ಸ್ಕೌಟ್ ಅಂಡ್ ಗೈಡ್ಸ್ ಕೋಟ ಅಡಿಯಲ್ಲಿ ನೇಮಕಾತಿ

Posted By:

ನೈಋತ್ಯ (ಸೌತ್ ವೆಸ್ಟೆರ್ನ್) ರೈಲ್ವೆಯು 2017 ನೇ ಸಾಲಿನ ನೇಮಕಾತಿಯಲ್ಲಿ 9 ಹುದ್ದೆಗಳನ್ನು ಸ್ಕೌಟ್ ಅಂಡ್ ಗೈಡ್ಸ್ ಕೋಟ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ.

ರೈಲ್ವೇ ನೇಮಕಾತಿ

ಶಿಕ್ಷಣದ ಜೊತೆಗೆ ಸ್ಕೌಟ್ ಅಂಡ್ ಗೈಡ್ಸ್ ನಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ನೈಋತ್ಯ ರೈಲ್ವೇ ಇಲಾಖೆಯು ಉದ್ಯೋಗಾವಕಾಶ ಕಲ್ಪಿಸಿದೆ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗೆ ಆಹ್ವಾನಿಸಿದೆ.  ಆಸಕ್ತ ಅಭ್ಯರ್ಥಿಗಳು ಮಾರ್ಚ್ 06,2017 ರ ಒಳಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ

ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಂದ 10/12/ ಐಟಿಐ ಹೊಂದಿರಬೇಕು

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500/-
ಎಸ್.ಸಿ/ಎಸ್.ಟಿ/ಮಹಿಳಾ/ಅಲ್ಪಸಂಖ್ಯಾತ/ಅಂಗವಿಕಲ ಅಭ್ಯರ್ಥಿಗಳು ರೂ.250/-

ವಯೋಮಿತಿ

ಜನವರಿ 01,2017 ಕ್ಕೆ ಅಭ್ಯರ್ಥಿಯು 18 ವರ್ಷ ಪೂರೈಸಿರಬೇಕು, ಗರಿಷ್ಟ 29 ವರ್ಷ
ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳಿಗೆ ಎಸ್ ಡಬ್ಲ್ಯೂ ಆರ್ ನಿಯಮದ ಪ್ರಕಾರ ಸಡಿಲಿಕೆ ಇರಲಿದೆ.

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.5200 -20200 + 1900 /1800 /- ಸಿಗಲಿದೆ

ಆಯ್ಕೆ ವಿಧಾನ

ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಆಯ್ಕೆ ಸಮಿತಿಯ ಕೌಶಲ್ಯ ಪರೀಕ್ಷೆ ಇರಲಿದೆ.

ಅರ್ಜಿ ಸಲ್ಲಿಸುವ ವಿಧಾನ

* ಆಸಕ್ತರು ರೈಲ್ವೆ ಅಧಿಕೃತ ವೆಬ್ಸೈಟ್ ವಿಳಾಸ http://rrchubli.in ಭೇಟಿ ಮಾಡಬೇಕು
* ವೆಬ್ಸೈಟ್ ನಲ್ಲಿ ಪ್ರಕಟವಾಗಿರುವ ಉದ್ಯೋಗ ಜಾಹೀರಾತು ಮತ್ತು ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು
* ಅರ್ಜಿಯಲ್ಲಿ ತಪ್ಪಿಲ್ಲದಂತೆ ಸಂಪೂರ್ಣ ಭರ್ತಿ ಮಾಡಿ ಕೇಳಿರುವ ದಾಖಲೆಗಳನ್ನು ಅರ್ಜಿಯ ಜೊತೆ ಲಗತ್ತಿಸಬೇಕು.
* ಸಂಪೂರ್ಣ ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್ 06,2017 ರ ಒಳಗೆ ನೀಡಿರುವ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು

ಅರ್ಜಿ ಸಲ್ಲಿಸುವ ವಿಳಾಸ

The Assisatant Personnel Officer , Office of the Chief Personnel Officer , South Western Railway , General Manager 's Building , Gadag Road , Hubli -580020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಮಾರ್ಚ್ 06,2017
ಹೆಚ್ಚಿನ ಮಾಹಿತಿಗಾಗಿ: www.rrchubli.in

English summary
south western railway recruiting under scout and guides quota

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia