ಐಸಿಎಂಆರ್ - ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ (ಎನ್‌ಐಟಿಎಂ) ವಿವಿಧ 11 ಹುದ್ದೆಗಳನ್ನು ಭರ್ತಿ ಮಾಡಲು ಅಕ್ಟೋಬರ್ 15 ಮತ್ತು 16 ರಂದು ವಾಕ್-ಇನ್ ಇಂಟರ್ವ್ಯೂ ನಡೆಸುತ್ತಿದೆ. ಎನ್‌ಐಟಿಎಂ ಸೈಂಟಿಸ್ಟ್ ಬಿ, ಸಹಾಯಕ ಮತ್ತು ವಿವಿಧ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದ್ದು, ಆಸಕ್ತರು ಅಧಿಸೂಚನೆಯನ್ನು ಓದಬಹುದು.
ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 15 ಮತ್ತು 16 ರಂದು ನಡೆಯುವ ವಾಕ್-ಇನ್ ಇಂಟರ್ವ್ಯೂನಲ್ಲಿ ಪಾಲ್ಗೊಳ್ಳಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.
CRITERIA | DETAILS |
Name Of The Posts | ಸೈಂಟಿಸ್ಟ್ ಬಿ, ಸಹಾಯಕ ಮತ್ತು ಇತರೆ ಹುದ್ದೆಗಳು |
Organisation | ಐಸಿಎಂಆರ್ - ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ (ಎನ್‌ಐಟಿಎಂ) |
Educational Qualification | ಯಾವುದೇ ವಿಭಾಗದಲ್ಲಿ ಪದವಿ, ಮೆಟ್ರಿಕ್ ತತ್ಸಮಾನ ವಿದ್ಯಾರ್ಹತೆ,ಪಿ.ಹೆಚ್‌ಡಿ, 12ನೇ ತರಗತಿ/ ದ್ವಿತೀಯ ಪಿಯುಸಿ,ಎಂ.ಎಸ್ಸಿ, |
Job Location | ಕರ್ನಾಟಕ |
Salary Scale | ಸಹಾಯಕ- ತಿಂಗಳಿಗೆ 26,000/-ರೂ,ಪ್ರಾಜೆಕ್ಟ್ ಟೆಕ್ನೀಶಿಯನ್-II - ತಿಂಗಳಿಗೆ 17,000/-ರೂ,ಸೈಂಟಿಸ್ಟ್-ಬಿ-ತಿಂಗಳಿಗೆ 48,000/-ರೂ,ಡಾಟಾ ಎಂಟ್ರಿ ಆಪರೇಟರ್ -ಬಿ - ತಿಂಗಳಿಗೆ 18,000/-ರೂ,ವೈದ್ಯಕೀಯ ಸಾಮಾಜಿಕ ಕಾರ್ಯಕರ್ತ -ತಿಂಗಳಿಗೆ 32,000/-ರೂ ಮತ್ತು ಸಲಹೆಗಾರ -ತಿಂಗಳಿಗೆ 40,000/-ರೂ |
Application Start Date | October 4, 2019 |
Application End Date | October 15, 2019 |
ಶೈಕ್ಷಣಿಕ ವಿದ್ಯಾರ್ಹತೆ:
ಸಹಾಯಕ ಹುದ್ದೆಗಳಿಗೆ ಯಾವುದೇ ವಿಭಾಗದಲ್ಲಿ ಪದವಿ, ಪ್ರಾಜೆಕ್ಟ್ ಟೆಕ್ನೀಶಿಯನ್ ಹುದ್ದೆಗಳಿಗೆ ಮೆಟ್ರಿಕ್ / ತತ್ಸಮಾನ ವಿದ್ಯಾರ್ಹತೆ, ಸೈಂಟಿಸ್ಟ್ ಬಿ ಹುದ್ದೆಗಳಿಗೆ ಪಿ.ಹೆಚ್‌ಡಿ,ಡಾಟಾ ಎಂಟ್ರಿ ಆಪರೇಟರ್ -ಬಿ ಮತ್ತು ಪ್ರಾಜೆಕ್ಟ್ ಟೆಕ್ನೀಶಿಯನ್- II ಹುದ್ದೆಗಳಿಗೆ ದ್ವಿತೀಯ ಪಿಯುಸಿ/10+2 ಮತ್ತು ಮೆಟ್ರಿಕ್/ತತ್ಸಮಾನ ವಿದ್ಯಾರ್ಹತೆ, ,ವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ಹುದ್ದೆಗಳಿಗೆ ಪದವಿ, ಸಲಹೆಗಾರ ಹುದ್ದೆಗಳಿಗೆ ಎಂ.ಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಲು ಅರ್ಹರು.
ವಯೋಮಿತಿ:
ಹುದ್ದೆಗಳಿಗನುಸಾರ ಕೇಳಲಾಗಿರುವ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ವಯೋಮಿತಿಯ ವಿವರವನ್ನು ತಿಳಿಯಲು ಅಧಿಸೂಚನೆಯನ್ನು ಓದಬಹುದು.
ವೇತನದ ವಿವರ:
ಸಹಾಯಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 26,000/-ರೂ,ಪ್ರಾಜೆಕ್ಟ್ ಟೆಕ್ನೀಶಿಯನ್-II ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17,000/-ರೂ,ಸೈಂಟಿಸ್ಟ್-ಬಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 48,000/-ರೂ,ಡಾಟಾ ಎಂಟ್ರಿ ಆಪರೇಟರ್ -ಬಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 18,000/-ರೂ,ವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 32,000/-ರೂ ಮತ್ತು ಸಲಹೆಗಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 40,000/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಸಂದರ್ಶನದ ವಿವರ:
ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಅಕ್ಟೋಬರ್ 15 ಮತ್ತು 16ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹುದ್ದೆಗಳ ಬಗೆಗೆ ಹಾಗೂ ಸಂದರ್ಶನ ನಡೆಯುವ ಸ್ಥಳದ ಬಗೆಗೆ ಮತ್ತಷ್ಟು ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ನಿಂದ ಪಡೆಯಬಹುದು.
ಅಭ್ಯರ್ಥಿಗಳು ಎನ್‌ಐಟಿಎಂ ನ ಅಧಿಕೃತ ವೆಬ್‌ಸೈಟ್‌ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ