ಪೊಲೀಸ್ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ

Posted By:

ಸಮಾಲೋಚಕರು ಮತ್ತು ಹಿರಿಯ ಸಮಾಲೋಚಕರುಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ.

50 ಸಮಾಲೋಚಕರು ಮತ್ತು 9 ಹಿರಿಯ ಸಮಾಲೋಚಕರುಗಳನ್ನು ಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಿಕೊಳ್ಳಲು ಸರ್ಕಾರ ಆದೇಶ ನೀಡಿದೆ. ಈ ಹುದ್ದೆಗಳನ್ನು ಒಂದು ವರ್ಷ ಅವಧಿಗಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆನ್-ಲೈನ್ ಅರ್ಜಿಗಳನ್ನು ಸಲ್ಲಿಸುವ ವೆಬ್ಸೈಟ್ ವಿಳಾಸ www.ksp.gov.in
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ : 13 -04 -2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 -04 -2017
ಅರ್ಜಿ ಶುಲ್ಕವನ್ನು ಅಧಿಕೃತ ಬ್ಯಾಂಕ್ ಕಛೇರಿ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ: 28 -04 -2017

ಗುತ್ತಿಗೆ ಆಧಾರದ ಮೇಲೆ ನೇಮಕಾತಿ

 • ಅಭ್ಯರ್ಥಿಗಳು ಆನ್-ಲೈನ್‍ನಲ್ಲಿ ಅರ್ಜಿ ಭರ್ತಿ ಮಾಡಲು ಇಲಾಖೆಯ ಅಧಿಕೃತ ವೆಬ್‍ಸೈಟ್ www.ksp.gov.in ನಲ್ಲಿ Current Recruitment ಮೇಲೆ ಕ್ಲಿಕ್ ಮಾಡಬೇಕು.
 • ನಂತರ Well Being Officers /Senior Well Being Officers -Recruitment-2017 ಮೇಲೆ ಕ್ಲಿಕ್ ಮಾಡಿ
 • ತದನಂತರ Application ಮೇಲೆ ಕ್ಲಿಕ್ ಮಾಡಿದಾಗ ಸೂಚನೆಗಳ ಪರದೆ ಮೂಡುತ್ತದೆ.
 • ಸೂಚನೆಗಳನ್ನು ಪೂರ್ಣವಾಗಿ ತಿಳಿದುಕೊಂಡು ಅಂತಿಮವಾಗಿ 'ನಾನು ಮೇಲ್ಕಂಡ ಸೂಚನೆಗಳನ್ನು ಓದಿರುತ್ತೇನೆ' ಎಂದು ಒಪ್ಪಿಕೊಂಡು ನೀಡಿರುವ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಸಿಂಧುಗೊಳಿಸುವ ನಮೂನೆ (User Validation Form) ಮೇಲೆ ನೀಡಿರುವ ಕೋಡ್‍ನ್ನು ತುಂಬಬೇಕು.

  ಅರ್ಜಿ ಶುಲ್ಕ

  • 1) ಅಭ್ಯರ್ಥಿಗಳು ಅರ್ಜಿ ಶುಲ್ಕ ₹.100/-ನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನ ಯಾವುದಾದರೂ ಶಾಖೆಗಳಲ್ಲಿ ಬ್ಯಾಂಕಿನ ವೇಳೆಯಲ್ಲಿ ಚಲನ್ ನೀಡಿ ಹಣ ಪಾವತಿಸಬಹುದು.
  • 2.ಅಭ್ಯರ್ಥಿಯು ಅರ್ಜಿಯನ್ನು ಭರ್ತಿ ಮಾಡಿ ಚಲನ್‍ನ್ನು ಸೃಜಿಸಿ ಸಂಬಂಧಪಟ್ಟ ಬ್ಯಾಂಕ್‍ನಲ್ಲಿ ಶುಲ್ಕವನ್ನು ಪಾವತಿಸಬೇಕು.

  ವಯೋಮಿತಿ

  ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ ದಿನಾಂಕ: 27.04.2017ಕ್ಕೆ ಈ ಕೆಳಕಂಡ ವಯಸ್ಸು ಮೀರಿರಬಾರದು.

  • ಸಮಾಲೋಚಕರಿಗೆ - ಗರಿಷ್ಠ 33 ವರ್ಷ
  • ಹಿರಿಯ ಸಮಾಲೋಚಕರಿಗೆ - ಗರಿಷ್ಠ 35 ವರ್ಷ

  ವಿದ್ಯಾರ್ಹತೆ

  • ಸಮಾಲೋಚಕರಿಗೆ - ಅಂಗೀಕೃತ ವಿಶ್ವವಿದ್ಯಾಲಯದಿಂದ  ಎಂ.ಎಸ್ಸಿ/ ಎಂ.ಎ ಸೈಕಾಲಜಿ ಹೊಂದಿರಬೇಕು
  • ಹಿರಿಯ ಸಮಾಲೋಚಕರಿಗೆ - ಅಂಗೀಕೃತ ವಿಶ್ವವಿದ್ಯಾಲಯದಿಂದ ಕ್ಲಿನಿಕಲ್ ಸೈಕಾಲಜಿ ವಿಷಯದಲ್ಲಿ ಎಂ.ಫಿಲ್ ಪಡೆದಿರಬೇಕು ಮತ್ತು ಆ ಹುದ್ದೆಗೆ ಸಂಬಂಧಪಟ್ಟ ಅನುಭವ ಹೊಂದಿರಬೇಕು.

  ಮಾಸಿಕ ವೇತನ

  ಸಮಾಲೋಚಕರಿಗೆ - ₹. 28,000/-
  ಹಿರಿಯ ಸಮಾಲೋಚಕರಿಗೆ - ₹. 38,000/-
  (ಇತರೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ)

  ಆಯ್ಕೆ ವಿಧಾನ

  ಅಭ್ಯರ್ಥಿಗಳನ್ನು  ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು

  ಸಹಾಯವಾಣಿ

  ಅಭ್ಯರ್ಥಿಗಳು ಸಮಾಲೋಚಕರು ಮತ್ತು ಹಿರಿಯ ಸಮಾಲೋಚಕರ ನೇಮಕಾತಿಗೆ ಸಂಬಂಧಿಸಿದಂತೆ ಸಹಾಯವಾಣಿಗೆ 080-22943346ಗೆ ಸಂಪರ್ಕಿಸಿ ತಮ್ಮ ನೇಮಕಾತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸ್ಪಷ್ಠ ಪಡಿಸಿಕೊಳ್ಳಬಹುದು. ಈ ಸಹಾಯವಾಣಿ ದಿನಾಂಕ 10.04.2017 ರಿಂದ ಪ್ರತಿದಿನ ಬೆಳಿಗ್ಗೆ 8-00 ರಿಂದ ಸಾಯಂಕಾಲ 8-00 ಗಂಟೆಯವರೆಗೆ ಲಭ್ಯವಿರುತ್ತದೆ. ಅಲ್ಲದೆ ಮೇಲಿಂದ ಮೇಲೆ ನೇಮಕಾತಿಗೆ ಸಂಬಂಧಪಟ್ಟಂತೆ ಬರುವ ಸಾಮಾನ್ಯ ಪ್ರಶ್ನೆಗಳಿಗೆ (Frequenty Asked Questions - FAQ) ಉತ್ತರವನ್ನು www.ksp.gov.in ಪೊಲೀಸ್ ವೆಬ್‍ಸೈಟ್‍ನಲ್ಲಿ ನೋಡಬಹುದು

  English summary
  Recruitment of Well Being Officers and Senior Well Being Officerson Contract basis in Police Department - 2017

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia