ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ನೇಮಕಾತಿ ಪ್ರಕ್ರಿಯೆ, ವೇತನ ಮತ್ತು ವಯೋಮಿತಿ ವಿವರ

Posted By:

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪದವೀಧರರ ಶಿಕ್ಷಕರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಅಭ್ಯರ್ಥಿಗಳ ವೆಯಿಟೆಜ್ ಮತ್ತು ಡೆರೈವ್ಡ್ ಪರ್ಸೆಂಟೆಜ್ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ, ವೇತನ ಮತ್ತು ವಯೋಮಿತಿ ವಿವರಗಳು ಈ ಕೆಳಕಂಡಂತಿದೆ.

ವಯೋಮಿತಿ

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 21 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.
ಗರಿಷ್ಠ ವಯೋಮಿತಿ:

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 40 ವರ್ಷ
  • 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: 43 ವರ್ಷ
  • ಪ.ಜಾ/ಪ.ಪಂ/ಪ್ರವರ್ಗ-1/ ವಿಕಲಚೇತನ ಅಭ್ಯರ್ಥಿಗಳಿಗೆ: 45 ವರ್ಷ

ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8 ನೇ ತರಗತಿ) ಹುದ್ದೆಗಳಿಗೆ ಸಂಬಂಧಿಸಿದಂತೆ
ವೇತನ ಶ್ರೇಣಿ : ರೂ.14550 - 26700/-

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ

ಮೆರಿಟ್ ನಿರ್ಧರಿಸುವ ವಿಧಾನ

6-8 ನೇ ತರಗತಿ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ ಆಯ್ಕೆ ಪ್ರಾಧಿಕಾರವು ನೇಮಕಾತಿಗೆ ವಿಷಯವಾರು ಮತ್ತು ಮಾಧ್ಯಮವಾರು ಹಾಗೂ ಪ್ರವರ್ಗವಾರು ಅಧಿಸೂಚಿಸಿದ ಹುದ್ದೆಗಳಿಗೆ ಅನುಸಾರವಾಗಿ ಸ್ಪರ್ಧಾತ್ಮಕ ಪರೀಕ್ಷೆ, ಟಿ.ಇ.ಟಿ ಪರೀಕ್ಷೆ, ಪದವಿ ಶಿಕ್ಷಣ ಮತ್ತು ಶಿಕ್ಷಕರ ಶಿಕ್ಷಣ ಕೋರ್ಸ್‍ನಲ್ಲಿ ಪಡೆದ ಶೇಕಡವಾರು ಅಂಕಗಳನ್ನು ಆಧರಿಸಿ ಈ ಕೆಳಗೆ ವಿವರಿಸಿದಂತೆ ವೆಯಿಟೇಜ್ (weightage) ಉಪಯೋಗಿಸಿ derived percentage ಲೆಕ್ಕಹಾಕಿ ಅದರ ಆಧಾರದ ಮೇಲೆ ಪ್ರತ್ಯೇಕವಾಗಿ ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುವುದು.

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಅಭ್ಯರ್ಥಿಗಳ ವಿದ್ಯಾರ್ಹತೆ ವಿವರ

derived percentage ಲೆಕ್ಕಹಾಕಲು ಅಭ್ಯರ್ಥಿಯು ಡಿಪ್ಲೊಮ ಇನ್ ಎಲಿಮೆಂಟರಿ ಎಜುಕೇಶನ್ ಅಥವಾ ಬಿ.ಇಡಿ ಅಥವಾ ಡಿಪ್ಲೊಮ ಇನ್ ಸ್ಪೆಷಲ್ ಎಜುಕೇಶನ್ ಅಥವಾ ಬಿ.ಇಡಿ (ಸ್ಪೆಷಲ್ ಎಜುಕೇಶನ್) ವಿದ್ಯಾರ್ಹತೆ ಹೊಂದಿದ್ದಲ್ಲಿ ಕೆಳಗಿನಂತೆ ವೆಯಿಟೇಜ್ (weightage) ನ್ನು ಪರಿಗಣಿಸಲಾಗುವುದು.

  • ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ-0.35
  • ಟಿ.ಇಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳ-0.15
  • ಪದವಿಯಲ್ಲಿ ಪಡೆದ ಅಂಕಗಳ-0.25
  • ಶಿಕ್ಷಕರ ಶಿಕ್ಷಣ ಕೋರ್ಸ್‍ನಲ್ಲಿ ಪಡೆದ ಅಂಕಗಳ-0.25

derived percentage ಲೆಕ್ಕಹಾಕಲು ಅಭ್ಯರ್ಥಿಯು ನಾಲ್ಕು ವರ್ಷಗಳ ಶಿಕ್ಷಕರ ಶಿಕ್ಷಣ ಪದವಿಯನ್ನು ಹೊಂದಿದ್ದಲ್ಲಿ ವೆಯಿಟೇಜ್‍ನ್ನು ಈ ಮುಂದಿನಂತೆ ಪರಿಗಣಿಸಲಾಗುವುದು

  • ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ-0.35
  • ಟಿ.ಇಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳ-0.15
  • ನಾಲ್ಕು ವರ್ಷಗಳ ಬಿ.ಎಲ್.ಇಡಿ, ಅಥವಾ ಬಿಎ/ಬಿಎಸ್ಸಿಇಡಿ ಅಥವಾ ಬಿಎಇಡಿ ಅಥವಾ ಬಿಎಸ್ಸಿಇಡಿ. ಪದವಿಯಲ್ಲಿ ಪಡೆದ ಅಂಕಗಳ-0.50

ಮೇಲೆ ಹೇಳಿದ ಪ್ರಕಾರ ವೆಯಿಟೇಜ್‍ನ್ನು ಲೆಕ್ಕ ಹಾಕಿದಾಗ ಮೆರಿಟ್ ಪಟ್ಟಿಯಲ್ಲಿ ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳು ಸಮಾನವಾದ derived percentage ಅಂಕಗಳನ್ನು ಪಡೆದಲ್ಲಿ ವಯಸ್ಸನ್ನು ಆಧರಿಸಿ ವಯಸ್ಸಿನಲ್ಲಿ ಹಿರಿಯರಾದವರನ್ನು ಮೆರಿಟ್ ಪಟ್ಟಿಯಲ್ಲಿ ವಯಸ್ಸಿನಲ್ಲಿ ಕಿರಿಯರಿಗಿಂತ ಮೊದಲು ಪರಿಗಣಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Higher primary school teacher recruitment selection procedure, age, salary details.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia