ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 2019-2020ನೇ ಸಾಲಿಗೆ 2814 ಚಾಲಕ ಹಾಗೂ ಚಾಲಕ-ಕಂ-ನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜನವರಿ 8,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.
CRITERIA | DETAILS |
Name Of The Posts | ಚಾಲಕ ಮತ್ತು ಚಾಲಕ ಕಂ ನಿರ್ವಾಹಕ |
Organisation | ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ |
Educational Qualification | ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ |
Job Location | ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ವಿಭಾಗ, ಶಿರಸಿ (ಕರ್ನಾಟಕ) |
Salary Scale | ತಿಂಗಳಿಗೆ 12,400/- ರಿಂದ 19,550/-ರೂ |
Application Start Date | December 10, 2019 |
Application End Date | January 8, 2020 |
ಅರ್ಹತೆ:
ಚಾಲಕ ಮತ್ತು ಚಾಲಕ ಕಂ ನಿರ್ವಾಹಕ (ಪಜಾ-ಹಿಂಬಾಕಿ) ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆಯಾಗಿರಬೇಕು. (ರಾಜ್ಯ ಪ್ರೌಢ ಶಿಕಣ ಪರೀಕ್ಷಾ ಮಂಡಳಿಯಿಂದ ನಡೆಸಲಾಗುವ ಎಸ್ ಎಸ್ ಎಲ್ ಸಿ ಅಥವಾ ರಾಜ್ಯ ಸರ್ಕಾರವು ತತ್ಸಮಾನವೆಂದು ಪರಿಗಣಿಸಿದ ವಿದ್ಯಾರ್ಹತೆ) ಮುಕ್ತ ವಿವಿಯಿಂದ ಪಡೆದ ಎಸ್‌ಎಸ್‌ಸಿ 500 ಅಂಕಗಳ ಅಂಕಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ.
ಚಾಲ್ತಿಯಲ್ಲಿರುವ ಭಾರಿ ಸರಕು ಸಾಗಾಣಿಕೆ ವಾಹನ (HTV) ಚಾಲನಾ ಪರವಾನಿಗೆ ಹೊಂದಿ ಕನಿಷ್ಠ 2 ವರ್ಷಗಳಾಗಿರಬೇಕು.
ಮತ್ತು ಪ್ರಯಾಣಿಕರ ಭಾರಿ ವಾಹನ ಚಾಲನಾ ಪರವಾನಿಗೆ ಹಾಗೂ ಕರ್ನಾಟಕ ಪಿಎಸ್‌ವಿ ಬ್ಯಾಡ್ಜ್ ಹೊಂದಿರಬೇಕು.
ಹುದ್ದೆಗಳ ವಿವರ:
ಚಾಲಕ: 2500 ಹುದ್ದೆಗಳು
ಚಾಲಕ (ಪಜಾ-ಹಿಂಬಾಕಿ): 55 ಹುದ್ದೆಗಳು
ಚಾಲಕ-ಕಂ-ನಿರ್ವಾಹಕ (ಪ.ಜಾತಿ-ಹಿಂಬಾಕಿ): 259 ಹುದ್ದೆಗಳು
ಒಟ್ಟು: 2814 ಹುದ್ದೆಗಳು
ವಯೋಮಿತಿ:
ಚಾಲಕ ಮತ್ತು ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಕನಿಷ್ಠ 24 ವರ್ಷಗಳು ತುಂಬಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ.
ಪ.ಜಾತಿ, ಪ.ಪಂಗಡ. ಪ್ರವರ್ಗ-1 ಅಭ್ಯರ್ಥಿಗಳಿಗೆ - 40 ವರ್ಷಗಳು
ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ- 38 ವರ್ಷಗಳು
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ -35 ವರ್ಷಗಳು
ವೇತನದ ವಿವರ:
ಚಾಲಕ/ಚಾಲಕ-ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 12,400/- ರಿಂದ 19,550/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೂಲ ದಾಖಲಾತಿಗಳ, ದೈಹಿಕ ಅರ್ಹತೆಯ ಪರಿಶೀಲನೆ ಮತ್ತು ಚಾಲನಾ ವೃತ್ತಿ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.
ನಿಗದಿತ ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ:
ಪ.ಜಾತಿ, ಪ.ಪಂಗಡ. ಪ್ರವರ್ಗ-1, ಮಾಜಿ ಸೈನಿಕ ಅಭ್ಯರ್ಥಿಗಳಿಗೆ- ರೂ.300
ಹಿಂದುಳಿದ ವರ್ಗ/ಸಾಮಾನ್ಯ ಅಭ್ಯರ್ಥಿಗಳಿಗೆ- ರೂ.600.
ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಶುಲ್ಕ ಪಾವತಿಯ ಚಲನ್ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಯಾವುದೇ ಅಂಚೆ ಕಚೇರಿಯಲ್ಲಿ ಕಂಪ್ಯೂಟರ್ ಆಧಾರಿತ ಶುಲ್ಕ ಪಾವತಿ ಮಾಡಬಹುದು.
ಅಂಚೆ ಕಚೇರಿಯಲ್ಲಿ ಅರ್ಜಿ ಶುಲ್ಕ ಪಾವತಿಸಿದ ಮೂಲ ಚಲನ್ ಪ್ರತಿಯನ್ನು ಮೂಲ ದಾಖಲಾತಿ/ ದೈಹಿಕ ಅರ್ಹತೆ ಪರಿಶೀಲನೆ, ಹಾಗೂ ಚಾಲನಾ ವೃತ್ತಿ ಪರೀಕ್ಷೆ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು. ಅರ್ಜಿ ಶುಲ್ಕವನ್ನು ಪಾವತಿಸಲು ಜನವರಿ 8,2020 ಕೊನೆಯ ದಿನವಾಗಿರುತ್ತದೆ.
ಚಲನ್ ಹೊರತುಪಡಿಸಿ ಇನ್ನುಳಿದ ಯಾವುದೇ ರೀತಿಯಲ್ಲಿ ಅಂದರೆ ಡಿ.ಡಿ/ ಐ.ಪಿ.ಓ / ಚೆಕ್ ಇತ್ಯಾದಿಗಳ ಮೂಲಕ ಸಲ್ಲಿಸಿದ ಅರ್ಜಿ ಶುಲ್ಕವನ್ನು ಪರಿಗಣಿಸಲಾಗುವುದಿಲ್ಲ. ಇಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಹ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://www.nwkrtc.in/ ಗೆ ಹೋಗಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಜನವರಿ 8,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳಿಗೆ ಒಮ್ಮೆ ಸಲ್ಲಿಸಿದ ಅರ್ಜಿಯನ್ನು ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ. ಚಾಲಕ ಮತ್ತು ನಿರ್ವಾಹಕ ಎರಡು ಹುದ್ದೆಗಳಿಗೂ ಅರ್ಜಿ ಸಲ್ಲಿಸಬಯಸುವವರು, ಅರ್ಜಿ ನಮೂನೆ ಎರಡರಲ್ಲಿ ಟಿಕ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಒಮ್ಮೆ ಅರ್ಜಿಯನ್ನು ಸಲ್ಲಿಸಿದ ನಂತರ ಒಂದು ಪ್ರತಿಯನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಬೇಕು.
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ