ಎಸ್ ಎಸ್ ಎಲ್ ಸಿ ಆದವರಿಗೆ ಆರ್ ಬಿ ಐ ನಲ್ಲಿ ಉದ್ಯೋಗಾವಕಾಶ

526 ಹುದ್ದೆಗಳ ಪೈಕಿ ಬೆಂಗಳೂರು ಕೇಂದ್ರದಲ್ಲಿ 58 ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 07 ರ ಒಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಖಾಲಿ ಇರುವ 526 ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯು ರಾಷ್ಟ್ರಾದ್ಯಂತ ನಡೆಯುವ ಆನ್ಲೈನ್ ಸ್ಪರ್ಧಾ ಪರೀಕ್ಷೆ ಮತ್ತು ಭಾಷಾ ಕುಶಲತೆ ಪರೀಕ್ಷೆಯ ಮೂಲಕ ನಡೆಯಲಿದೆ.

526 ಹುದ್ದೆಗಳ ಪೈಕಿ ಬೆಂಗಳೂರು ಕೇಂದ್ರದಲ್ಲಿ 58 ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 07 ರ ಒಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

 ಆರ್ ಬಿ ಐ ನೇಮಕಾತಿ

ಹುದ್ದೆಗಳ ವಿವರ

ಹುದ್ದೆ: ಆಫೀಸ್ ಅಟೆಂಡೆಂಟ್
ಒಟ್ಟು ಹುದ್ದೆಗಳು: 526
ವೇತನ ಶ್ರೇಣಿ: ರೂ.10940 ರಿಂದ 23700

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಎಸ್ ಎಸ್ ಎಲ್ ಸಿ (ಹತ್ತನೇ ತರಗತಿ) ಪೂರ್ಣಗೊಳಿಸಿರಬೇಕು

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ಆನ್-ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.450/-
  • ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.50/-

ವಯೋಮಿತಿ

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 35 ವರ್ಷಗಳು.
(ಒಬಿಸಿ ವರ್ಗದವರಿಗೆ ಮೂರು ವರ್ಷ ಮತ್ತು ಎಸ್.ಸಿ/ಎಸ್.ಟಿ/ಪ್ರ-1 ರ ಅಭ್ಯರ್ಥಿಗಳಿಗೆ ಐದು ವರ್ಷಗಳ ಸಡಿಲಿಕೆ ಇದೆ)

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪರೀಕ್ಷಾ ವಿವರ

ಪರೀಕ್ಷೆಯು ಸಾಮಾನ್ಯ ಪತ್ರಿಕೆಯನ್ನು ಹೊಂದಿದ್ದು ಸಾಮಾಜ್ಯ ಜ್ಞಾನ, ಇಂಗ್ಲಿಷ್ ಭಾಷಾ ಜ್ಞಾನ, ರೀಸನಿಂಗ್ ವಿಷಯಗಳ ಮೇಲೆ ಕೇಳಲಾಗುತ್ತದೆ.

ಪತ್ರಿಕೆ 120 ಅಂಕಗಳದಾಗಿದ್ದು, ಉತ್ತರಿಸಲು 90 ನಿಮಿಷ ಕಾಲಾವಕಾಶ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 17-11-2017
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-12-2017
  • ಆನ್ಲೈನ್ ಪರೀಕ್ಷೆ ನಡೆಯುವ ದಿನಾಂಕ: ಡಿಸೆಂಬರ್ 2017/ ಜನವರಿ 2018

ಬೆಂಗಳೂರು ಆರ್ ಬಿ ಐ ವಿಳಾಸ

10/3/08, ನೃಪತುಂಗ ರಸ್ತೆ,
ಬೆಂಗಳೂರು-560001

ಇನ್ನು ಹೆಚ್ಚಿನ ವಿವರಣೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Reserve Bank of India invites applications from eligible candidates for 526 posts of “Office Attendants” in various offices of the Bank. Selection for the post will be through a country-wide competitive Test (Online Test) followed by Language Proficiency Test.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X