ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳ ನೇಮಕಾತಿ

Posted By:

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆರ್ ಬಿ ಐ ನಲ್ಲಿ 19 ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು ಆನ್ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಆರ್ ಬಿ ಐ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ.

ಆರ್ ಬಿ ಐ ಮಹಾರಾಷ್ಟ್ರದಲ್ಲಿರುವ 19 ಮ್ಯಾನೇಜರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳು ದಿನಾಂಕ 16 -03 -2017 ರ ಒಳಗೆ ಅರ್ಜಿಗಳನ್ನೂ ಭರ್ತಿ ಮಾಡಿ ಅಂಚೆ ಮೂಲಕ ತಲುಪಿಸಬೇಕಾಗಿ ತಿಳಿಸಲಾಗಿದೆ.

ಆರ್ ಬಿ ಐ ನಲ್ಲಿ 19  ಮ್ಯಾನೇಜರ್ ಹುದ್ದೆಗಳು

ಹುದ್ದೆಯ ವಿವರ

ಮ್ಯಾನೇಜರ್

1 . ಮ್ಯಾನೇಜರ್ (ಟೆಕ್ನಿಕಲ್ ಗ್ರೇಡ್ ಬಿ)-02
2 . ಅಸಿಸ್ಟೆಂಟ್ ಮ್ಯಾನೇಜರ್ (ರಾಜಭಾಷಾ) ಗ್ರೇಡ್ ಎ -10
3 . ಅಸಿಸ್ಟೆಂಟ್ ಮ್ಯಾನೇಜರ್ (ಸೆಕ್ಯೂರಿಟಿ) ಗ್ರೇಡ್ ಎ-10
ಒಟ್ಟು ಹುದ್ದೆಗಳು : 19

ವಿಭಾಗ : ಮಹಾರಾಷ್ಟ್ರ

ವಿದ್ಯಾರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲದಿಂದ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.

ವಯೋಮಿತಿ

ಆರ್ ಬಿ ಐ ನಿಯಮಾನುಸಾರ ಅಭ್ಯರ್ಥಿಯ ವಯಸ್ಸು ಮತ್ತು ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. ಇದರ ಪೂರ್ಣ ವಿವರಗಳಿಗಾಗಿ ಆರ್ ಬಿ ಐ ವೆಬ್ಸೈಟ್ ವಿಳಾಸ ಗಮನಿಸತಕ್ಕದ್ದು.

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ

1.ಅಭ್ಯರ್ಥಿಗಳು ಆರ್ ಬಿ ಐ ಬ್ಯಾಂಕ್ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಬೇಕು.
2.ವೆಬ್ಸೈಟ್ ನಲ್ಲಿ ಪ್ರಕಟವಾಗಿರುವ ಜಾಹೀರಾತನ್ನು ಗಮನವಿಟ್ಟು ಸಂಪೂರ್ಣವಾಗಿ ಓದಿ
3.ಆನ್ಲೈನ್ ಅರ್ಜಿಯಲ್ಲಿ ಶೈಕ್ಷಣಿಕ ಮತ್ತು ವೈಯಕ್ತಿಕ ದಾಖಲೆಗಳ ವಿವರವನ್ನು ತಪ್ಪಿಲ್ಲದಂತೆ ತುಂಬಿ, ಹಾಗೂ ನಿಮ್ಮ ಇತ್ತೀಚಿನ ಭಾವಚಿತ್ರ ಮತ್ತು ಸಹಿಯ ಸ್ಕ್ಯಾನ್ ಇಮೇಜ್ ಅನ್ನು ಅಪ್ಲೋಡ್ ಮಾಡಿ.
4. ಅರ್ಜಿಯನ್ನು ತುಂಬಿದ ನಂತರ ಒಮ್ಮೆ ಪರಿಶೀಲಿಸಿ
5.ಅರ್ಜಿಯ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದ ನಂತರ ಸೇವ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
6.ಪ್ರಿಂಟ್ ತೆಗೆದ ಅರ್ಜಿಯ ಜೊತೆ ವೆಬ್ಸೈಟ್ ನಲ್ಲಿ ಕೇಳಲಾಗಿರುವ ಎಲ್ಲಾ ಸೂಕ್ತ ದಾಖಲೆಗಳನ್ನು ಅದರೊಂದಿಗೆ ಲಗತ್ತಿಸಿ ಅಂಚೆ ಮೂಲಕ ಆರ್ ಬಿ ಐ, ಸರ್ವಿಸ್ ಬೋರ್ಡ್ ಆಫೀಸ್ ವಿಳಾಸಕ್ಕೆ ಕೊನೆಯ ದಿನಾಂಕದ ಒಳಗೆ ತಲುಪಿಸಿ.

ಪ್ರಮುಖ ದಿನಾಂಕಗಳು

ಆನ್ಲೈನ್ ಪ್ರಕ್ರಿಯೆ ಆರಂಭವಾಗುವ ದಿನಾಂಕ: 01 -03 -2017
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನ: 16 -03 -2017
ಅಂಚೆ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ: 22 -03 -2017

ಹೆಚ್ಚಿನ ಮಾಹಿತಿಗಾಗಿ: https://www.rbi.org.in/

English summary
RBI has invited application to fill 19 manager posts

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia