ಭಾರತೀಯ ಕರಾವಳಿ ರಕ್ಷಣಾ ಪಡೆಯಲ್ಲಿ ನಾವಿಕ ಹುದ್ದೆಯ ನೇಮಕಾತಿ

ಭಾರತೀಯ ಕರಾವಳಿ ರಕ್ಷಣಾ ಪಡೆ ೦2/2017 ಬ್ಯಾಚ್ನಲ್ಲಿ ನಾವಿಕ ಹುದ್ದೆಗೆ (ಜನರಲ್ ಡ್ಯೂಟಿ) ನೇಮಕಾತಿ ಮಾಡಲು ಆನ್ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಾವಿಕ ಹುದ್ದೆ (ಜನರಲ್ ಡ್ಯೂಟಿ) 10+2 ಪ್ರವೇಶ-02-2017 ಬ್ಯಾಚ್ 2017, ಮಾರ್ಚ್ 10 ರಿಂದ 22 ರವರೆಗೆ ಆನ್ಲೈನ್ ನಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.

ಕೇಂದ್ರ / ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ನಡೆಸಲಾಗುವ 10+2 ಪರೀಕ್ಷೆಯಲ್ಲಿ ಒಟ್ಟು ಸರಾಸರಿ 50% ಅಂಕಗಳನ್ನು ಪಡೆದ ಭಾರತೀಯ ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ ವಿವರ

ನಾವಿಕ ಹುದ್ದೆ (ಜನರಲ್ ಡ್ಯೂಟಿ)

ನಾವಿಕ ಹುದ್ದೆಯ ನೇಮಕಾತಿ

ಅರ್ಹತೆ

ಕೇಂದ್ರ / ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ನಡೆಸಲಾಗುವ 10+2 ಪರೀಕ್ಷೆಯಲ್ಲಿ ಒಟ್ಟು ಸರಾಸರಿ 50% ಅಂಕಗಳನ್ನು ಹಾಗೂ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ಸರಾಸರಿ 50% ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.

(ಯಾವುದೇ ಓಪನ್ ನ್ಯಾಷನಲ್ ಚಾಂಪಿಯನ್ಷಿಪ್/ಇಂಟರ್ ನ್ಯಾಷನಲ್ ಚಾಂಪಿಯನ್ಷಿಪ್ ಕ್ರೀಡಾ ಸ್ಪರ್ದೆಗಳಲ್ಲಿ 1ನೇ, 2ನೇ, ಅಥವಾ 3ನೇ ಸ್ಥಾನವನ್ನುಗಳಿಸಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವೀರಾಗ್ರಣಿ ಕ್ರೀಡಾಪಟುಗಳಿಗೆ ಈ ಮೇಲ್ಕಾಣಿಸಿದ ಕಟ್ಆಫ್ 5% ಸಡಿಲಿಕೆ ನೀಡಲಾಗುತ್ತದೆ. ಕರಾವಳಿ ರಕ್ಷಣಾ ಪಡೆಯ ಸೇವೆಯಲ್ಲಿರುವಾಗಲೇ ಕಾಯಿಲೆಗೆ ಈಡಾದ ಸಮವಸ್ತ್ರ ಸಿಬ್ಬಂದಿಯವರ ಆಶ್ರಯಿತರಿಗೂ ಈ ಸಡಿಲಿಕೆ ಅನ್ವಯವಾಗುತ್ತದೆ.)

ವಯೋಮಿತಿ

ಕನಿಷ್ಠ 18 ವರ್ಷ ಮತ್ತು ಗರಿಷ್ಠ 22 ವರ್ಷ ಎಂದರೆ, 10 ಆಗಸ್ಟ್ 1995 ರಿಂದ 31 ಜುಲೈ 1999 ರೊಳಗೆ (ಎರಡೂ ದಿನಾಂಕಗಳು ಒಳಗೊಳ್ಳುತ್ತವೆ) ಜನಿಸಿದವರು ಎಸ್.ಸಿ/ಎಸ್.ಟಿ ವರ್ಗದ ಅಭ್ಯರ್ಥಿಗಳಿಗೆ ೩ ವರ್ಷಗಳ ಗರಿಷ್ಠ ವಯೋಮಿತಿ ಸಡಿಲಿಕೆ ಲಭ್ಯವಿರುತ್ತದೆ.

ಅಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ, ದೈಹಿಕ ಸದೃಢತಾ ಪರೀಕ್ಷೆ ಹಾಗೂ ವೈದ್ಯಕೀಯ ತಪಾಸಣೆಗಳು ಸದರಿ ಹುದ್ದೆಯ ಆಯ್ಕೆ ಪ್ರಕ್ರಿಯೆಯಲ್ಲಿ ಒಳಗೊಂಡಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

2017 , ಮಾರ್ಚ್ 10 ರಿಂದ 22 ರಂದು ಸಂಜೆ 5:00 ಗಂಟೆಯವರೆಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅಭ್ಯರ್ಥಿಗಳು ಲಾಗಾನ್ ಮಾಡುವ ವೆಬ್ಸೈಟ್ ವಿಳಾಸ http://joinindiancoastguard.gov.in/

ಪ್ರಮುಖ ಸೂಚನೆಗಳು

  1. ಅಭ್ಯರ್ಥಿಗಳು ಆಯಾ ಕೇಂದ್ರಗಳಲ್ಲಿ ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು. ಆಡಳಿತಾತ್ಮಕ/ ಇನ್ನಿತರೆ ಕಾರಣಗಳಿಂದಾಗಿ ಯಾವುದೇ ಸಮಯದಲ್ಲಿ ನಿಗದಿತ ಪರೀಕ್ಷಾ ಕೆಂದ್ರ/ ಕೇಂದ್ರಗಳಲ್ಲಿನ ಪರೀಕ್ಷೆಯನ್ನು ರದ್ದುಪಡಿಸುವ/ಪುನಃ ಕೈಗೊಳ್ಳುವ ಅಥವಾ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸುವ ಹಕ್ಕನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಇವರು ಕಾಯ್ದಿರಿಸಿಕೊಂಡಿರುತ್ತಾರೆ.
  2. ಸ್ವೀಕೃತ ಗರಿಷ್ಠ ಶೇಕಡವಾರು ಅಂಕಗಳೊಂದಿಗೆ ಅರ್ಜಿ ಸಂಖ್ಯೆಗಳ ಅಧಾರದಲ್ಲಿ, ನಿಗದಿತ/ರಾಜ್ಯ ಕೇಂದ್ರ ಒಂದರಲ್ಲಿನ ಕಟ್ ಆಫ್ ಶೇಕಡವಾರು (%) ಅನ್ನು ನಿರ್ಧರಿಸಲಾಗುತ್ತದೆ.
  3. ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ 22 , ಮಾರ್ಚ್ 2017 ರಂದು ಸಂಜೆ 5 :00 ಗಂಟೆ ವಿವರವಾದ ಅರ್ಹತಾ ಮಾನದಂಡಗಳು, ಅರ್ಜಿಗಳನ್ನು ಭರ್ತಿ ಮಾಡುವಿಕೆ ಮತ್ತು ಇನ್ನಿತರ ವಿವರಗಳಿಗಾಗಿ ಸಂಪೂರ್ಣ ಜಾಹೀರಾತನ್ನು ಡೌನ್ಲೋಡ್ ಮಾಡಿಕೊಳ್ಳಲು ಸಂದರ್ಶಿಸಿ, ಭಾರತೀಯ ಕರಾವಳಿ ರಕ್ಷಣಾ ಪಡೆಯ ವೆಬ್ಸೈಟ್ ವಿಳಾಸ http://joinindiancoastguard.gov.in/
  4. ಅಭ್ಯರ್ಥಿಗಳು ಸಂಪೂರ್ಣ ಜಾಹೀರಾತನ್ನು ಗಮನವಿಟ್ಟು ಓದಿಕೊಳ್ಳತಕ್ಕದ್ದು. ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿಸುವ ಸಂದರ್ಭದಲ್ಲಿ ನಿರ್ಲಕ್ಷತನ ಪ್ರದರ್ಶಿಸಿದರೆ ಮತ್ತು ಅರ್ಹತಾ ಮಾನದಂಡಗಳನ್ನು ಪೂರೈಸದಿದ್ದಲ್ಲಿ ಪರಿಗಣಿಸಲಾಗುವುದಿಲ್ಲ.

ಡಿಸ್ಕ್ಲೇಮರ್
ಈ ಜಾಹೀರಾತಿನಲ್ಲಿ ನೀಡಲಾದ ಷರತ್ತು ಮತ್ತು ನಿಬಂಧನೆಗಳು ಬದಲಾವಣೆಯ ನಿಬಂಧನೆಗೆ ಪಳಪಟ್ಟಿರುತ್ತದೆ. ಆದ್ದರಿಂದ ಇವುಗಳನ್ನು ಕೇವಲ ಮಾರ್ಗಸೂಚಿಗಳೆಂದು ಪರಿಗಣಿಸುವುದು ಕಡ್ಡಾಯ. ಭಾರತೀಯ ಕರಾವಳಿ ರಕ್ಷಣಾ ಪಡೆಯ ವೆಬ್ಸೈಟ್ http://joinindiancoastguard.gov.in/ ನಲ್ಲಿಯೂ ಕೂಡ ವಿವರಗಳು ಲಭ್ಯವಿರುತ್ತವೆ.
* ಪ್ರಚಲಿತ ವಿದ್ಯಮಾನಗಳನ್ನು ತಿಳಿಯಲು ಆಸಕ್ತ ಅಭ್ಯರ್ಥಿಗಳು, ಭಾರತೀಯ ಕರಾವಳಿ ರಕ್ಷಣಾ ಪಡೆಯ ವೆಬ್ಸೈಟ್ ಅನ್ನು ನಿಯಮಿತವಾಗಿ ಪರೀಶೀಲಿಸುತ್ತಿರಬೇಕು.

For Quick Alerts
ALLOW NOTIFICATIONS  
For Daily Alerts

English summary
Applications are invited from male Indian nationals for recruitment to the post of Navik (General Duty)in the Indian Coast Guard, an Armed Force of the Union.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X