ನಿಮಾನ್ಸ್ ನಲ್ಲಿ ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸಸ್ ಬೆಂಗಳೂರು ಇದು ಜೆಆರ್ ಎಫ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ನಿಮಾನ್ಸ್ ನಲ್ಲಿ  ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

ಹುದ್ದೆಯ ಹೆಸರುಜ್ಯೂನಿಯರ್ ರಿಸರ್ಚ್ ಫೆಲೋ 
 ಹುದ್ದೆ ಸಂಖ್ಯೆ 1
 ವೇತನ ತಿಂಗಳಿಗೆ 25,000 ರೂ ಜತೆಗೆ 30% ಹೆಚ್‌ಆರ್
 ಉದ್ಯೋಗ ಸ್ಥಳ  ನಿಮಾನ್ಸ್, ಬೆಂಗಳೂರು, ತೀರ್ಥಹಳ್ಳ, ಕರ್ನಾಟಕ
 ಫೀಲ್ಡ್ ವಿಸಿಟ್ ಹೌದು
 ಹುದ್ದೆಯು ಇದನ್ನೆಲ್ಲಾ ಒಳಗೊಂಡಿದೆ  1. ಪ್ರಾಜೆಕ್ಟ್ ವರ್ಕ್ ಇರುತ್ತದೆ
2. ರಿಸರ್ಚ್ ಆಕ್ಟಿವಿಟಿ ವರ್ಕ್ ಇರುತ್ತದೆ
3. ರೋಗಿಗಳನ್ನ ಪ್ರತಿದಿನ ಚೆಕಪ್ ಮಾಡಬೇಕು
4.ರೈಟಿಂಗ್ ಲೆಟರ್
5. ತೀರ್ಥಹಳ್ಳಿಯಲ್ಲಿ ನೆಲೆಸಲು ತಯಾರಿರಬೇಕು
 ವಿದ್ಯಾರ್ಹತೆ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದು ಡಿಗ್ರಿ ಇರಲೇಬೇಕು
1 ಸೊಶಲ್ ವರ್ಕ್‌ನಲ್ಲಿ ಎಂಎ/ ಎಂಎಸ್ ಡಬ್ಲ್ಯು ಪದವಿ
2 ಎಂಎ ಇನ್ ಸೈಕಾಲಾಜಿ
3 ಎಂಎಸ್‌ಸಿ ಇನ್ ಕ್ಲಿನಿಕಲ್ ಸೈಕಾಲಾಜಿ
4 ಎಂಎಸ್‌ಸಿ ಇನ್ ಸೈಕೋಸೋಶಿಯಲ್ ರಿಹಬ್
5 ಬಿಎ ಇನ್ ಸೋಶಲ್ ವರ್ಕ್
 ಗರಿಷ್ಟ ವಯೋಮಿತಿ  35 ವರ್ಷ
 ಕಾಲಾವಧಿ  1 ವರ್ಷ

ಅಭ್ಯರ್ಥಿಯನ್ನ ಮೊದಲಿಗೆ 6 ತಿಂಗಳಿಗೆ ನೇಮಕ ಮಾಡಲಾಗುವುದು ಬಳಿಕ ಆಭ್ಯರ್ಥಿಯ ಕಾರ್ಯವೈಖರಿ ಗಮನಿಸಿ ಅಭ್ಯರ್ಥಿಯ ಕೆಲಸದ ಅವಧಿಯನ್ನ ಮುಂದೂಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಒಂದು ಬಿಳಿ ಹಾಳೆಯಲ್ಲಿ ಅಭ್ಯರ್ಥಿಯು ತನ್ನ ಬಯೋಡಾಟ, ವಯಸ್ಸಿನ ಪ್ರೂಫ್, ವಿದ್ಯಾರ್ಹತೆಯ ಬಗ್ಗೆ ನಮೂದಿಸಿ ಇತರ ಮಾಹಿತಿಗಳ ಜತೆ ಅರ್ಜಿಯನ್ನ ಈ ವಿಳಾಸಕ್ಕೆ senthilreddi@hotmail.com ಈಮೇಲ್ ಮಾಡಿ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 16 ಸಂಜೆ 4 ಗಂಟೆ. ತಡವಾಗಿ ಬಂದ ಅರ್ಜಿಗಳನ್ನ ತಿರಸ್ಕರಿಸಲಾಗುವುದು

English summary
All eligible Candidates Apply online Application for the post of Junior Research Fellow NIMHANS, Bangalore, Thirthahalli, Karnataka

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia