ಏಳನೇ ಕ್ಲಾಸ್ ಪಾಸಾಗಿದ್ದೀರಾ... ಹಾಗಿದ್ರೆ ಈ ಸರ್ಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳಿ

Written By: Nishmitha B

ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ ಜವಾನ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ  ದಿನಾಂಕ 26.03.2018 ರಾತ್ರಿ 11.59 ಗಂಟೆ.

ಹುದ್ದೆಗಳ ವಿವರ ಜವಾನ ಹುದ್ದೆ
 ವೇತನ ಶ್ರೇಣಿ 9600-200-12000-250-13000-300-14200-350-14550

ಹುದ್ದೆಗಳ ವರ್ಗೀಕರಣ ಹೀಗಿದೆ

ಮೀಸಲಾತಿ  ಮಹಿಳೆ ಇತರೆ ಗ್ರಾಮೀಣ
ಕ.ಮಾ.ಅ ಮಾ ಸೈ ಅಂ.ಅ ಒಟ್ಟು
 ಸಾಮಾನ್ಯ 3 2 2 - 1 - 8
 ಪ್ರವರ್ಗ 2ಎ 1  1 - - - 2
 ಪ್ರವರ್ಗ 3ಎ - - - - - 1 1
 ಪ್ರವರ್ಗ 3 ಬಿ 1 - - - - - 1
 ಪರಿಶಿಷ್ಟ ಜಾತಿ 1 1 - - - - 2
 ಪರಿಶಿಷ್ಟ ಪಂಗಡ  1 - - - - 1
 ಒಟ್ಟು 6 4 3 1 1 1 15

ಶೈಕ್ಷಣಿಕ ವಿದ್ಯಾರ್ಹತೆ ?
1 ಏಳನೇ ತರಗತಿ ತೇರ್ಗಡೆ ಹೊಂದಿರಬೇಕು
2 ಕನ್ನಡ ಓದಲು ಬರೆಯಲು ತಿಳಿದಿರಬೇಕು

ವಯೋಮಿತಿ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಟ 18 ವರ್ಷ ವಯಸ್ಸು ಪೂರೈಸಿರಬೇಕು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿ ಪಡಿಸಿರುವ ಕೊನೆಯ ದಿನಾಂಕದಂದು ಗರಿಷ್ಟ ವಯಸ್ಸು
ಮೀರಿರಬಾರದು. ಗರಿಷ್ಟ ವಯೋಮಿತಿ ಇಂತಿದೆ. ಸಾಮಾನ್ಯ ವರ್ಗ : 35 ವರ್ಷ
2ಎ,2ಬಿ,3ಎ, 3ಬಿ : 38 ವರ್ಷ
ಪ/ಜಾತಿ, ಪ.ಪಂಗಡ, ಪ್ರವರ್ಗ 1: 40 ವರ್ಷ

ಅರ್ಜಿ ಶುಲ್ಕ:
ಸಾಮಾನ್ಯ ವರ್ಗ, ಪ್ರವರ್ಗ-1, ಪ್ರವರ್ಗ-2, 2 ಬಿ, 3ಎ, ಮತ್ತು 3ಬಿ ಸೇರಿದ ಅಭ್ಯರ್ಥಿಗಳಿಗೆ ರೂ.೨೦೦
ಪರಿಶಿಷ್ಟ ಜಾತಿ, ಪ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ ೧೦೦

ನಿಗದಿತ ಶುಲ್ಕವನ್ನು ನ್ಯಾಯಾಲಯದ ವೆಬ್‌ಸೈಟ್‌ ecourts.gov.in/udupi
ಮುಖಾಂತರ ಸ್ಟೇಟ್ ಬ್ಯಾಂಕ್
ಆಫ್ ಇಂಡಿಯಾದ State Bank Collect ಮೂಲಕ ಆನ್‌ಲೈನ್‌ ಪೇಮೆಂಟ್, ಕ್ರೆಡಿಟ್ ಕಾರ್ಡ್,
ಡೆಬಿಟ್ ಕಾರ್ಡ್ ಇಲ್ಲ ಚಲನ್ ಡೌನ್‌ಲೋಡ್ ಮಾಡಿ ಎಸ್‌ಬಿಐನ ಯಾವುದೇ ಶಾಖೆಗೆ ಬ್ಯಾಂಕ್
ಮೂಲಕ ಪಾವತಿಸತಕ್ಕದು. ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಯನ್ನ ತಿರಸ್ಕರಿಸಲಾಗುವುದು.
ಒಮ್ಮೆ ಕಟ್ಟಿದ ಹಣವನ್ನ ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ

ಅರ್ಜಿ ಸಲ್ಲಿಸುವ ವಿಧಾನ

ಸ್ಟೆಪ್ ೧

www.karnatakajudiciary.kar.nic.in ಈ ಲಿಂಕ್‌ಗೆ ಹೋಗಿ ಅಪ್ಲೈ ಆನ್‌ಲೈನ್ ಬಟನ್ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಕರ್ನಾಟಕದ ಮ್ಯಾಪ್‌ವೊಂದು ಕಾಣಸಿಗುತ್ತದೆ. ಇಲ್ಲಿ ಉಡುಪಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ

ಸ್ಟೆಪ್‌ ೨

ಉಡುಪಿ ರಿಕ್ರಿಟ್ಮೆಮಟ್ ಎಂದು ಬಾಕ್ಸ್ ಕಾಣಿಸುತ್ತದೆ. ಇದರಲ್ಲಿ ನೀವು ಎರಡನೇ ಬಾಕ್ಸ್‌ ಮೇಲೆ ಕ್ಲಿಕ್ ಮಾಡಿ

ಸ್ಟೆಪ್‌ ೩

ನಂತರ ಹುದ್ದೆಯ ಮಾಹಿತಿ ತೆರೆದುಕೊಳ್ಳುತ್ತದೆ. ಸೈಡ್‌ನಲ್ಲಿ ಆನ್‌ಲೈನ್ ಬಟನ್ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಲ್ಲಿ ಕೊಟ್ಟಿರುವ ಸೂಚನೆಗಳನ್ನ ಗಮನವಿಟ್ಟು ಎಚ್ಚರಿಕೆಯಿಂದ ಕಂಪ್ಲೀಟ್ ಆಗಿ ಓದಿ. ನಂತರ ಆನ್‌ಲೈನ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್‌ ೪

ಅಭ್ಯರ್ಥಿಗಳು ಸಾಮಾನ್ಯ ಸೂಚನೆ ಓದಿದ ಬಳಿಕ ಕೊನೆಯಲ್ಲಿ ನಾನು ಎಲ್ಲಾ ಸೂಚನೆಗಳನ್ನು ಒಪ್ಪಿಕೊಂಡಿರುತ್ತೇನೆ ಎಂದು ಚಿಕ್ಕ ಬಾಕ್ಸ್‌ನಲ್ಲಿ ಕ್ಲಿಕ್ ಮಾಡಿ ಆನ್‌ಲೈನ್‌ ಅರ್ಜಿಗೆ ಮುಂದುವರೆಯಲು ಅಪ್ಲೈ ಗುಂಡಿಯನ್ನ ಕ್ಲಿಕ್ ಮಾಡಿ

ಸ್ಟೆಪ್ ೫

ಆನ್‌ಲೈನ್‌ ಅರ್ಜಿ ತೆರೆದುಕೊಳ್ಳುತ್ತದೆ. ಮೊದಲಿಗೆ ನೀವು ಅರ್ಜಿ ಸಲ್ಲಿಸುತ್ತಿರುವ ಪೋಸ್ಟ್ ಇದುವೆಯಾ ಎಂದು ಮತ್ತೊಮ್ಮೆ ಚೆಕ್ ಮಾಡಿಕೊಂಡು ಖಚಿತ ಪಡಿಸಿಕೊಳ್ಳಿ

ಸ್ಟೆಪ್ ೬

ನಂತರ ಒಂದೊಂದಾಗಿ ಮಾಹಿತಿ ನೀಡುತ್ತಾ ಹೋಗಬೇಕು. ಕೆಲವೊಂದು ಬಾಕ್ಸ್‌ಗಳನ್ನು ಕಡ್ಡಾಯವಾಗಿ ಕ್ಲಿಕ್ ಮಾಡಬೇಕು.ಇನ್ನು ಹೆಸರನ್ನು ೭ನೇ ತರಗತಿ ಮಾರ್ಕ್ ಕಾರ್ಡ್‌ನಲ್ಲಿ ಇರುವಂತೆ ನಮೂದಿಸಬೇಕು

ಸ್ಟೆಪ್ ೭

ಎಲ್ಲಾ ಬಾಕ್ಸ್‌ ಫಿಲ್ ಮಾಡಿದ ನಂತರ ಮುನ್ನೋಟ ಗುಂಡಿಯನ್ನ ಕ್ಲಿಕ್ ಮಾಡಿ. ಆಗ ಅಭ್ಯರ್ಥಿಯ ಮುನ್ನೋಟ ಅರ್ಜಿಯನ್ನ ಪರದೆ ಮೇಲೆ ತೋರಸಲಾಗುತ್ತದೆ

ಸ್ಟೆಪ್ ೮

ಮುಂದೆ ಅಭ್ಯರ್ಥಿಗಳು ಕ್ಯಾಪ್ಚಾವನ್ನು ನಮೂದಿಸಬೇಕು ಮತ್ತು ವಿವರಗಳನ್ನ ಖಚಿತಪಡಿಸಬೇಕು. ಬಳಿಕ ಮುಂದುವರೆಯಲು Save & Continue ಗುಂಡಿಯನ್ನ ಕ್ಲಿಕ್ ಮಾಡಬೇಕು. ಒಂದು ವೇಳೆ ನಿಮ್ಮ ಅರ್ಜಿಯಲ್ಲಿ ಏನಾದ್ರೂ ತಿದ್ದುಪಡಿ ಇದ್ದರೆ Edit ಗುಂಡಿಯನ್ನ ಕ್ಲಿಕ್ ಮಾಡಿ. ಕೊನೆಯದಾಗಿ OK ಗುಂಡಿಯನ್ನ ಕ್ಲಿಕ್ ಮಾಡಿ .

ಸ್ಟೆಪ್ ೯

ಬಳಿಕ ಅಭ್ಯರ್ಥಿಗಳು ರಚಿತವಾದ ಉಲ್ಲೇಖ ಸಂಖ್ಯೆಯನ್ನ ಬರೆದುಕೊಂಡು ಮತ್ತು ಸ್ವೀಕೃತ ಒಟಿಪಿ ನಮೂದಿಸಬೇಕು. ನಂತರ ಮತ್ತೆ ಮುಂದುವರೆಯಲು ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ ೧೦

ಅಭ್ಯರ್ಥಿಗಳು ಶೈಕ್ಷಣಿಕ ಮಾಹಿತಿ ನೀಡಬೇಕು. ೭ನೇ ತರಗತಿ ಮಾರ್ಕ್ ಸರಿಯಾಗಿ ನಮೂದಿಸಬೇಕು. ಒಂದು ವೇಳೆ ಗ್ರೇಡ್‌ನಲ್ಲಿದ್ರೆ ಅದನ್ನು ನಂಬರ್‌ ಆಗಿ ಪರಿವರ್ತಿಸಿ ನಮೂದಿಸಬೇಕು. ಇನ್ನೂ ಹೆಚ್ಚಿನ ಶೈಕ್ಷಣಿಕ ಮಾಹಿತಿ ನೀಡಬೇಕಾದ್ರ ADD ಗುಂಡಿಯನ್ನ ಕ್ಲಿಕ್ ಮಾಡಿ. ಮತ್ತೆ ಮುಂದುವರೆಯಲು Save & Continue ಬಟನ್ ಕ್ಲಿಕ್ ಮಾಡಿ

ಸ್ಟೆಪ್೧೧

ನಂತರ ಪಾಸ್‌ಪೋರ್ಟ್ ಗಾತ್ರದ ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಬೇಕು. ಫೋಟೋ ಹಾಗೂ ಸಹಿ ೫೦ ಕೆಬಿ ಮೀರಿರಬಾರದು. ಬ್ರೌಸ್ ಬಟನ್ ಕ್ಲಿಕ್ ಮಾಡಿ ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಲು ಅಪ್‌ಲೋಡ್ ಬಟನ್ ಕ್ಲಿಕ್ ಮಾಡಿ ಸಬ್‌ಮಿಟ್ ಮಾಡಿ. ಅಪ್ಲಿಕೇಶನ್ ನಂಬರ್ ಬರೆದಿಟ್ಟುಕೊಳ್ಳಿ

ಕೊನೆಯದಾಗಿ ಸಲ್ಲಿಸಿದ ಅರ್ಜಿ ಮುದ್ರಿಸಲು ಪ್ರಿಂಟ್ ಗುಂಡಿನ್ನ ಕ್ಲಿಕ್ ಮಾಡಿ. ಅಭ್ಯರ್ಥಿಗಳು ಸಂದರ್ಶನದ ವೇಳೆ ತಮ್ಮ ಇತರ ರೆಕಾರ್ಡ್ಸಗಳ ಜತೆ ಈ ಪ್ರತಿಯನ್ನ ಕೂಡಾ ಪರಿಶೀಲನೆಗೆ ಹಾಜರುಪಡಿಸಬೇಕು.

English summary
All eligible Candidates Apply online Application for the post of peon before online before the last date

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia