ರಾಷ್ಟ್ರೀಯ ರಸಗೊಬ್ಬರ ನಿಗಮದಲ್ಲಿ ವಿವಿಧ ತಾಂತ್ರಿಕ ವೃತ್ತಿಪರರ ನೇಮಕಾತಿ

Posted By:

ರಾಷ್ಟ್ರೀಯ ರಸಗೊಬ್ಬರ ನಿಗಮ (ಎನ್ ಎಫ್ ಎಲ್ )ದಲ್ಲಿ ವಿವಿಧ ತಾಂತ್ರಿಕ ವೃತ್ತಿಪರರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಎಸ್ ಎಸ್ ಎಲ್ ಸಿ ಆದವರಿಗೆ ಆರ್ ಬಿ ಐ ನಲ್ಲಿ ಉದ್ಯೋಗಾವಕಾಶ

ಎನ್ ಎಫ್ ಎಲ್ ಕೃಷಿಗೆ ಅಗತ್ಯವಿರುವ ಉತ್ಪನ್ನಗಳು ಮತ್ತು ರಸಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಿದ್ದು, ಇದರ ವಿವಿಧ ಘಟಕಗಳಲ್ಲಿ ಹಲವು ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 15 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಎನ್ ಎಫ್ ಎಲ್: ತಾಂತ್ರಿಕ ವೃತ್ತಿಪರರ ನೇಮಕಾತಿ

ಹುದ್ದೆಗಳ ವಿವರ

  • ಕೆಮಿಕಲ್ ಇಂಜಿನಿಯರ್-25 ಹುದ್ದೆಗಳು
  • ಮೆಕ್ಯಾನಿಕಲ್ ಇಂಜಿನಿಯರ್-15 ಹುದ್ದೆಗಳು
  • ಎಲೆಕ್ಟ್ರಿಕಲ್ ಇಂಜಿನಿಯರ್-06 ಹುದ್ದೆಗಳು
  • ಇನ್ಸ್ಟ್ರುಮೆಂಟೇಷನ್ ಇಂಜಿನಿಯರ್-04 ಹುದ್ದೆಗಳು
  • ಸಿವಿಲ್ ಇಂಜಿನಿಯರ್-04 ಹುದ್ದೆಗಳು
  • ಎಲೆಕ್ಟ್ರಿಕಲ್ ಮ್ಯಾನೇಜರ್-08 ಹುದ್ದೆಗಳು
  • ಮೆಟೀರಿಯಲ್ಸ್ ಸೀನಿಯರ್ ಮ್ಯಾನೇಜರ್-03 ಹುದ್ದೆಗಳು

ವಿದ್ಯಾರ್ಹತೆ

ಬಿಇ/ಬಿಟೆಕ್/ಬಿಎಸ್ಸಿ ಪದವಿ ಹೊಂದಿರಬೇಕು. ಪದವಿಯಲ್ಲಿ ಕನಿಷ್ಠ ಶೇ.60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಡಿಪ್ಲೋಮ ಹೊಂದಿರವವರು ಅರ್ಜಿ ಸಲ್ಲಿಸಬಹುದಾಗಿದೆ.

ವೇತನ ಶ್ರೇಣಿ

  • ಇಂಜಿನಿಯರ್-16400-40500/-
  • ಮ್ಯಾನೇಜರ್-29100-54500/-
  • ಸೀನಿಯರ್ ಮ್ಯಾನೇಜರ್-32900-58000/-

ಅರ್ಜಿ ಸಲ್ಲಿಕೆ

ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.700/- (ಇಂಜಿನಿಯರ್) ಮತ್ತು ರೂ.1000/-(ಮ್ಯಾನೇಜರ್)

ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-12-2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
NFL is looking for technically qualified, dynamic and result oriented experienced professionals with initiative for manning the following positions for its various Offices / Units.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia