3,313 ಪೇದೆಗಳ ನೇಮಕಾತಿಗೆ ಸರ್ಕಾರ ಸೂಚನೆ

ಒಟ್ಟು 3,313 ಪೇದೆಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದ್ದು 2017-18ನೇ ಸಾಲಿನಲ್ಲಿ ಸಿವಿಲ್ ಮತ್ತು ಸಶಸ್ತ್ರ ಮೀಸಲು ಪಡೆ ವಿಭಾಗದಲ್ಲಿ ಖಾಲಿ ಇರುವ ಕಾನ್ಸ್​ಟೆಬಲ್ ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುವುದು.

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೇದೆಗಳ ಹುದ್ದೆಯನ್ನು ಶೀಘ್ರದಲ್ಲೇ ಭರ್ತಿ ಮಾಡಲು ಸರ್ಕಾರ ಸೂಚಿಸಿದೆ. ದಿನೇ ದಿನೇ ಹೆಚ್ಚುತ್ತಿರುವ ಅಪರಾದ ಹಾಗೂ ಇಲಾಖೆಯಲ್ಲಿ ಪೊಲೀಸರ ಕೆಲಸದ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿದೆ.

ಒಟ್ಟು 3,313 ಪೇದೆಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದ್ದು 2017-18ನೇ ಸಾಲಿನಲ್ಲಿ ಸಿವಿಲ್ ಮತ್ತು ಸಶಸ್ತ್ರ ಮೀಸಲು ಪಡೆ ವಿಭಾಗದಲ್ಲಿ ಖಾಲಿ ಇರುವ ಕಾನ್ಸ್​ಟೆಬಲ್ ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುವುದು.

3,313 ಪೇದೆಗಳ ನೇಮಕಾತಿ

2016ರ ಸೆಪ್ಟೆಂಬರ್​ನಲ್ಲಿ ಆರಂಭಿಸಿದ್ದ 3,992 ಕಾನ್ಸ್ ಟೆಬಲ್​ಗಳ ನೇಮಕಾತಿಗೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸದ್ಯ ತರಬೇತಿ ಪಡೆದು ಪೇದೆಗಳು ಹಂತ ಹಂತವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇದೀಗ 2017-18ನೇ ಸಾಲಿಗೆ ಸಿವಿಲ್, ಸಿಎಆರ್/ಡಿಎಆರ್ ಹಾಗೂ ರೈಲ್ವೇಸ್​ನಲ್ಲಿ ಖಾಲಿ ಉಳಿದಿರುವ ಹುದ್ದೆಗಳ ನೇರ ನೇಮಕಾತಿಗೆ ಪೊಲೀಸ್ ಇಲಾಖೆ ತಯಾರಿ ನಡೆಸಿದೆ.

ಜಿಲ್ಲಾವಾರು ನೇಮಕಾತಿ ವಿವರ

ಜಿಲ್ಲೆಸಿವಿಲ್ಸಿಎಆರ್/ ಡಿಎಆರ್
ಬೆಂಗಳೂರು ನಗರ1575388
ಮೈಸೂರು ನಗರ200100
ಮಂಗಳೂರು ನಗರ10075
ರಾಮನಗರ10000
ಚಿಕ್ಕಬಳ್ಳಾಪುರ10000
ಮೈಸೂರು ಜಿಲ್ಲೆ0075
ಉತ್ತರ ಕನ್ನಡ/ ಕಾರವಾರ15000
ವಿಜಯಪುರ ಜಿಲ್ಲೆ10000
ಬೆಳಗಾವಿ ಜಿಲ್ಲೆ15050
ರೈಲ್ವೇಸ್15000
ಒಟ್ಟು2625688

ಬೆಂಗಳೂರು, ಮೈಸೂರು, ಮಂಗಳೂರು, ರಾಮನಗರ ಸೇರಿ 9 ಜಿಲ್ಲೆಗಳಿಗೆ 2,625 ಸಿವಿಲ್ ಪೇದೆಗಳು ಮತ್ತು ಸಿಎಆರ್/ ಡಿಎಆರ್ 688 ಪೇದೆಗಳ ನೇಮಕಕ್ಕೆ ಅನುಮತಿ ಕೋರಿ ಪೊಲೀಸ್ ಇಲಾಖೆ ಕಳುಹಿಸಿದ್ದ ಪ್ರಸ್ತಾವನೆಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಆಯಾ ಜಿಲ್ಲಾವಾರು ಘಟಕಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಮಾಹಿತಿಯನ್ನು ಈಗಾಗಲೇ ತರಿಸಿಕೊಂಡಿರುವ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.

ಮುಂಬರುವ ವರ್ಷಗಳಲ್ಲಿ 1,290 ಎಸ್ ಐ ಗಳ ನಿವೃತ್ತಿ

ಮುಂದಿನ ಮೂರು ವರ್ಷದಲ್ಲಿ (2017,2018 ಮತ್ತು 2019) ಪೊಲೀಸ್ ಇಲಾಖೆಯ ವಿವಿಧ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 1,290 ಸಬ್ ಇನ್​ಸ್ಪೆಕ್ಟರ್​ಗಳು ನಿವೃತ್ತಿ ಹೊಂದಲಿದ್ದಾರೆ. ಈ ಸ್ಥಾನಗಳಿಗೆ ಪ್ರತಿವರ್ಷ ನೇಮಕಾತಿ ನಡೆಸುವಂತೆ 3 ವರ್ಷದ ನೇಮಕಾತಿಗೆ ಹಣಕಾಸು ಇಲಾಖೆ ಒಂದೇ ಬಾರಿ ಅನುಮತಿ ನೀಡಿದೆ. ಹಾಗಾಗಿ 1290 ಎಸ್ ಐ ಹುದ್ದೆಗಳ ನೇಮಕಾತಿಗೂ ಇಲಾಖೆ ತಯಾರಿ ಮಾಡಿಕೊಳ್ಳುತ್ತಿದೆ.

For Quick Alerts
ALLOW NOTIFICATIONS  
For Daily Alerts

English summary
Government of Karnataka orders to recruit 3313 constables very soon.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X