ಪ್ರಸಾರ ಭಾರತಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

Posted By:

ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿಯಲ್ಲಿ ಖಾಲಿ ಇರುವ ಖಾಲಿ ಇರುವ 14 ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗಳನ್ನು ಹಂಗಾಮಿಯಾಗಿ ಭರ್ತಿ ಮಾಡಿಕೊಳ್ಳುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಒಂದು ವರ್ಷದ ಅವಧಿಯವರೆಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಹುದ್ದೆಗಳ ವಿವರ

ಸೀನಿಯರ್ ಪ್ರೊಡಕ್ಷನ್ ಎಕ್ಸಿಕ್ಯುಟಿವ್: 1 ಹುದ್ದೆ
ವಯೋಮಿತಿ: ಗರಿಷ್ಠ 40 ವರ್ಷ
ಅರ್ಹತೆ: ಪ್ರೊಡಕ್ಷನ್ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪದವಿ ಜತೆಗೆ ರೆಡಿಯೋ ಮತ್ತು ಟಿವಿ ಪ್ರೊಡಕ್ಷನ್ ನಲ್ಲಿ ಡಿಪ್ಲಮೋ ಪೂರ್ಣಗೊಳಿಸಿರಬೇಕು.
ವೇತನ: ರೂ.30000/-

ಪ್ರಸಾರ ಭಾರತಿ ನೇಮಕಾತಿ

ಕಾಪಿ ರೈಟರ್ ಕಮ್ ಕಾಪಿ ಎಡಿಟರ್: 2 ಹುದ್ದೆಗಳು
ವಯೋಮಿತಿ: ಗರಿಷ್ಠ 40 ವರ್ಷ
ಅರ್ಹತೆ: ಸಂಹವನ ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಹೊಂದಿರಬೇಕು. ಮಾಧ್ಯಮದಲ್ಲಿ ಮೂರು ವರ್ಷಗಳ ಕಾರ್ಯ ನಿರ್ವಹಿಸಿದ ಅನುಭವವಿರಬೇಕು.
ವೇತನ: ರೂ.33000/-

ಪ್ರೊಡಕ್ಷನ್ ಎಕ್ಸಿಕ್ಯೂಟಿವ್ : 5 ಹುದ್ದೆಗಳು
ವೇತನ ಶ್ರೇಣಿ: 20000 ರು. ತಿಂಗಳಿಗೆ
ವಯೋಮಿತಿ: ಗರಿಷ್ಠ 40 ವರ್ಷ.
ವಿದ್ಯಾರ್ಹತೆ: ಪ್ರೊಡಕ್ಷನ್ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪದವಿ ಜತೆಗೆ ರೆಡಿಯೋ ಮತ್ತು ಟಿವಿ ಪ್ರೊಡಕ್ಷನ್ ನಲ್ಲಿ ಡಿಪ್ಲಮೋ ಪೂರ್ಣಗೊಳಿಸಿರಬೇಕು.

ಜೂನಿಯರ್ ವಿಡಿಯೋಗ್ರಾಫರ್ : 2 ಹುದ್ದೆಗಳು
ವಯೋಮಿತಿ: ಗರಿಷ್ಠ 40 ವರ್ಷ.
ವೇತನ: ವೇತನ ಶ್ರೇಣಿ: ರೂ.20000/-
ಅರ್ಹತೆ: ವಿಡಿಯೋಗ್ರಫಿಯಲ್ಲಿ ಮೂರು ವರ್ಷಗಳ ಡಿಪ್ಲೊಮಾ ಪದವಿ ಜೊತೆಗೆ ಒಂದು ವರ್ಷದ ಸೇವಾನುಭವ ಹೊಂದಿರಬೇಕು.

ವಿಷುಯಲ್ ಗ್ರಾಫಿಕ್ ಡಿಸೈನರ್: 2 ಹುದ್ದೆಗಳು
ವಯೋಮಿತಿ: ಗರಿಷ್ಠ 40 ವರ್ಷ.
ವೇತನ: ವೇತನ ಶ್ರೇಣಿ: ರೂ.20000/-
ಅರ್ಹತೆ:ಗ್ರಾಫಿಕ್ ಡಿಪ್ಲೊಮಾ ಪದವಿ ಜೊತೆಗೆ ಒಂದು ವರ್ಷದ ಸೇವಾನುಭವ ಹೊಂದಿರಬೇಕು.

ನಿರೂಪಕರು: 1 ಹುದ್ದೆ
ವಯೋಮಿತಿ: ಗರಿಷ್ಠ 40 ವರ್ಷ.
ವೇತನ: ವೇತನ ಶ್ರೇಣಿ: ರೂ.25000/-
ಅರ್ಹತೆ:ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ, ಉತ್ತಮ ಹಿಂದಿ ಮತ್ತು ಇಂಗ್ಲಿಷ್ ಭಾಷಾ ಜ್ಞಾನದ ಜೊತೆಗೆ ನಿರೂಪಣೆಯಲ್ಲಿ ಎರಡು ವರ್ಷದ ಸೇವಾನುಭವ ಹೊಂದಿರಬೇಕು.

ಹಿರಿಯ ನಿರೂಪಕರು: 1 ಹುದ್ದೆ
ವಯೋಮಿತಿ: ಗರಿಷ್ಠ 40 ವರ್ಷ.
ವೇತನ: ವೇತನ ಶ್ರೇಣಿ: ರೂ.40000/-
ಅರ್ಹತೆ:ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ, ಉತ್ತಮ ಹಿಂದಿ ಮತ್ತು ಇಂಗ್ಲಿಷ್ ಭಾಷಾ ಜ್ಞಾನದಜೊತೆಗೆ ನಿರೂಪಣೆಯಲ್ಲ ಐದು ವರ್ಷದ ಸೇವಾನುಭವ ಹೊಂದಿರಬೇಕು.

ಕೊನೆ ದಿನಾಂಕ: ಜೂನ್ 2, 2017

ಪರೀಕ್ಷಾ ಶುಲ್ಕ: ರೂ.500/-

ಶುಲ್ಕವನ್ನು ಡಿಡಿ ಮೂಲಕ ತಲುಪಿಸತಕ್ಕದ್ದು. ಡಿ.ಡಿ ಯನ್ನು 'DDO, STI(T), AIR & DD' ಇವರ ಹೆಸರಿಗೆ ದೆಹಲಿಯಲ್ಲಿ ಸಂದಾಯವಾಗುವಂತೆ ತೆಗೆಯುವುದು,

ಅರ್ಜಿ ಸಲ್ಲಿಕೆ

ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆ ತಮ್ಮ ಬಯೋಡೇಟಾ ಜೊತೆಗೆ ಸೂಕ್ತ ದೃಢೀಕರಿಸಿದ ದಾಖಲೆಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಸಲ್ಲಿಸತಕ್ಕದ್ದು.

ಸಲ್ಲಿಸಬೇಕಾದ ವಿಳಾಸ

ಹೆಚ್ಚುವರಿ ನಿರ್ದೇಶಕರು (ತರಬೇಟಿ)
ನ್ಯಾಷನಲ್ ಅಕಾಡೆಮಿ ಆಫ್ ಬ್ರಾಡ್ಕ್ಯಾಸ್ಟಿಂಗ್ ಅಂಡ್ ಮಲ್ಟಿಮೀಡಿಯಾ
ರೇಡಿಯೋ ಕಾಲನಿ, ಕಿಂಗ್ಸ್ ವೇ ಕ್ಯಾಂಪ್
ದೆಹಲಿ- 110009

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
National Academy of Broadcasting & Multimedia, Kingsway, Delhi invites application from young dynamic persons for engaging them against various positions on contractual basis for supporting the DD Kisan Channel. The contract will be for one year.
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia