ದಾವಣಗೆರೆ ಡಿಸಿಸಿ ಬ್ಯಾಂಕ್ ನೇಮಕಾತಿ 2016-17

ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೀ.,ಖಾಲಿಯಿರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೀ., ದಾವಣಗೆರೆ ಇದರಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ

1 . ಕಿರಿಯ ಸಹಾಯಕರು/ ಕಿರಿಯ ಕ್ಷೇತ್ರಾಧಿಕಾರಿಗಳು: ಒಟ್ಟು ಹುದ್ದೆಗಳು 13

2 . ಅಟೆಂಡರ್ : ಒಟ್ಟು ಹುದ್ದೆಗಳು 09

ವೇತನ

1 . ಕಿರಿಯ ಸಹಾಯಕರು/ ಕಿರಿಯ ಕ್ಷೇತ್ರಾಧಿಕಾರಿಗಳು : ರೂ.29600 /-
2 . ಅಟೆಂಡರ್ : ರೂ.24000 /-

ಡಿಸಿಸಿ ಬ್ಯಾಂಕ್ ನೇಮಕಾತಿ

ವಿದ್ಯಾರ್ಹತೆ

1. ಕಿರಿಯ ಸಹಾಯಕರು/ ಕಿರಿಯ ಕ್ಷೇತ್ರಾಧಿಕಾರಿಗಳು

  • ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಪದವಿ ಪರೀಕ್ಷೆ ತೇರ್ಗಡೆಯಾಗಿರಬೇಕು.
  • ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಪದವಿಯಲ್ಲಿ ಸರಾಸರಿ ಕನಿಷ್ಠ ಶೇ.55 ಅಂಕಗಳನ್ನು ಪಡೆದಿರಬೇಕು.
  • ಪ.ಜಾ/ಪ.ಪಂ/ ಅಭ್ಯರ್ಥಿಗಳು ಪದವಿಯಲ್ಲಿ ಸರಾಸರಿ ಶೇ.50 ಅಂಕಗಳನ್ನು ಪಡೆದಿರಬೇಕು.
  • ಕಂಪ್ಯೂಟರ್ ಹಾಗೂ ಸಹಕಾರ ವಿಷಯದಲ್ಲಿ ಅಧ್ಯಯನ, ಜ್ಞಾನ ಮತ್ತು ಅನುಭವ ಪಡೆದಿರುವವರಿಗೆ ಆಧ್ಯತೆ ನೀಡಲಾಗುವುದು.
  • ಅಭ್ಯರ್ಥಿಗಳಿಗೆ ಕನ್ನಡ, ಇಂಗ್ಲಿಷ್, ಭಾಷಾ ಪರಿಜ್ಞಾನ ಹಾಗೂ ಕಂಪ್ಯೂಟರ್ ಪರಿಜ್ಞಾನ (ನಿರ್ವಹಣೆ) ಕುರಿತಂತೆ ತಿಳುವಳಿಕೆ ಕಡ್ಡಾಯವಾಗಿರುತ್ತದೆ.

2. ಅಟೆಂಡರ್

  • ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾಗಿರಬೇಕು.
  • ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಪದವಿಯಲ್ಲಿ ಸರಾಸರಿ ಕನಿಷ್ಠ ಶೇ.45 ಅಂಕಗಳನ್ನು ಪಡೆದಿರಬೇಕು.
  • ಪ.ಜಾ/ಪ.ಪಂ/ ಅಭ್ಯರ್ಥಿಗಳು ಪದವಿಯಲ್ಲಿ ಸರಾಸರಿ ಶೇ.40 ಅಂಕಗಳನ್ನು ಪಡೆದಿರಬೇಕು.
  • ಅಭ್ಯರ್ಥಿಗಳು ಪಡೆದ ಅಂಕಗಳನ್ನು ಆಧರಿಸಿ ಅರ್ಹತೆಗೆ ಪರಿಗಣಿಸಲಾಗುವುದು.

ವಯೋಮಿತಿ

ಸಾಮಾನ್ಯ ವರ್ಗ -ಕನಿಷ್ಠ 18 , ಗರಿಷ್ಠ 35
ಪ್ರವರ್ಗ-2 ಎ/ 2 ಬಿ - ಕನಿಷ್ಠ 18 , ಗರಿಷ್ಠ 38
ಪ.ಜಾ/ಪ.ಪಂ /ಪ್ರ-1 -ಕನಿಷ್ಠ 18, ಗರಿಷ್ಠ 40

ಆಯ್ಕೆ ವಿಧಾನ

ಕಿರಿಯ ಸಹಾಯಕರು
ಬ್ಯಾಂಕಿಗೆ ಬರುವ ಒಟ್ಟು ಅರ್ಜಿಗಳನ್ನು ಪರಿಶೀಲಿಸಿ, ಪದವಿಯಲ್ಲಿ ಪಡೆದ ಸರಾಸರಿ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ, 1:5 ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ನಿಗದಿಪಡಿಸಲಾದ ಅಂಕಗಳು 15. ಪದವಿಯಲ್ಲಿ ಪಡೆದ ಸರಾಸರಿ ಅಂಕಗಳನ್ನು ಶೇ.85% ಕ್ಕೆ ಇಳಿಸಿ, ಪ್ರಾಪ್ತವಾಗುವ ಅಂಕಗಳ ಜೊತೆಗೆ ಸಂದರ್ಶನದಲ್ಲಿಗಳಿಸಿದ ಅಂಕಗಳನ್ನು ಕೂಡಿಸಿ ಅರ್ಹತಾ ಪಟ್ಟಿಯನ್ನು ತಯಾರಿಸಿ ಮೀಸಲಾತಿ ನಿಯಮಗಳನ್ನು ಅನುಸರಿಸಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು.
ಅಟೆಂಡರ್
ಬ್ಯಾಂಕಿಗೆ ಬರುವ ಒಟ್ಟು ಅರ್ಜಿಗಳನ್ನು ಪರಿಶೀಲಿಸಿ, ಎಸ್ ಎಸ್ ಎಲ್ ಸಿ ಯಲ್ಲಿ ಪಡೆದ ಸರಾಸರಿ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ, 1:5 ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ನಿಗದಿಪಡಿಸಲಾದ ಅಂಕಗಳು 15. ಎಸ್ ಎಸ್ ಎಲ್ ಸಿ ಯಲ್ಲಿ ಪಡೆದ ಸರಾಸರಿ ಅಂಕಗಳನ್ನು ಶೇ.85% ಕ್ಕೆ ಇಳಿಸಿ, ಪ್ರಾಪ್ತವಾಗುವ ಅಂಕಗಳ ಜೊತೆಗೆ ಸಂದರ್ಶನದಲ್ಲಿಗಳಿಸಿದ ಅಂಕಗಳನ್ನು ಕೂಡಿಸಿ ಅರ್ಹತಾ ಪಟ್ಟಿಯನ್ನು ತಯಾರಿಸಿ ಮೀಸಲಾತಿ ನಿಯಮಗಳನ್ನು ಅನುಸರಿಸಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು.

ಅರ್ಜಿ ಶುಲ್ಕ

ಸಾಮಾನ್ಯ/ಪ್ರ.2ಎ/2ಬಿ ಅಭ್ಯರ್ಥಿಗಳಿಗೆ ರೂ.1000 /-
ಪ.ಜಾ/ಪ.ಪಂ/ಪ್ರ-1 ಅಭ್ಯರ್ಥಿಗಳಿಗೆ ರೂ.500 /-
ನಿಗದಿತ ಮೊತ್ತವನ್ನು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಖಾತೆ ಸಂಖ್ಯೆ 200001195829 (IFSC code: KSCB0701001). ಇದಕ್ಕೆ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಅಥವಾ ನಗದು ವರ್ಗಾವಣೆ /ನೆಫ್ಟ್ ಮೂಲಕ ಸಂದಾಯ ಮಾಡತಕ್ಕದ್ದು. ಅಭ್ಯರ್ಥಿಗಳು ಆನ್ಲೈನ್ ಮೂಲಕ ಸಲ್ಲಿಸಿದ ಅರ್ಜಿಯು ಅಂಗೀಕರಿಸಲ್ಪಟ್ಟ ನಂತರ ಅರ್ಜಿ ಶುಲ್ಕವನ್ನು ಬ್ಯಾಂಕ್ ಶಾಖೆಗಳಲ್ಲಿ ಪಾವತಿಸತಕ್ಕದ್ದು. ಚಲನ್ ಸಂಖ್ಯೆ ದಿನಾಂಕ ಹಾಗೂ ಬ್ರಾಂಚ್ ಕೋಡ್ ಅನ್ನು ಅಥವಾ ಇತರೆ ಬ್ಯಾಂಕಿನ ಮೂಲಕ ಪಾವತಿಸಿದಲ್ಲಿ ಅದರ NEFT No. (UTR No.) ನಮೂದಿಸಿದ ನಂತರವೇ ಅರ್ಜಿಯನ್ನು ಪರಿಗಣಿಸಲಾಗುವುದು . ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 14 -03 -2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-03-2017

ಹೆಚ್ಚಿನ ವಿವರಗಳಿಗಾಗಿ
http://recruit-app.com/ddccb2017/ ವಿಳಾಸಕ್ಕೆ ಭೇಟಿ ನೀಡಿ

ಇದನ್ನು ಗಮನಿಸಿ: ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕಿನ ವಿವಿಧ ಹುದ್ದೆಗಳ ನೇಮಕಾತಿ

For Quick Alerts
ALLOW NOTIFICATIONS  
For Daily Alerts

English summary
Online Application for Davanagere DCC Bank Recruitment 2016-17
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X