ಭಾರತೀಯ ರಿಸರ್ವ್ ಬ್ಯಾಂಕ್ ನ ಕಾಮನ್ ಸೀನಿಯಾರಿಟಿ ಗ್ರೂಪ್ (ಸಿಎಸ್ ಜಿ) ಸ್ಟ್ರೀಮ್ ನಲ್ಲಿ ಖಾಲಿ ಇರುವ 161 'ಬಿ-ಗ್ರೇಡ್' ಅಧಿಕಾರಿ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಪದವಿ, ಸ್ನಾತಕೋತ್ತರ ಪದವಿ ಗಳಿಸಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ಆಸಕ್ತರು ಮೇ 23, 2017ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ಹುದ್ದೆ: ಬಿ-ಗ್ರೇಡ್' ಅಧಿಕಾರಿ
ಒಟ್ಟು ಹುದ್ದೆಗಳು: 161
ವೇತನ ಶ್ರೇಣಿ: ರೂ.35150 ರಿಂದ 62400

ವಿದ್ಯಾರ್ಹತೆ
ಬಿ-ಗ್ರೇಡ್' ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪದವಿ (ಡಿಗ್ರಿ), ಡಿಪ್ಲಮೋ ಅಥವಾ ಮಾಸ್ಟರ್ ಡಿಗ್ರಿ ಪಡೆದಿರಬೇಕು
ಅರ್ಜಿ ಸಲ್ಲಿಕೆ
ಅಭ್ಯರ್ಥಿಗಳು ಆನ್-ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಶುಲ್ಕ
- ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.850/-
- ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/-
ವಯೋಮಿತಿ: ಮೇ 1, 2017ಗೆ ಅನ್ವಯವಾಗುವಂತೆ 21 ರಿಂದ 30 ವಯೋಮಿತಿ ಉಳ್ಳವರಾಗಿರಬೇಕು.
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಬಿ-ಗ್ರೇಡ್' ಅಧಿಕಾರಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
ಪರೀಕ್ಷಾ ವಿವರ
ಫೇಸ್ 1 ಪರೀಕ್ಷೆಯು ಸಾಮಾನ್ಯ ಪತ್ರಿಕೆಯನ್ನು ಹೊಂದಿದ್ದು ಸಾಮಾಜ್ಯ ಜ್ಞಾನ, ಇಂಗ್ಲಿಷ್ ಭಾಷಾ ಜ್ಞಾನ, ರೀಸನಿಂಗ್ ಮತ್ತು ಕ್ವಾನ್ಟಿಟೇಟಿವ್ ಆಪ್ಟಿಟ್ರೈಡ್ ವಿಷಯಗಳ ಮೇಲೆ ಕೇಳಲಾಗುತ್ತದೆ.
ಫೇಸ್-2 ಪರೀಕ್ಷೆಯು ಮೂರು ಪತ್ರಿಕೆಗಳನ್ನು ಹೊಂದಿರುತ್ತದೆ
- ಮೊದಲ ಪತ್ರಿಕೆ ಅರ್ಥಶಾಸ್ತ್ರ ಮತ್ತು ಸಮಾಜಿಕ ವಿಷಯಗಳನ್ನು ಹೊಂದಿದ್ದು ಬಹು ಆಯ್ಕೆಯ ಪ್ರಶ್ನೆಗಳನ್ನು ಹೊಂದಿರುತ್ತದೆ.
- ಎರಡನೇ ಪತ್ರಿಕೆಯು ಇಂಗ್ಲಿಷ್ ಭಾಷಾ ಬರವಣಿಗೆ ಕುರಿತಾಗಿದ್ದು, ಡಿಸ್ಕ್ರಿಪ್ಟಿವ್ ಮಾದರಿಯಲ್ಲಿರುತ್ತದೆ.
- ಮೂರನೇ ಪತ್ರಿಕೆಯಲ್ಲಿ ಫೈನಾನ್ಸ್ ಮತ್ತು ಮ್ಯಾನೇಜ್ಮೆಂಟ್ ಬಹುಆಯ್ಕೆಯ ಪ್ರಶ್ನೆಗಳಿರುತ್ತವೆ.
ಮೂರು ಪತ್ರಿಕೆಗಳು ತಲಾ 100 ಅಂಕಗಳದಾಗಿದ್ದು, ಉತ್ತರಿಸಲು 90 ನಿಮಿಷ ಕಾಲಾವಕಾಶ ನೀಡಲಾಗುತ್ತದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-05-2017
- ಫೇಸ್-1 ಪರೀಕ್ಷೆ ನಡೆಯುವ ದಿನಾಂಕ: 17-06-2017
- ಫೇಸ್-2 ಪರೀಕ್ಷೆ ನಡೆಯುವ ದಿನಾಂಕ: 06-07-2017/07-07-2017
ಕರ್ನಾಟಕದ ಪರೀಕ್ಷಾ ಕೆಂದ್ರಗಳು
- ಫೇಸ್ 1 ಪರೀಕ್ಷೆಯು ಬೆಳಗಾವಿ, ಬಾಗಲ್ಕೋಟ್ , ಬೆಂಗಳೂರು , ಚಿಕಬಳ್ಳಾಪುರ, ಕೋಲಾರ,ತುಮಕೂರು, ಗುಲ್ಬರ್ಗ, ಬೀದರ್,ಹುಬ್ಬಳ್ಳಿ, ಧಾರವಾಡ ಗದಗ್,ಮಂಗಳೂರು, ಮೈಸೂರು, ಮಂಡ್ಯ , ಉಡುಪಿ ಕೇಂದ್ರಗಳಲ್ಲಿ ನಡೆಯಲಿದೆ.
- ಫೇಸ್ 2 ಪರೀಕ್ಷೆ ಬೆಂಗಳೂರಿನಲ್ಲಿ ನಡೆಯಲಿದೆ
ಬೆಂಗಳೂರು ಆರ್ ಬಿ ಐ ವಿಳಾಸ
10/3/08, ನೃಪತುಂಗ ರಸ್ತೆ,
ಬೆಂಗಳೂರು-560001
([email protected])
ಇನ್ನು ಹೆಚ್ಚಿನ ವಿವರಣೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











