ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ 4 ರಿಸರ್ಚ್ ಅಸಿಸ್ಟೆಂಟ್, ಅಡ್ಮಿನಿಸ್ಟ್ರೇಟರ್ ಮತ್ತು ರಿಸರ್ಚ್ ಫೆಲೋ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಹುದ್ದೆಗಳಿಗೆ ಕೇಳಲಾಗಿರುವ ವಿದ್ಯಾರ್ಹತೆ, ವಯೋಮಿತಿ ಮತ್ತು ಇತರೆ ಮಾಹಿತಿಯನ್ನು ಪಡೆಯಲು ಮುಂದೆ ಓದಿ.
ವಿದ್ಯಾರ್ಹತೆ:
ಡಿಪ್ಲೋಮಾ, ಎಂ.ಫಿಲ್, ಎಂ.ಎ, ಎಂ.ಎಸ್ಸಿ, ಎಂಎಸ್‌ಡಬ್ಲ್ಯೂ, ಎಂಬಿಬಿಎಸ್, ಪೋಸ್ಟ್ ಗ್ರಾಜುಯೇಟ್, ಸ್ನಾತಕೋತ್ತರ ಪದವಿ, ಡಿಪಿಎಂ, ಎಂ,ಡಿ, ಡಿಎನ್‌ಬಿ ಮತ್ತು ಪಿ.ಹೆಚ್‌ಡಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
ವಯೋಮಿತಿ:
ಹುದ್ದೆಗಳಿಗನುಸಾರ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವೇತನ:
ರಿಸರ್ಚ್ ಅಸಿಸ್ಟೆಂಟ್, ಅಡ್ಮಿನಿಸ್ಟ್ರೇಟರ್ ಮತ್ತು ರಿಸರ್ಚ್ ಫೆಲೋ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,000/- ರಿಂದ 50,000/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅರ್ಜಿದಾರರು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ:
ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ
impactnimhans@gmail.com ವಿಳಾಸಕ್ಕೆ ಡಿಸೆಂಬರ್ 26,2020 ರೊಳಗೆ ಮೇಲ್ ಮಾಡುವ ಮೂಲಕ ಅರ್ಜಿಯನ್ನು ತಲುಪಿಸಬೇಕಿರುತ್ತದೆ.
ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.