ನವೋದಯ ವಿದ್ಯಾಲಯ ಸಮಿತಿ ನೇಮಕಾತಿ 2019: 251 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ನವೋದಯ ವಿದ್ಯಾಲಯ ಸಮಿತಿಯು ದೇಶದೆಲ್ಲೆಡೆ ಖಾಲಿ ಇರುವ 251 ವಿವಿಧ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಪ್ರಾಂಶುಪಾಲ, ಸಹಾಯಕ, ಕಂಪ್ಯೂಟರ್ ಆಪರೇಟರ್, ಸ್ನಾತಕೋತ್ತರ ಪದವಿ ಶಿಕ್ಷಕರು ಮತ್ತು ಅಸಿಸ್ಟೆಂಟ್ ಕಮೀಶನರ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಫೆಬ್ರವರಿ 14,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ನವೋದಯ ವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸಲು ಸುವರ್ಣಾವಕಾಶ

CRITERIA DETAILS
Name Of The Posts ಪ್ರಾಂಶುಪಾಲ, ಸಹಾಯಕ, ಕಂಪ್ಯೂಟರ್ ಆಪರೇಟರ್, ಸ್ನಾತಕೋತ್ತರ ಪದವಿ ಶಿಕ್ಷಕರು ಮತ್ತು ಅಸಿಸ್ಟೆಂಟ್ ಕಮೀಶನರ್
Organisation ನವೋದಯ ವಿದ್ಯಾಲಯ ಸಮಿತಿ
Educational Qualification ಪದವಿ/ಸ್ನಾತಕೋತ್ತರ ಪದವಿಯ ಜೊತೆಗೆ ಬಿ.ಎಡ್ ಅಥವಾ ಸಮಾನ ಬೋಧನಾ ಪದವಿ
Job Location ಭಾರತದೆಲ್ಲೆಡೆ
Application Start Date January 15, 2019
Application End Date February 14, 2019

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ/ಸ್ನಾತಕೋತ್ತರ ಪದವಿಯ ಜೊತೆಗೆ ಬಿ.ಎಡ್ ಅಥವಾ ಸಮಾನ ಬೋಧನಾ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಉತ್ತೀರ್ಣರಾಗಿರಬೇಕು.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರು ಖಾಲಿ ಹುದ್ದೆಗಳ ಸಂಖ್ಯೆ
ಪ್ರಾಂಶುಪಾಲ 25
ಅಸಿಸ್ಟೆಂಟ್ ಕಮೀಶನರ್ 03
ಸಹಾಯಕ 02
ಕಂಪ್ಯೂಟರ್ ಆಪರೇಟರ್ 03
ಸ್ನಾತಕೋತ್ತರ ಪದವಿ ಶಿಕ್ಷಕರು 218
ಒಟ್ಟು 251

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ವಯೋಮಿತಿಯ ವಿವರ ಇಲ್ಲಿದೆ

ಹುದ್ದೆಗಳ ಹೆಸರು ವಯೋಮಿತಿ
ಪ್ರಾಂಶುಪಾಲ 50 ವರ್ಷಗಳು
ಅಸಿಸ್ಟೆಂಟ್ ಕಮೀಶನರ್ 45 ವರ್ಷಗಳು
ಸಹಾಯಕ 18 ರಿಂದ 30 ವರ್ಷಗಳು
ಕಂಪ್ಯೂಟರ್ ಆಪರೇಟರ್ 18 ರಿಂದ 30 ವರ್ಷಗಳು
ಸ್ಮಾತಕೋತ್ತರ ಪದವಿ ಶಿಕ್ಷಕರು 40 ವರ್ಷಗಳು

ಆಯ್ಕೆ ವಿಧಾನ:

ನವೋದಯ ವಿದ್ಯಾಲಯ ಸಮಿತಿಯ ವಿವಿಧ ಹುದ್ದೆಗ ನೇಮಕಾತಿಗಾಗಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ಕೊಡಲಾಗುತ್ತದೆ. ತದನಂತರ ಸಂದರ್ಶನವನ್ನು ಮಾಡಲಾಗುತ್ತದೆ ತದನಂತರ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:

ಹುದ್ದೆಗಳ ಹೆಸರು ಶುಲ್ಕ
ಪ್ರಾಂಶುಪಾಲ ರೂ. 1500/-
ಅಸಿಸ್ಟೆಂಟ್ ಕಮೀಶನರ್ ರೂ. 1500/-
ಸಹಾಯಕ ರೂ. 800/-
ಕಂಪ್ಯೂಟರ್ ಆಪರೇಟರ್ ರೂ. 800/-
ಸ್ನಾತಕೋತ್ತರ ಪದವಿ ಶಿಕ್ಷಕರು ರೂ. 1000/-

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ/ಅಂಗವಿಕಲ ಅಥವಾ ಮಹಿಳಾ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಸ್ಟೆಪ್ ಗಳನ್ನು ಫಾಲೋ ಮಾಡಿ

ಸ್ಟೆಪ್ 1 : ಮೊದಲು navodaya.gov.in. ಅಧಿಕೃತ ವೆಬ್ ಸೈಟ್ ಗೆ ಹೋಗಿ

ಸ್ಟೆಪ್ 2: ಮೇಲೆ ಹೇಳಲಾಗಿರುವ ವಿವಿಧ ಹುದ್ದೆಗಳ ನೇಮಕಾತಿಯ ಬಗೆಗೆ ವೀಕ್ಷಿಸಲು "Recruitment" ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3: ನಂತರ ಅಧಿಸೂಚನೆಯ ಮಾಹಿತಿ ತೆರೆಯಲ್ಪಡುತ್ತದೆ. ಅದನ್ನು ಓದಿ ವಿದ್ಯಾರ್ಹತೆಯನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ

ಸ್ಟೆಪ್ 4: ನಂತರ ಸರಿಯಾದ ಮಾಹಿತಿಯನ್ನು ಭರ್ತಿ ಮಾಡುವುದರ ಜೊತೆಗೆ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ

ಸ್ಟೆಪ್ 5: ಪೂರ್ಣ ಮಾಹಿತಿ ಭರ್ತಿ ಮಾಡಿ ಶುಲ್ಕ ಪಾವತಿಸಿದ ನಂತರ Submit Button ಮೇಲೆ ಕ್ಲಿಕ್ ಮಾಡಿ ಮತ್ತು ಅರ್ಜಿಯ ಒಂದು ಪ್ರಿಂಟೌಟ್ ಅನ್ನು ತೆಗೆದುಕೊಳ್ಳಿ.

ಈ ಹುದ್ದೆಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
NVS Recruitment 2019: Navodaya Vidyalaya Samiti is going to fill up251 vacancies in all over the country. It invites online application from talented candidates. Recently it has released the recruitment advertisement for following postsPrincipal, Assistant, Computer Operator, PGTs & Assistant Commissioner. Applicants who want to get central government job scan use this chance. As per the NVS Teacher recruitment notification, these 251 vacancies are allotted for above said posts. Navodaya Vidyalaya recruitment apply online link has been activated from15.01.2019.The last date to submit the online application is14.02.2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X