ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 88 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು 88 ರಾಸಾಯನಿಕ ತಜ್ಞರು (ಕೆಮಿಸ್ಟ್), ಜಿಲ್ಲಾ ಪ್ರಯೋಗಾಲಯ ಸಹಾಯಕರು ಹಾಗೂ ಡೇಟಾ ಎಂಟ್ರಿ ಆಪರೇಟರ್ ಮತ್ತು ಜಿಲ್ಲಾ ಪ್ರಯೋಗಾಲಯ ಪರಿಚಾರಕರು ಹಾಗೂ ನೀರಿನ ಮಾದರಿ ಸಂಗ್ರಹಗಾರರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿರುತ್ತದೆ.

88 ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸಲು ಅ.16 ಕೊನೆಯ ದಿನ

 

ಇಲಾಖೆಯು ಗ್ರಾಮೀಣ ಪ್ರದೇಶಗಳ ಜಲಮೂಲಗಳ ಗುಣಮಟ್ಟವನ್ನು ಪರೀಕ್ಷಿಸುವ ಸಲುವಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಈ ಪ್ರಯೋಗಾಲಯಗಳಲ್ಲಿ ಕಾರ್ಯ ನಿರ್ವಹಿಸಲು ವಿವಿಧ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಸೂಚನೆ ಹೊರಡಿಸಲಾಗಿದೆ.ಆಸಕ್ತರು ಅಧಿಸೂಚನೆ ಓದಿಕೊಂಡು ಅಕ್ಟೋಬರ್ 16,2019ರೊಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆ ಮತ್ತು ಅರ್ಜಿ ಸಲ್ಲಿಕೆಯ ಬಗೆಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ಖಾಲಿ ಹುದ್ದೆಗಳ ವಿವರ:

ಖಾಲಿ ಹುದ್ದೆಗಳ ವಿವರ:

ರಾಸಾಯನಿಕ ತಜ್ಞರು (ಜಿಲ್ಲಾ ಪ್ರಯೋಗಾಲಯಗಳಲ್ಲಿ)- 7 ಹುದ್ದೆಗಳು

ರಾಸಾಯನಿಕ ತಜ್ಞರು(ತಾಲ್ಲೂಕು ಪ್ರಯೋಗಾಲಯಗಳಲ್ಲಿ)- 20 ಹುದ್ದೆಗಳು

ಜಿಲ್ಲಾ ಪ್ರಯೋಗಾಲಯ ಸಹಾಯಕರು ಹಾಗೂ ಡೇಟಾ ಎಂಟ್ರಿ ಆಪರೇಟರ್ -10 ಹುದ್ದೆಗಳು

ಜಿಲ್ಲಾ ಪ್ರಯೋಗಾಲಯ ಪರಿಚಾರಕರು ಹಾಗೂ ನೀರಿನ ಮಾದರಿ ಸಂಗ್ರಹಗಾರರು-51 ಹುದ್ದೆಗಳು

ವಿದ್ಯಾರ್ಹತೆಯ ವಿವರ:

ವಿದ್ಯಾರ್ಹತೆಯ ವಿವರ:

ರಾಸಾಯನಿಕ ತಜ್ಞರು (ಜಿಲ್ಲಾ ಪ್ರಯೋಗಾಲಯಗಳಲ್ಲಿ) ಹುದ್ದೆಗಳಿಗೆ ಬಿಎಸ್ಸಿಯಲ್ಲಿ ರಸಾಯನಶಾಸ್ತ್ರ ಕಡ್ಡಾಯವಾಗಿ ಅಥವಾ ಎಂಎಸ್ಸಿಯಲ್ಲಿ ರಸಾಯನಶಾಸ್ತ್ರ/ಬಯೋಕೆಮಿಸ್ಟ್ರಿ/ ಮೈಕ್ರೋಬಯೋಲಜಿ/ ಎನ್ವಿರಾನ್‌ಮೆಂಟಲ್ ಸೈನ್ಸ್ ಅಥವಾ ಬಯೋಟೆಕ್ನಾಲಜಿ ವಿಷಯದಲ್ಲಿ ಶೇ.60 ರಷ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ತೇರ್ಗಡೆ ಹೊಂದಿರಬೇಕು.

ಜಿಲ್ಲಾ ಪ್ರಯೋಗಾಲಯ ಸಹಾಯಕರು ಹಾಗೂ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಬಿಎಸ್ಸಿ ಯಲ್ಲಿ ರಸಾಯನಶಾಸ್ತ್ರ ಅಥವಾ ಡಿಪ್ಲೊಮ ಇನ್‌ ಲ್ಯಾಬ್ ಟೆಕ್ನಿಷಿಯನ್ ವಿದ್ಯಾರ್ಹತೆಯನ್ನು ಶೇ.60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಜಿಲ್ಲಾ ಪ್ರಯೋಗಾಲಯ ಪರಿಚಾರಕರು ಹಾಗೂ ನೀರಿನ ಮಾದರಿ ಸಂಗ್ರಹಗಾರರು ಹುದ್ದೆಗಳಿಗೆ ಪಿಯುಸಿಯಲ್ಲಿ PCM ವಿಷಯಗಳಲ್ಲಿ ಅಧ್ಯಯನ ಮಾಡಿರಬೇಕು ಜೊತೆಗೆ ಶೇ.60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ವಯೋಮಿತಿಯ ವಿವರ:
 

ವಯೋಮಿತಿಯ ವಿವರ:

ರಾಸಾಯನಿಕ ತಜ್ಞರು ಮತ್ತು ಜಿಲ್ಲಾ ಪ್ರಯೋಗಾಲಯ ಸಹಾಯಕರು ಹಾಗೂ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಗರಿಷ್ಟ 45 ವರ್ಷ ಮತ್ತು ಜಿಲ್ಲಾ ಪ್ರಯೋಗಾಲಯ ಪರಿಚಾರಕರು ಹಾಗೂ ನೀರಿನ ಮಾದರಿ ಸಂಗ್ರಹಗಾರರು ಹುದ್ದೆಗಳಿಗೆ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರು.

ವೇತನದ ವಿವರ:

ವೇತನದ ವಿವರ:

ರಾಸಾಯನಿಕ ತಜ್ಞರು(ಜಿಲ್ಲಾ ಪ್ರಯೋಗಾಲಯಗಳಲ್ಲಿ) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 30,000/-ರೂ,

ರಾಸಾಯನಿಕ ತಜ್ಞರು(ತಾಲ್ಲೂಕು ಪ್ರಯೋಗಾಲಯಗಳಲ್ಲಿ) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000/-ರೂ,

ಜಿಲ್ಲಾ ಪ್ರಯೋಗಾಲಯ ಸಹಾಯಕರು ಹಾಗೂ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 15,000/-ರೂ ಮತ್ತು ಜಿಲ್ಲಾ ಪ್ರಯೋಗಾಲಯ ಪರಿಚಾರಕರು ಹಾಗೂ ನೀರಿನ ಮಾದರಿ ಸಂಗ್ರಹಗಾರರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 15,000/-ರೂ ವೇತನವನ್ನು ನೀಡಲಾಗುವುದು.

ನೇಮಕಾತಿ ವಿಧಾನ:

ನೇಮಕಾತಿ ವಿಧಾನ:

ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಅನುಭವದ ಆಧಾರ ಮೇಲೆ ಆಯ್ಕೆ ಪಟ್ಟಿ ರಚಿಸಿ, ಅವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದ ಬಗಗೆ ಅಭ್ಯರ್ಥಿಗಳಿಗೆ ಇ-ಮೇಲ್ ಮತ್ತು ದೂರವಾಣಿ ಮೂಲಕ ತಿಳಿಸಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?:

ಅರ್ಜಿ ಸಲ್ಲಿಸುವುದು ಹೇಗೆ?:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅಭ್ಯರ್ಥಿಗಳು ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಅನುಭವ, ಗುರುತಿನ ಚೀಟಿ ಮತ್ತು ಇತರೆ ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಅರ್ಜಿಯನ್ನು ರಿಜಿಸ್ಟರ್ಡ್‌ ಪೋಸ್ಟ್/ಸ್ಪೀಡ್ ಪೋಸ್ಟ್/ ಕೋರಿಯರ್ ಮೂಲಕ ಕಚೇರಿಯ ವಿಳಾಸಕ್ಕೆ ಅಕ್ಟೋಬರ್ 16,2019 ರೊಳಗೆ ತಲುಪುವಂತೆ ಕಳುಹಿಸಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸತಕ್ಕದ್ದು.

ಕಚೇರಿಯ ವಿಳಾಸ:

ಆಯುಕ್ತರು,

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,

2ನೇ ಮಹಡಿ, 'ಇ' ಬ್ಲಾಕ್,

ಕೆ.ಹೆಚ್‌.ಬಿ ಕಾಂಪ್ಲೆಕ್ಸ್,

ಕಾವೇರಿ ಭವನ,

ಬೆಂಗಳೂರು-560009

ಅಧಿಕೃತ ವೆಬ್‌ಸೈಟ್‌ : http://rdpr.kar.nic.in/index.asp

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

For Quick Alerts
ALLOW NOTIFICATIONS  
For Daily Alerts

English summary
Rural drinking water and sanitation department recruitment notification has been released on official website for the recruitment of 88 various posts. Interested candidates can apply.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X