ತೈಲ ಮತ್ತು ನೈಸರ್ಗಿಕ ಅನಿಲ ನಿಗಮ., ಅಪ್ರೆಂಟಿಸ್‌ಶಿಪ್‌ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Posted By:

ಲ ಮತ್ತು ನೈಸರ್ಗಿಕ ಅನಿಲ ನಿಗಮ (ಒ ಎನ್ ಜಿ ಸಿ) ಅರ್ಹ ಅಭ್ಯರ್ಥಿಗಳಿಂದ ಅಪ್ರೆಂಟಿಸ್‌ಶಿಪ್‌ ಹುದ್ದೆಗೆ ಅರ್ಜಿ ಆಹ್ವಾನ. ರಾಜಮಂಡ್ರಿಯ ಒ ಎನ್ ಜಿ ಸಿ ವಿಭಾಗದಲ್ಲಿ ಅಪ್ರೆಂಟಿಸ್‌ಶಿಪ್‌ ಮಾಡಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 ಒ ಎನ್ ಜಿ ಸಿ ಯಲ್ಲಿ  ಅಪ್ರೆಂಟಿಸ್‌ ಹುದ್ದೆಗಳು

ಹುದ್ದೆಯ ವಿವರ

ಒಟ್ಟು ಹುದ್ದೆಗಳು: 89

ಮೆಕ್ಯಾನಿಕ್ (ಡೀಸೆಲ್):15
ಮೆಕ್ಯಾನಿಕ್ (ಮೋಟಾರ್ ವೆಹಿಕಲ್):02
ಟ್ರ್ಯಾಕ್ಟರ್ ಮೆಕ್ಯಾನಿಕ್ :01
ಟರ್ನರ್ :02
ವೆಲ್ದರ್ (ಗ್ಯಾಸ್ ಮತ್ತು ಎಲೆಕ್ಟ್ರಾನಿಕ್ಸ್):06
ಎಲೆಕ್ಟ್ರಿಷಿಯನ್ :08
ಫಿಟ್ಟರ್ :16
ಡ್ರೈವರ್ ಕಮ್ ಫಿಟ್ಟರ್:02
ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ : 06
ಮೆಕ್ಯಾನಿಸ್ಟ್ (ಗ್ರೈಂಡರ್):02
ಎಲೆಕ್ಟ್ರಾನಿಕ್ಸ್ ಅಂಡ್ ಮೆಕ್ಯಾನಿಕ್ :03
ಸರ್ವೇಯರ್ :03
ಸೆಕ್ರೆಟರಿಯಲ್ ಅಸಿಸ್ಟೆಂಟ್ :09
ಐಟಿ ಅಂಡ್ ಐಎಸ್ಎಂಟಿ:02
ಆಟೋ ಮೆಕ್ಯಾನಿಕ್:02
ಕೆಮಿಸ್ಟ್ರಿ ಲ್ಯಾಬ್ ಅಸಿಸ್ಟೆಂಟ್:02

ಅರ್ಹತೆ

ವಿದ್ಯಾರ್ಹತೆ

  • ಶೇ.50 ಅಂಕಗಳೊಂದಿಗೆ ಮೆಟ್ರಿಕ್ಯುಲೇಷನ್ ಪಾಸ್ ಆಗಿದ್ದು ಸಂಬಂಧಪಟ್ಟ ಟ್ರೇಡ್ ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರಬೇಕು.
  • ಹನ್ನೆರಡನೇ ತರಗತಿ ಪಾಸ್ ಮಾಡಿರಬೇಕು.

ವಯೋಮಿತಿ

ಅಭ್ಯರ್ಥಿಯು ಗರಿಷ್ಟ 21 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳ ಐಟಿಐ ಮತ್ತು ಮೆಟ್ರಿಕ್ಯುಲೇಷನ್ ಶೈಕ್ಷಣಿಕ ಅಂಕಗಳ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಕೇಳಿರುವಂತೆ ಸೂಕ್ತ ದಾಖಲಾತಿಗಳೊಡನೆ ಅಂಚೆ ಮೂಲಕ 'ಜನರಲ್ ಮ್ಯಾನೇಜರ್ (ಹೆಚ್ ಆರ್)-ಐ/ಸಿ. HR/ER&HSS ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್.' ಇಲ್ಲಿಗೆ ಕಳುಹಿಸಬೇಕು.

ಕೊನೆಯ ದಿನ

ಮಾರ್ಚ್ 06 , 2017 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಒ ಎನ್ ಜಿ ಸಿ

ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್‌‌‌ ಲಿಮಿಟೆಡ್‌/ ಆಯಿಲ್‌ ಅಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೋರೇಷನ್‌ ಲಿಮಿಟೆಡ್ ‌ (ಒ ಎನ್ ಜಿ ಸಿ ) ಭಾರತದಲ್ಲಿನ ಸರ್ಕಾರಿ ಒಡೆತನದ ತೈಲ ಮತ್ತು ನೈಸರ್ಗಿಕ ಅನಿಲ ಕಂಪೆನಿಯಾಗಿದೆ. ಇದು ಫಾರ್ಚ್ಯೂನ್‌ ಗ್ಲೋಬಲ್‌ 500 ಮಟ್ಟದ ಕಂಪೆನಿಯಾಗಿದ್ದು 413, ನೇ ಶ್ರೇಯಾಂಕ ಪಡೆದಿರುವುದಲ್ಲದೇ ಭಾರತದ ಕಚ್ಚಾ ತೈಲ ಉತ್ಪಾದನೆಯ 77%ರಷ್ಟು ಮತ್ತು ಭಾರತದ ನೈಸರ್ಗಿಕ ಅನಿಲ ಉತ್ಪಾದನೆಯ 81%ರಷ್ಟು ಉತ್ಪಾದನೆಯನ್ನು ಕೊಡುಗೆಯಾಗಿ ನೀಡುತ್ತಿದೆ.ಇದು ಭಾರತದಲ್ಲೇ ಅತಿ ಹೆಚ್ಚು ಲಾಭವನ್ನು ಗಳಿಸುತ್ತಿರುವ ಸಂಸ್ಥೆ ಆಗಿದೆ.

ಈ ಸಂಸ್ಥೆಯನ್ನು ಆಗಸ್ಟ್‌‌ 1956ರಂದು ಆಯೋಗವೊಂದರ ರೂಪದಲ್ಲಿ ಸ್ಥಾಪಿಸಲಾಗಿತ್ತು. ಈ ಕಂಪೆನಿಯಲ್ಲಿ ಭಾರತ ಸರ್ಕಾರವು 74.14%ರಷ್ಟು ಈಕ್ವಿಟಿ ಹೂಡಿಕೆಯನ್ನು ಹೊಂದಿದೆ. ಒ ಎನ್ ಜಿ ಸಿ ಸಂಸ್ಥೆಯು ತೈಲನಿಕ್ಷೇಪಗಳ ಶೋಧನೆ ಹಾಗೂ ಉತ್ಪಾದನೆಯಲ್ಲಿ ತೊಡಗಿರುವ ಏಷ್ಯಾದ ಅತಿದೊಡ್ಡ ಹಾಗೂ ಬಹು ಚಟುವಟಿಕೆಯ ಕಂಪೆನಿಯಾಗಿದೆ. ಭಾರತದ ಸರಿಸುಮಾರು ಕಚ್ಚಾ ತೈಲ ಅಗತ್ಯತೆಯಲ್ಲಿ 30%ರಷ್ಟು ಉತ್ಪಾದಿಸುವ ಸಾಮರ್ಥ್ಯವನ್ನು ಈ ಸಂಸ್ಥೆಯು ಹೊಂದಿದೆ.

ಒ ಎನ್ ಜಿ ಸಿ ಸಂಸ್ಥೆಯು ಭಾರತದಲ್ಲಿ 11,000 ಕಿಲೋಮೀಟರ್‌ಗಳಿಗೂ ಮಿಕ್ಕಿರುವಷ್ಟು ದೂರದ ಕೊಳಾಯಿ ಮಾರ್ಗಗಳ ಸ್ವಾಮ್ಯವನ್ನು ಹೊಂದಿದ್ದು, ಈ ಸಂಸ್ಥೆಯು ಅವುಗಳ ಮೂಲಕ ಕಾರ್ಯಾಚರಿಸುತ್ತಿದೆ. 2010ರ ಸಾಲಿನಲ್ಲಿ, ಈ ಸಂಸ್ಥೆಯು ಅಗ್ರ 250 ಜಾಗತಿಕ ಇಂಧನಶಕ್ತಿ ಕಂಪೆನಿಗಳ ಶ್ರೇಯಾಂಕಪಟ್ಟಿಯಲ್ಲಿ 18ನೇ ಸ್ಥಾನವನ್ನು ಪಡೆದುಕೊಂಡಿತ್ತು. ಆಷ್ಟೇ ಅಲ್ಲದೇ ಸಂಸ್ಥೆಯು ವಿಶ್ವದ no.1 ಅಗ್ರಮಾನ್ಯ E&P ಕಂಪೆನಿ ಕೂಡಾ ಆಗಿದೆ

English summary
ONGC as it has released an employment notification inviting interested, eligible candidates to apply for the positions of Apprentices

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia