ಕಂದಾಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ಕಂದಾಯ ಇಲಾಖೆಯಲ್ಲಿ ಭೂಸ್ವಾಧೀನ ಹಾಗೂ ಇತರೆ ಪ್ರಕರಣಗಳಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಕಾನೂನಿನ ಸಲಹೆ ನೀಡಲು ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಮಂಡ್ಯದ ಕಂದಾಯ ಇಲಾಖೆಯಲ್ಲಿ ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 8, 2018. ಅರ್ಜಿ ಜತೆ ಇನ್ನಿತ್ತರ ಪ್ರಮುಖ ದಾಖಲೆಗಳನ್ನ ನೀಡಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಕಂದಾಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆ ಸಂಖ್ಯೆ 01
 ಹುದ್ದೆ ವಿವರ ಕಾನೂನು ಸಲಹೆಗಾರ
 ವಿದ್ಯಾರ್ಹತೆ
  •  ಅಭ್ಯರ್ಥಿಗಳು ಕಾನೂನು ಪದವೀಧರರಾಗಿರಬೇಕು
  • ಕಂದಾಯ ಇಲಾಖೆಯ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಅರ್ಜಿ ಸಲ್ಲಿಸಬಹುದು
  • ನಿವೃತ್ತ ತಹಶೀಲ್ದಾರ್ ಅರ್ಜಿ ಸಲ್ಲಿಸಬಹುದು
  • ನಿವೃತ್ತ ಉಪ ತಹಶೀಲ್ದಾರ್ ಅರ್ಜಿ ಸಲ್ಲಿಸಬಹುದು
  • ನಿವೃತ್ತ ಸಿವಿಲ್ ನ್ಯಾಯಾಧೀಶರು ಅರ್ಜಿ ಸಲ್ಲಿಸಬಹುದಾಗಿದೆ
 ವೇತನ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958ರ ನಿಯಮ 313 (ಬಿ) ಪ್ರಕಾರ ಮಾಸಿಕ ಸಂಚಿತ ವೇತನವನ್ನು ನಿಗಧಿಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಅರ್ಜಿ ಜತೆ ಅಭ್ಯರ್ಥಿಗಳು ಅಧಿಕಾರಿ /ನೌಕರರು ಸರ್ಕಾರಿ ಕರ್ತವ್ಯದಿಂದ ನಿವೃತ್ತಿ ಹೊಂದಿದ ಆದೇಶದ ದೃಢೀಕೃತ ಪ್ರತಿ, ವಿದ್ಯಾರ್ಹತೆಯ ಬಗ್ಗೆ ದೃಢೀಕೃತ ಪ್ರತಿ, ವೈದ್ಯಕೀಯ ದೃಢೀಕೃತ ಪ್ರತಿ, ವಾಸ ಸ್ಥಳದ ವಿಳಾಸ ಲಗತ್ತಿಸಿ ಅಂಚೆ ಮೂಲಕ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಬೇಕಾದ ವಿಳಾಸ
ಮೇಲೆ ತಿಳಿಸಿದ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನ ಕೊನೆಯ ದಿನಾಂಕ ಮಾರ್ಚ್ 8, 2018 ರೊಳಗೆ
ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆ, ಮಂಡ್ಯ ಇಲ್ಲಿಗೆ ಅಂಚೆ ಮೂಲಕ ಕಳುಹಿಸಿ

English summary
All eligible Candidates Apply online Application for the post of Legal Advisor before the last date

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia