ಸರ್ಕಾರಿ ಉದ್ಯೋಗಿ ಆಗಬೇಕಾ... ಹಾಗಿದ್ರೆ ಇನ್ಯಾಕೆ ತಡ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಕ್ಕೆ ಇಂದೇ ಅರ್ಜಿ ಸ

Written By: Nishmitha B

ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ ವೈಜ್ಞಾನಿಕ ಅಧಿಕಾರಿಗಳ (ಪುರುಷ ಮತ್ತು ಮಹಿಳಾ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಹುದ್ದೆಗಳ ವಿವರ ಹೀಗಿದೆ

ಹುದ್ದೆ  ಹುದ್ದೆ ಸಂಖ್ಯೆ ವಿದ್ಯಾರ್ಹತೆ
 ವೈಜ್ಞಾನಿಕ ಅಧಿಕಾರಿ - ರಸಾಯನಶಾಸ್ತ್ರ ವಿಭಾಗ 1 ಸ್ನಾತಕೋತ್ತರ ಪದವಿಯನ್ನು ರಾಸಾಯನಿಕಶಾಸ್ತ್ರ /ಫಾರ್ಮಾಕೊಲಾಜಿ / ಬಯೋಕೆಮಿಸ್ಟ್ರಿ /ಫಾರೆನ್ಸಿಕ್ ಸೈನ್ಸ್ ಕೆಮಿಕಲ್ ಸೈನ್ಸಲ್ಲಿ ತತ್ಸಮಾನ ವಿದ್ಯಾರ್ಹತೆಯನ್ನ ಹೊಂದಿರಬೇಕು
 ವೈಜ್ಞಾನಿಕ ಅಧಿಕಾರಿ - ಭೌತಶಾಸ್ತ್ರ ವಿಭಾಗ 1 ಸ್ನಾತಕೋತ್ತರ ಪದವಿಯನ್ನು ಭೌತಶಾಸ್ತ್ರ /ಫೊರೆನ್ಸಿಕ್ ಸೈನ್ಸ್ / ಫಿಜಿಕಲ್ ಸೈನ್ಸ್‍ನಲ್ಲಿ
ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
 ವೈಜ್ಞಾನಿಕ ಅಧಿಕಾರಿ, ಜೀವಶಾಸ್ತ್ರ ವಿಭಾಗ 2  ಸ್ನಾತಕೋತ್ತರ ಪದವಿಯನ್ನು ಬಾಟನೀ / ಝವಾಲಜಿ / ಭಯೋಕೆಮಿಸ್ಟ್ರಿ /
ಮೈಕ್ರೋಬಯೋಲಜಿ / ಫೊರೆನ್ಸಿಕ್ ಸೈನ್ಸ್ ಅಥವಾ ಬಯೋಸೈನ್ಸ್ ನಲ್ಲಿ
ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
  ವೈಜ್ಞಾನಿಕ ಅಧಿಕಾರಿ, ಪ್ರಶ್ನಿತ ದಾಸ್ತಾವೇಜು ವಿಭಾಗ 1 ಸ್ನಾತಕೋತ್ತರ ಪದವಿಯನ್ನು ಭೌತಶಾಸ್ತ್ರ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು
ಫಿಜಿಕಲ್‌ಸೈನ್ಸಸ್ / ಕೆಮಿಸ್ಟ್ರಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಕೆಮಿಕಲ್ ಸೈನ್ಸ್‌ / ಫೊರೆನ್ಸಿಕ್
ಸೈನ್ಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
 ವೈಜ್ಞಾನಿಕ ಅಧಿಕಾರಿ, ವಿಷ ವಿಜ್ಞಾನ ವಿಭಾಗ 5 ಸ್ನಾತಕೋತ್ತರ ಪದವಿಯನ್ನು ಕೆಮಿಸ್ಟ್ರಿ /ಫಾರ್ಮಾಕೊಲಾಜಿ / ಬಯೋಕೆಮಿಸ್ಟ್ರಿ /
ಫೊರೆನ್ಸಿಕ್ ಸೈನ್ಸ್ / ಕೆಮಿಕಲ್ ಸೈನ್ಸ್‍ನಲ್ಲಿ ತತ್ಸಮಾನ ವಿದ್ಯಾರ್ಹತೆಯ ವಿಷಯಗಳಲ್ಲಿ
ಶೇಕಡ 55ರ ಸರಾಸರಿ ಅಂಕಗಳನ್ನು ಹೊಂದಿರಬೇಕು.
 ವೈಜ್ಞಾನಿಕ ಅಧಿಕಾರಿ, ಸೈಕೋಲಾಜಿ ವಿಭಾಗ 7 ಸೈಕೋಲಾಜಿಯಲ್ಲಿ ಎಂಎಸ್‍ಸಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು
ಅಥವಾ ಇದರ ತತ್ಸಮಾನ ವಿದ್ಯಾರ್ಹತೆ / ಫೊರೆನ್ಸಿಕ್ ಸೈಕೋಲಾಜಿಯಲ್ಲಿ ವಿಷಯ
ತಜ್ಞರಾಗಿರಬೇಕು / ಕ್ಲಿನಿಕಲ್ ಸೈಕೋಲಾಜಿಯಲ್ಲಿ ಕನಿಷ್ಟ ಶೇಕಡ 55ರ ಸರಾಸರಿ
ಅಂಕಗಳನ್ನು ಹೊಂದಿರಬೇಕು.
 ವೈಜ್ಞಾನಿಕ ಅಧಿಕಾರಿ, ಛಾಯಾಚಿತ್ರ ವಿಭಾಗ 1 ಸ್ನಾತಕ ಪದವಿಯನ್ನು ವಿಜ್ಞಾನದಲ್ಲಿ ತೇರ್ಗಡೆಯಾಗಿರಬೇಕು.
ಡಿಪ್ಲೋಮ / ಸಿನಿಮಟೊಗ್ರಫಿಯಲ್ಲಿ ಪದವಿಯನ್ನು ಹೊಂದಿರಬೇಕು ಅಥವಾ
ಪೋಟೋಗ್ರಫಿ ಅಥವಾ ಸರ್ಕಾರದಿಂದ ಅಂಗೀಕೃತವಾಗಿರುವ ಸಂಸ್ಥೆಯಲ್ಲಿ
ಅನುಮೋದಿಸಲ್ಪಟ್ಟಿರುವ ವಿಷಯಗಳಲ್ಲಿ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಸರ್ಕಾರದಿಂದ ಅಂಗೀಕೃತವಾಗಿರುವ ಯಾವುದಾದರೂ ಸಂಸ್ಥೆಯಲ್ಲಿ ಫೋಟೋಗ್ರಪಿ /
ವಿಡಿಯೋಗ್ರಫಿ ಮತ್ತು ಆಡಿಯೋ-ವಿಡಿಯೋ ಉಪಕರಣಗಳ ನಿರ್ವಹಣೆಗೆ ಸಂಬಂಧಿಸಿದಂತೆ
ಕನಿಷ್ಟ 2 ವರ್ಷಗಳ ಪ್ರಾಯೋಗಿಕ ಅನುಭವವನ್ನು ಹೊಂದಿರಬೇಕು.

ಶುಲ್ಕ ವಿವರ
ಪ್ರವರ್ಗ ಪಾವತಿಸಬೇಕಾದ ಶುಲ್ಕ
ಸಾಮಾನ್ಯ ಹಾಗೂ ಒಬಿಸಿ (2ಎ, 2ಬಿ, 3ಎ, 3ಬಿ) 250 ರೂ
ಎಸ್‌ಎಸಿ, ಎಸ್‌ಟಿ, ಕೆಟಗರಿ 1 100 ರೂ
ಆರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ / ಅಂಚೆ ಕಛೇರಿಯಲ್ಲಿ ಮಾತ್ರ ಪಾವತಿಸತಕ್ಕದ್ದು. ಅಭ್ಯರ್ಥಿಯೂ ಅರ್ಜಿಯನ್ನು ಭರ್ತಿ ಮಾಡಿ ಚಲನ್ ಪಡೆದು ಸಂಬಂಧಪಟ್ಟ ಬ್ಯಾಂಕ್ / ಅಂಚೆ ಕಛೇರಿಯಲ್ಲಿ ಶುಲ್ಕವನ್ನು ಪಾವತಿಸಬೇಕು. ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಅರ್ಜಿಯನ್ನು ಒಂದೇ ಹುದ್ದೆಗೆ ಸಲ್ಲಿಸಿದ್ದಲ್ಲಿ , ಅಂತಿಮವಾಗಿ ಸಲ್ಲಿಸಿದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು.

ವಯೋಮಿತಿ :
ವಯೋಮಿತಿಗೆ ಸಂಬಂಧಪಟ್ಟ ಮಾಹಿತಿಗಾಗಿ ಅಧೀಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಓದಿಕೊಳ್ಳತಕ್ಕದ್ದು

ಪ್ರಮುಖ ದಿನಗಳು
ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ 26/2/2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21/3/2018
ಆನ್‌ಲೈನ್ ಅರ್ಜಿ ಶುಲ್ಕ ಪಾವತಿಗೆ 23/3/2018

ಅರ್ಜಿ ಸಲ್ಲಿಸುವುದು ಹೇಗೆ?

Step 1

ಅಧೀಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

Step 2

ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ ಮೇಲೆ New Application ಆಯ್ಕೆಯನ್ನ ಕ್ಲಿಕ್ ಮಾಡಿ
ಆಗ ನೋಟಿಫಿಕೇಶನ್ ತೆರೆದುಕೊಳ್ಳುತ್ತದೆ.

Step 3

ನೋಟಿಫಿಕೇಶನ್ ಜಾಗ್ರತೆಯಿಂದ ಓದಿದ ಬಳಿಕ I Agree ಅನ್ನೋ ಚಿಕ್ಕ ಬಾಕ್ಸ್‌ ಇದ್ದು, ಅದರೊಳಗೆ ಕ್ಲಿಕ್ ಮಾಡಿ

Step 4

ಬಳಿಕ ಕಂಟಿನ್ಯೂ ಅಪ್ಲಿಕೇಶನ್ ಕ್ಲಿಕ್ ಮಾಡಿ

Step 5

ನಂತರ ಅರ್ಜಿ ತೆರೆದುಕೊಳ್ಳುತ್ತದೆ. ನೀವು ಅರ್ಜಿ ಭರ್ತಿ ಮಾಡುತ್ತಾ ಹೋಗಿ. ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಕಡ್ಡಾಯವಾಗಿ ನೀಡಬೇಕಾಗಿದೆ

Step 6

ಅರ್ಜಿ ಭರ್ತಿ ಮಾಡಿದ ನಂತರ ಚಲನ್ ಮೂಡುತ್ತದೆ. ಅಭ್ಯರ್ಥಿಯೂ ಅರ್ಜಿಯನ್ನು ಭರ್ತಿ ಮಾಡಿ ಚಲನ್ ಪಡೆದು ಸಂಬಂಧಪಟ್ಟ ಬ್ಯಾಂಕ್ / ಅಂಚೆ ಕಛೇರಿಯಲ್ಲಿ ಶುಲ್ಕವನ್ನು ಪಾವತಿಸಬೇಕು

Step 7

ಹುದ್ದೆಯ ಕುರಿತ್ತಂತೆ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಸಂಪರ್ಕಿಸಿ : fslnhk18.ksp-online.in

English summary
Karnataka State Police Recruitmen has released a notification for post SCIENTIFIC OFFICERS

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia