RDPR Recruitment 2019: 35 ಸಮಾಲೋಚಕ ಹುದ್ದೆಗಳ ನೇಮಕಾತಿ..ಆಸಕ್ತರು ಅಕ್ಟೋಬರ್ 14ರೊಳಗೆ ಅರ್ಜಿ ಹಾಕಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಜಿಲ್ಲೆಗಳಲ್ಲಿ ಖಾಲಿ ಇರುವ 35 ಸಮಾಲೋಚಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಅಕ್ಟೋಬರ್ 14,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 35 ಸಮಾಲೋಚಕ ಹುದ್ದೆಗಳಿಗೆ ಅರ್ಜಿ ಆಹ್ವಾನ

CRITERIA DETAILS
Name Of The Posts ಸಮಾಲೋಚಕ
Organisation ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
Educational Qualification ಬಿ.ಇ,ಎಂಸಿಎ/ಎಂ.ಎ/ಎಂ.ಎಸ್ಸಿ, ಗ್ರಾಜುಯೇಟ್ ಪದವಿ,ಎಂ.ಎಸ್, ಎಂಎಸ್‌ಡಬ್ಲ್ಯೂ/ ಪೋಸ್ಟ್ ಗ್ರಾಜುಯೇಟ್
Job Location ಕರ್ನಾಟಕ
Salary Scale ತಿಂಗಳಿಗೆ 22,000/-ರೂ
Application Start Date September 24, 2019
Application End Date October 14, 2019

ಹುದ್ದೆಗಳ ವಿವರ ಮತ್ತು ಕೇಳಲಾಗಿರುವ ವಿದ್ಯಾರ್ಹತೆ :

* ಮಾನವ ಸಂಪನ್ಮೂಲ ಅಭಿವೃದ್ಧಿ- ಎಂ.ಎಸ್‌.ಡಬ್ಲ್ಯೂ/ಎಂ.ಎ / ಗ್ರಾಮೀಣ ಅಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿ
* ಮಾಹಿತಿ ಶಿಕ್ಷಣ ಹಾಗೂ ಸಂವಹನ - ಎಂ.ಎಸ್.ಕಮ್ಯುನಿಕೇಶನ್ / ಎಂ.ಎ (ಪತ್ರಿಕೋದ್ಯಮ)
ನೈರ್ಮಲ್ಯ ಹಾಗೂ ಶುಚಿತ್ವ - ಗ್ರಾಜುಯೇಟ್ ಪದವಿ (ಇಂಜಿನಿಯರಿಂಗ್/ ಸಮಾಜ ವಿಜ್ಞಾನ/ ಪಬ್ಲಿಕ್ ಹೆಲ್ತ್ / ರೂರಲ್‌ ಮ್ಯಾನೇಜ್ಮೆಂಟ್‌)
* ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ - ಎನ್ವಿರಾನ್ಮೆಂಟಲ್‌ ಇಂಜಿನಿಯರಿಂಗ್‌ನಲ್ಲಿ ಬಿ.ಇ / ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ ಜೊತೆಗೆ ಎನ್ವಿರಾನ್ಮೆಂಟಲ್‌ ಸೈನ್ಸ್‌ ಅನ್ನು ಸ್ಪೆಷಲೈಸೇಶನ್‌ ಆಗಿ ಅಧ್ಯಯನ ಮಾಡಿರಬೇಕು.
* ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ- ಎಂ.ಸಿ.ಎ /ಎಂ.ಎ ಎಕನಾಮಿಕ್ಸ್ / ಸ್ಟಾಟಿಸ್ಟಿಕ್ಸ್, ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ / ಬಿ.ಇ ಕಂಪ್ಯೂಟರ್ ಸೈನ್ಸ್

ವಯೋಮಿತಿ :

ಈ ಹುದ್ದೆಗಳಿಗೆ ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ ಗರಿಷ್ಟ 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ :

ಸಮಾಲೋಚಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 22,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ :

ಅರ್ಜಿಸಲ್ಲಿಸಿದ ಅಭ್ಯರ್ಥಿಗಳ ಕಿರುಪಟ್ಟಿ ಮಾಡಲಾಗುವುದು ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ-ಮೇಲ್ /ದೂರವಾಣಿ ಮುಖಾಂತರ ತಿಳಿಸಲಾಗುವ ದಿನಾಂಕ ಮತ್ತು ವೇಳೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಇಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.

ಅರ್ಜಿ ಶುಲ್ಕ :

ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ ? :

ಸಮಾಲೋಚಕ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ http://rdpr.kar.nic.in/english/index.asp ಗೆ ಭೇಟಿ ನೀಡಿ ನಿಗದಿತ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಮಾಹಿತಿಯನ್ನು ಭರ್ತಿ ಮಾಡಿ, ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ ಮತ್ತು ಅನುಭವಗಳ ದಾಖಲೆಗಳನ್ನು ಲಗತ್ತಿಸಿ ಅರ್ಜಿಯನ್ನು ರಿಜಿಸ್ಟರ್ಡ್ ಪೋಸ್ಟ್ / ಸ್ಪೀಡ್ ಪೋಸ್ಟ್ / ಕೊರಿಯರ್ ಮುಖಾಂತರ ಕಚೇರಿಗೆ ಅಕ್ಟೋಬರ್ 14,2019ರೊಳಗೆ ತಲುಪಿಸಬೇಕಿರುತ್ತದೆ.

ಕಚೇರಿಯ ವಿಳಾಸ :

ಆಯುಕ್ತರು,
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,
2ನೇ ಮಹಡಿ, 'ಇ' ಬ್ಲಾಕ್,
ಕೆ.ಹೆಚ್‌.ಬಿ ಕಾಂಪ್ಲೆಕ್ಸ್,
ಕಾವೇರಿ ಭವನ,
ಬೆಂಗಳೂರು-560009

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 35 ಸಮಾಲೋಚಕ ಹುದ್ದೆಗಳಿಗೆ ಅರ್ಜಿ ಆಹ್ವಾನ
For Quick Alerts
ALLOW NOTIFICATIONS  
For Daily Alerts

English summary
RDPR Karnataka Recruitment 2019-20:Apply for 35 Consultant vacancies. Department of Rural Drinking Water and Sanitation, Rural Development & Panchayat Raj Department Karnataka (RDPR Karnataka) invited applications from eligible and interested candidates to fill up Consultant Posts through RDPR Karnataka official notification September 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X