪ್ರತಿ
- ಸಕ್ಷಮ ಪ್ರಾಧಿಕಾರದಿಂದ ನೀಡಿರುವ ಜಾತಿ ಪ್ರಮಾಣದ ಪ್ರತಿ
ಎಸ್ ಎಸ್ ಎಲ್ ಸಿ/10ನೇ ತರಗತಿವರೆಗೆ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-09-2017
ಅರ್ಜಿ ಸಲ್ಲಿಸಬೇಕಾದ ವಿಳಾಸ
ಮುಖ್ಯಸ್ಥರು,
ನಾಲೆಡ್ಜ್ ಅಂಡ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಡಿವಿಜನ್
ಸಿಎಸ್ಐಆರ್-ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿಸ್
ಪಿ.ಬಿ.ನಂ 1779, ಹಳೆ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು-560017
ಹೆಚ್ಚಿನ ಮಾಹಿತಿಗಾಗಿ www.nal.res.in ಗಮನಿಸಿ