
ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯನ್ ಟೆಕ್ನಾಲಜಿ (NIOT) 237 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಾಜೆಕ್ಟ್ ಸೈಂಟಿಸ್ಟ್, ಪ್ರಾಜೆಕ್ಟ್ ಸೈಂಟಿಫಿಕ್ ಅಸಿಸ್ಟೆಂಟ್, ಪ್ರಾಜೆಕ್ಟ್ ಟೆಕ್ನಿಷಿಯನ್, ಪ್ರಾಜೆಕ್ಟ್ ಜೂನಿಯರ್ ಅಸಿಸ್ಟೆಂಟ್, ರಿಸರ್ಚ್ ಅಸೋಸಿಯೇಟ್, ಎಸ್‌ಆರ್‌ಎಫ್ ಮತ್ತು ಜೆಆರ್‌ಎಫ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಆನ್‌ಲೈನ್ ನೋಂದಣಿ ಮತ್ತು ಅರ್ಜಿ ಪ್ರಕ್ರಿಯೆಯು ಆಗಸ್ಟ್ 18,2021 ರಿಂದ ಸೆಪ್ಟೆಂಬರ್ 13,2021ರ ವರೆಗೆ ನಡೆಯಲಿದೆ.
ಎನ್‌ಐಓಟಿ ನೇಮಕಾತಿ 2021 ಖಾಲಿ ಹುದ್ದೆಗಳ ವಿವರ ಇಂತಿವೆ :

ಎನ್‌ಐಓಟಿ ನೇಮಕಾತಿ 2021 ಅರ್ಹತೆಗಳು :
ಎನ್‌ಐಓಟಿ ನೇಮಕಾತಿ 2021ರ ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ/ಮೆಟ್ರಿಕ್ಯುಲೇಷನ್ ಜೊತೆಗೆ ಸಂಬಂಧಿತ ಟ್ರೇಡ್ ನಲ್ಲಿ ಐಟಿಐ ವಿದ್ಯಾರ್ಹತೆ; ಪದವಿ , ಸ್ನಾತಕೋತ್ತರ ಪದವಿ; ಹುದ್ದೆಗೆಎ ಸಂಬಂಧಿತ ವಿಷಯದಲ್ಲಿ M.Sc, Ph.D; ಹುದ್ದೆಗೆ ಸಂಬಂಧಿಸಿದ ಇಂಜಿನಿಯರಿಂಗ್ ವಿಭಾಗಗಳಲ್ಲಿ ಬಿಇ/ಬಿಟೆಕ್, ಎಂಇ/ಎಂ.ಟೆಕ್/ಡಿಪ್ಲೊಮಾ/ಬಿ.ಸಿಎ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಎನ್‌ಐಓಟಿ ನೇಮಕಾತಿ 2021 ವಯೋಮಿತಿ :
ಎನ್‌ಐಓಟಿ ನೇಮಕಾತಿ 2021ರ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕನಿಷ್ಟ 28 ರಿಂದ ಗರಿಷ್ಟ 50 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ಎನ್‌ಐಓಟಿ ನೇಮಕಾತಿ 2021 ವೇತನ :
ಎನ್‌ಐಓಟಿ ನೇಮಕಾತಿ 2021ರ ಮೂಲಕ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಧಿಸೂಚನೆ 2021 ರಲ್ಲಿ ಉಲ್ಲೇಖಿಸಿರುವಂತೆ ಪ್ರತಿ ತಿಂಗಳಿಗೆ 17,000/- ರಿಂದ 78,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.
ಎನ್‌ಐಓಟಿ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ :
ಎನ್‌ಐಓಟಿ ನೇಮಕಾತಿ 2021ರ ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆಯ್ಕೆಯನ್ನು ಅಧಿಸೂಚನೆಯಲ್ಲಿ ವಿವರಿಸಿರುವಂತೆ ಅರ್ಜಿದಾರರ ಕಿರುಪಟ್ಟಿಯನ್ನು ಮಾಡಿ ದಾಖಲೆ ಪರಿಶೀಲನೆ ಅಥವಾ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.
ಎನ್‌ಐಓಟಿ ನೇಮಕಾತಿ 2021 ಅರ್ಜಿ ಶುಲ್ಕ:
ಎನ್‌ಐಓಟಿ ನೇಮಕಾತಿ 2021ರ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕದ ಕುರಿತು ಮಾಹಿತಿ ಪಡೆಯಲು ಅಧಿಸೂಚನೆಯನ್ನು ಓದಬಹುದು.
ಎನ್‌ಐಓಟಿ ನೇಮಕಾತಿ 2021 ಅರ್ಜಿ ಸಲ್ಲಿಕೆ:
ಎನ್‌ಐಓಟಿ ನೇಮಕಾತಿ 2021ರ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://www.niot.res.in/niot1/index.php ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಸೆಪ್ಟೆಂಬರ್ 13,2021ರ ಸಂಜೆ 5 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.