ಬೆಳಗಾವಿಯ ಎಸ್ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

Posted By:

ಬೆಳಗಾವಿಯ ಎಸ್ ನಿಜಲಿಂಗಪ್ಪ ಶುಗರ್ ಇನ್ಸಿಟಿಟ್ಯೂಟ್ ನಲ್ಲಿ ಅವಶ್ಯವಿರುವ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಈ ಸಂಸ್ಥೆಯು ಶುಗರ್ ಟೆಕ್ನಾಲಜಿ ಮತ್ತು ಶುಗರ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಇಲ್ಲಿ ಕಾರ್ಯ ನಿರ್ಹಹಿಸಲು ಇಂಜಿನಿಯರಿಂಗ್ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಮುಗಿಸಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ.

ಎಸ್ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ನೇಮಕಾತಿ

ಹುದ್ದೆಗಳ ವಿವರ

ಹೆಡ್ ಅಗ್ರಿಕಲ್ಚರಲ್ ಡಿವಿಷನ್-01 ಹುದ್ದೆ

ವೇತನ ಶ್ರೇಣಿ: ರೂ.37400-67000/-
ವಯೋಮಿತಿ: ಗರಿಷ್ಠ 60 ವರ್ಷ
ವಿದ್ಯಾರ್ಹತೆ: ಅಗ್ರಿಕಲ್ಚರ್ ವಿಷಯದಲ್ಲಿ ಎಂ.ಎಸ್ಸಿ, ಪಿಎಚ್.ಡಿ ಪಡೆದಿದ್ದು, ಸಕ್ಕರೆ ಕಾರ್ಖಾನೆಗಳಲ್ಲಿ 15 ವರ್ಷ ಸೇವಾನುಭವವಿರಬೇಕು. ಕನ್ನಡ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು.

ಅಸಿಸ್ಟೆಂಟ್ ಪ್ರೊಫೆಸರ್ (ಪ್ಲಾಂಟ್ ಬ್ರೀಡಿಂಗ್/ಬಯೋ ಟೆಕ್ನಾಲಜಿ)-01 ಹುದ್ದೆ

ವೇತನ ಶ್ರೇಣಿ: ರೂ.15600-39100/-
ವಯೋಮಿತಿ: ಗರಿಷ್ಠ 60 ವರ್ಷ
ವಿದ್ಯಾರ್ಹತೆ: ಎಂ.ಎಸ್ಸಿ ಇನ್ ಪ್ಲಾಂಟ್ ಬ್ರೀಡಿಂಗ್/ಬಯೋ ಟೆಕ್ನಾಲಜಿ ಜೊತೆಗೆ 10 ವರ್ಷಗಳ ಸೇವಾನುಭವ ಅಥವಾ ಪಿಎಚ್.ಡಿ ಯೊಂದಿಗೆ ಐದು ವರ್ಷಗಳ ಸಂಬಂಧ ಪಟ್ಟ ಕ್ಷೇತ್ರದಲ್ಲಿ ಅನುಭವವಿರಬೇಕು.
ಕನ್ನಡ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು.

ಹೆಡ್ ಶುಗರ್ ಡಿವಿಷನ್ ಟೆಕ್ನಾಲಜಿ-01 ಹುದ್ದೆ

ವೇತನ ಶ್ರೇಣಿ: ರೂ.37400-67000/-
ವಯೋಮಿತಿ: ಗರಿಷ್ಠ 55 ವರ್ಷ
ವಿದ್ಯಾರ್ಹತೆ: ಶುಗರ್ ಟೆಕ್ನಾಲಜಿ ವಿಷಯದಲ್ಲಿ ಪದವಿ/ಇಂಜಿನಿಯರಿಂಗ್/ಪಿ.ಜಿ ಡಿಪ್ಲೊಮಾ ಪೂರೈಸಿರಬೇಕು. ಸಕ್ಕರೆ ಕಾರ್ಖಾನೆಯಲ್ಲಿ 18 ವರ್ಷ ಕಾರ್ಯ ನಿರ್ವಹಿಸಿದ ಅನುಭವವಿರಬೇಕು.

ಶುಗರ್ ಕೆಮಿಸ್ಟ್-01 ಹುದ್ದೆ

ವೇತನ ಶ್ರೇಣಿ: ರೂ.28100-50100/-
ವಯೋಮಿತಿ: ಗರಿಷ್ಠ 40 ವರ್ಷ
ವಿದ್ಯಾರ್ಹತೆ: ಶುಗರ್ ಟೆಕ್ನಾಲಜಿ ವಿಷಯದಲ್ಲಿ ಪದವಿ/ಇಂಜಿನಿಯರಿಂಗ್/ಪಿ.ಜಿ ಡಿಪ್ಲೊಮಾ ಪೂರೈಸಿರಬೇಕು. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನಿಷ್ಠ ಐದು ವರ್ಷಗಳ ಸೇವಾ ಅನುಭವವಿರಬೇಕು.

ಹೆಡ್ ಶುಗರ್ ಇಂಜಿನಿಯರಿಂಗ್ ಅಂಡ್ ಕೊ-ಜನರೇಟರ್ ಡಿವಿಷನ್-01 ಹುದ್ದೆ

ವೇತನ ಶ್ರೇಣಿ: ರೂ.37400-67000/-
ವಯೋಮಿತಿ: ಗರಿಷ್ಠ 55 ವರ್ಷ
ವಿದ್ಯಾರ್ಹತೆ: ಮೆಕಾನಿಕಲ್ ಇಂಜಿನಿಯರಿಂಗ್ ಪೂರೈಸಿರಬೇಕು. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನಿಷ್ಠ 18 ವರ್ಷಗಳ ಸೇವಾ ಅನುಭವವಿರಬೇಕು.

ಶುಗರ್ ಇಂಜಿನಿಯರ್-01 ಹುದ್ದೆ

ವೇತನ ಶ್ರೇಣಿ: ರೂ.28100-50100/-
ವಯೋಮಿತಿ: ಗರಿಷ್ಠ 35 ವರ್ಷ
ವಿದ್ಯಾರ್ಹತೆ: ಮೆಕಾನಿಕಲ್/ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪೂರೈಸಿರಬೇಕು. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನಿಷ್ಠ ಐದು ವರ್ಷಗಳ ಸೇವಾ ಅನುಭವವಿರಬೇಕು.

ಹೆಡ್ ಆಲ್ಕೊಹಾಲ್ ಟೆಕ್ನಾಲಜಿ-01 ಹುದ್ದೆ

ವೇತನ ಶ್ರೇಣಿ: ರೂ.37400-67000/-
ವಯೋಮಿತಿ: ಗರಿಷ್ಠ 45 ವರ್ಷ
ವಿದ್ಯಾರ್ಹತೆ: ಎಂ.ಎಸ್ಸಿ/ಬಿ.ಎಸ್ಸಿ ಇನ್ ಆಲ್ಕೊಹಾಲ್ ಟೆಕ್ನಾಲಜಿ.ಪೂರೈಸಿರಬೇಕು. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನಿಷ್ಠ 10 ವರ್ಷಗಳ ಸೇವಾ ಅನುಭವವಿರಬೇಕು.

ಎನ್ವಿರಾನ್ಮೆಂಟ್ ಇಂಜಿನಿಯರ್:-01 ಹುದ್ದೆ

ವೇತನ ಶ್ರೇಣಿ: ರೂ.22800-43200/-
ವಯೋಮಿತಿ: ಗರಿಷ್ಠ 40 ವರ್ಷ
ವಿದ್ಯಾರ್ಹತೆ: ಎನ್ವಿರಾನ್ಮೆಂಟ ವಿಷಯದಲ್ಲಿ ಇಂಜಿನಿಯರಿಂಗ್ ಅಥವಾ ಸ್ನಾತಕ/ಸ್ನಾತಕೋತ್ತರ ಪದವಿ ಗಳಿಸಿರಬೇಕು. ಶುಗರ್ ಫ್ಯಾಕ್ಟರಿಗಳಲ್ಲಿ ಕನಿಷ್ಠ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು

ಡಿಸ್ಟಿಲೆರಿ ಕೆಮಿಸ್ಟ್-01 ಹುದ್ದೆ

ವೇತನ ಶ್ರೇಣಿ: ರೂ.28100-50100/-
ವಯೋಮಿತಿ: ಗರಿಷ್ಠ 40 ವರ್ಷ
ವಿದ್ಯಾರ್ಹತೆ: ವಿಜ್ಞಾನ(ಕೆಮಿಸ್ಟ್ರಿ) ವಿಷಯದಲ್ಲಿ ಸ್ನಾತಕ ಪೂರೈಸಿರಬೇಕು. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನಿಷ್ಠ ಐದು ವರ್ಷಗಳ ಸೇವಾ ಅನುಭವವಿರಬೇಕು.

ನೇಮಕಾತಿ

ಸರ್ಕಾರಿ ನಿಯಮಗಳ ಅನುಸಾರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವಿಕೆ

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ವಿವರವಿರುವ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಕಚೇರಿ ವಿಳಾಸಕ್ಕೆ ಕಳುಹಿಸತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09-08-2017

ಕಚೇರಿ ವಿಳಾಸ

ಎಸ್ ನಿಜಲಿಂಗಪ್ಪ ಶುಗರ್ ಇನ್ಸ್ಟಿಟ್ಯೂಟ್,
ಬೆಳಗಾವಿ ಸಿಟಿಎಸ್ ನಂ.4125/1B
ಗಣೇಶ ಪುರ ರಸ್ತೆ, ಲಕ್ಷ್ಮಿ ಟೆಕ್
ಬೆಳಗಾವಿ-590009

ಹೆಚ್ಚಿನ ಮಾಹಿತಿಗಾಗಿ www.nijalingappasugar.com ಗಮನಿಸಿ

English summary
S.Nijalingappa Sugar Institute, Belagavi is engaged in training, research and development infield of Sugarcane, Sugar Technology, Sugar Engineering & Co-Generation and Alcohol Technology.Institute requires technical candidates for carrying out its activities.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia