ಸೇನಾ ಶಸ್ತ್ರಾಗಾರದಲ್ಲಿ ಗ್ರೂಪ್ ಸಿ ಹುದ್ದೆಗಳ ಭರ್ತಿ

Posted By:

ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿರು ಸೇನಾ ಶಸ್ತ್ರಗಾರ ಮಂಡಳಿಯು ಗ್ರೂಪ್ ಸಿ ಹುದ್ದೆಗಳ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದೆ. ದೇಶದ ಹತ್ತು ರಾಜ್ಯಗಳಲ್ಲಿರುವ 20 ಶಸ್ತ್ರಾಗಾರದಲ್ಲಿ ಖಾಲಿ ಇರುವ ಒಟ್ಟು 4110 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ಇಂಡಸ್ಟ್ರೀಯಲ್ ಎಂಪ್ಲಾಯೀಸ್ (ಸೆಮಿ ಸ್ಕಿಲ್ಡ್) ಮತ್ತು ಲೇಬರ್ ಗ್ರೂಪ್-ಸಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 19 ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ

ಒಟ್ಟು ಹುದ್ದೆಗಳ ಸಂಖ್ಯೆ: 4,110
ವೇತನ ಶ್ರೇಣಿ: ರೂ.5200-20200/-
ಅರ್ಜಿ ಸಲ್ಲಿಸಲು ಜೂನ್ 19, 2017 ಕೊನೆ ದಿನ

ಗ್ರೂಪ್ ಸಿ ಹುದ್ದೆಗಳ ಭರ್ತಿ

ಲೇಬರ್, ಎಲೆಕ್ಟ್ರಿಷಿಯನ್, ಫಿಟ್ಟರ್, ಬಾಯ್ಲರ್ ಅಟೆಂಡೆಂಟ್, ಮಷಿನಿಸ್ಟ್, ಮಿಲ್ಲರ್, ವೆಲ್ಡರ್, ಟರ್ನರ್, ಪೇಂಟರ್, ಲೇಬರ್, ಕಾರ್ಪೆಂಟರ್, ಎಗ್ಸಾಮಿನರ್ ಸೇರಿದಂತೆ ಹಲವಾರು ಹುದ್ದೆಗಳಿಗೆ ನೇಮಕ ನಡೆಯಲಿದೆ.

ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಚಂಡೀಗಢ, ಒಡಿಶಾ, ತಮಿಳುನಾಡು, ತೆಲಂಗಾಣ, ಉತ್ತರಾಖಂಡ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳಲ್ಲಿ ಈ ಶಸ್ತ್ರಾಗಾರಗಳಿವೆ.

ಅರ್ಹತೆ

ಅರ್ಜಿ ಸಲ್ಲಿಸಲಿಚ್ಚಿಸುವ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ವಿದ್ಯಾರ್ಹತೆ ಜೊತೆಗೆ ನ್ಯಾಷನಲ್ ಕೌನ್ಸಿಲ್ ಆಫ್ ವೊಕೇಷನಲ್ ಟ್ರೈನಿಂಗ್ ನೀಡುವ ಎನ್ಎಸಿ/ಎನ್ ಟಿಸಿ ಸರ್ಟಿಫಿಕೇಟ್ ಹೊಂದಿರಬೇಕು.

ವಯೋಮಿತಿ

ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಹಾಗೂ ಗರಿಷ್ಠ 32 ವರ್ಷ. ಸರಕಾರಿ ನಿಯಮಾನುಸಾರ ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ

ಆರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಒಂದಕ್ಕಿಂತ ಹೆಚ್ಚು ಟ್ರೇಡ್ ಗಳಿಗೆ ಅವಕಾಶ ವಿರುವುದಿಲ್ಲ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.50/- ನಿಗದಿಪಡಿಸಲಾಗಿದೆ.
  • ಎಸ್.ಸಿ/ಎಸ್.ಟಿ/ಎಕ್ಸ್ ಸರ್ವಿಸ್ ಮನ್/ಅಂಗವಿಕಲರು ಮತ್ತು ಮಹಿಳೆಯರಿಗೆ ಶುಲ್ಕದಿಂದ ವಿನಾಯ್ತಿ ಇದೆ.
  • ಎಸ್ ಬಿ ಐ ಬ್ಯಾಂಕ್ ನ ಚಲನ್ ಪಡೆದು ಶುಲ್ಕ ಪಾವತಿಸಬೇಕು.

ಆಯ್ಕೆ ವಿಧಾನ

  • ಲಿಖಿತ ಪರೀಕ್ಷೆ ಹಾಗೂ ಟ್ರೇಡ್ ಟೆಸ್ಟ್ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
  • ಇಂಡಸ್ಟ್ರೀಯಲ್ ಎಂಪ್ಲಾಯೀಸ್ (ಸೆಮಿ ಸ್ಕಿಲ್ಡ್) ಹುದ್ದೆಗಳಿಗೆ ನಡೆಯುವ ಲಿಖಿತ ಪರೀಕ್ಷೆಯಲ್ಲಿ ವಸ್ತುನಿಷ್ಠ ಮಾದರಿಯ 100 ಪ್ರಶ್ನೆಗಳಿಗೆ 2 ಗಂಟೆ 40 ನಿಮಿಷಗಳಲ್ಲಿ ಅಭ್ಯರ್ಥಿಗಳು ಉತ್ತರಿಸಬೇಕು. ಇದರಲ್ಲಿ 80 ಅಂಕಗಳಿಗೆ ಎನ್ ಸಿವಿಟಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ನೀಡಲಾಗುತ್ತದೆ. ಉಳಿದ 20 ಅಂಕಗಳಿಗೆ ಜನರಲ್ ಅವೇರ್ನೆಸ್ ಹಾಗೂ ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.
  • ಲೇಬರ್ ಹುದ್ದೆಗಳಿಗೆ ನ್ಯೂಮರಿಕಲ್ ಅಪ್ಟಿಟ್ಯೂಡ್, ಜನರಲ್ ಅವೇರ್ನೆಸ್ ಹಾಗೂ ಜನರಲ್ ಸೈನ್ಸ್ ಗೆ ಸಂಬಂಧಿಸಿದಂತೆ 100 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಲು ಅಭ್ಯರ್ಥಿಗಳಿಗೆ ಎರಡು ಗಂಟೆ ಸಮಯ ನೀಡಲಾಗುತ್ತದೆ.

ಹೆಚ್ಚಿನ ವಿವರಗಳಿಗೆ: www.ofb.gov.in ಗಮನಿಸಿ

English summary
Ordnance Factories invites ONLINE applications from eligible citizens of India for filling up vacancies/posts of Semi-Skilled grade IndustrialEmployees (IEs) Group 'C' in different trades and Labour Group 'C' in various Ordnance Factories located across India.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia