ಆಯುಷ್ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

Posted By:

ಕೋಲಾರ ಜಿಲ್ಲೆಯಲ್ಲಿ ಮೇಲ್ದರ್ಜೆಗೇರಿಸಿದ ಆಯುಷ್ ಆಸ್ಪತ್ರೆಗಳಿಗೆ ಅವಶ್ಯವಿರುವ ತಜ್ಞ ವೈದ್ಯರು/ ಅರೆ ವೈದ್ಯಕೀಯ ಸಿಬ್ಬಂದಿ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಅರ್ಜಿಗಳನ್ನು ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ, ಎಸ್ ಎನ್ ಆರ್ ಆಸ್ಪತ್ರೆ ಆವರಣ ಕೋಲಾರ ಇವರಿಂದ ದಿನಾಂಕ 24-06-2017 ರವರೆಗೆ ಸಾಯಂಕಾಲ 4.30 ಗಂಟೆಯೊಳಗೆ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-06-2017

ಹುದ್ದೆಗಳ ವಿವರ

ಹೋಮಿಯೋಪತಿ ತಜ್ಞ ವೈದ್ಯರು-02 ಹುದ್ದೆಗಳು
ವೇತನ: ರೂ.33000/-
ವಿದ್ಯಾರ್ಹತೆ: ಹೋಮಿಯೋಪತಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು

ಆಯುಷ್ ಆಸ್ಪತ್ರೆ ನೇಮಕಾತಿ

ಆಯುರ್ವೇದ ತಜ್ಞ ವೈದ್ಯರು-02 ಹುದ್ದೆಗಳು
ವೇತನ: ರೂ.33000/-
ವಿದ್ಯಾರ್ಹತೆ: ಆಯುರ್ವೇದ ಪದ್ದತಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು

ಔಷಧಿ ವಿತರಕರು-04 ಹುದ್ದೆಗಳು
ವೇತನ: ರೂ.14350/-
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿದ್ದು, ಔಷಧಿ ವಿಜ್ಞಾನದಲ್ಲಿ ಡಿಪ್ಲೊಮಾ ಹೊಂದಿರಬೇಕು

ಆಯುಷ್ ಮಸಾಜಿಸ್ಟ್-04 ಹುದ್ದೆಗಳು
ವೇತನ: ರೂ.10300/-
ವಿದ್ಯಾರ್ಹತೆ: ಕನಿಷ್ಠ 7ನೇ ತರಗತಿ ವಿದ್ಯಾರ್ಹತೆ ಹಾಗೂ ಆಯುಷ್ ಆಸ್ಪತ್ರೆ/ ಚಿಕಿತ್ಸಾಲಯಗಳಲ್ಲಿ ಮಸಾಜಿಸ್ಟ್ ಗಳಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು

ಕ್ಷಾರ ಸೂತ್ರ ಅಟೆಂಡರ್- 02 ಹುದ್ದೆಗಳು
ವೇತನ: ರೂ.10300/-
ವಿದ್ಯಾರ್ಹತೆ: ಕನಿಷ್ಠ 10ನೇ ತರಗತಿ ವಿದ್ಯಾರ್ಹತೆ ಹಾಗೂ ಆಯುಷ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು

ಸ್ತ್ರೀ ರೋಗ ಅಟೆಂಡರ್-02 ಹುದ್ದೆಗಳು
ವೇತನ: ರೂ.10300/-
ವಿದ್ಯಾರ್ಹತೆ: ಕನಿಷ್ಠ 10ನೇ ತರಗತಿ ವಿದ್ಯಾರ್ಹತೆ ಹಾಗೂ ಆಯುಷ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು

ಸೂಚನೆ

  • ಈ ಹುದ್ದೆಗಳಿಗೆ ವಯಸ್ಸು ಸರ್ಕಾರವು ನಿಗಧಿಪಡಿಸಿರುವ ವಯೋಮಿತಿಯಲ್ಲಿರಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ಮೂಲಕ ನೇಮಕಾತಿ ಮಾಡಲಾಗುವುದು.
  • ಎಲ್ಲಾ ಹುದ್ದೆಗಳು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ಹುದ್ದೆಗಳಾಗಿದ್ದು ಎಲ್ಲಾ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.

English summary
Applications are invited from the eligible candidates to fill the posts in Kolar Ayush hospital. These posts are temporary and candidates can apply before June 29.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia