ಎಸ್ ಬಿ ಐ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ದಲ್ಲಿ ಡೆಪ್ಯುಟಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಸೇರಿದಂತೆ ಒಟ್ಟು 21 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ದಲ್ಲಿ ಭಾರತದಾದ್ಯಂತ ಒಟ್ಟು 21 ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಆಗಸ್ಟ್ 10, 2017 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಡೆಪ್ಯುಟಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಸೇರಿದಂತೆ ಒಟ್ಟು 21 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಎಸ್ ಬಿ ಐ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಹುದ್ದೆಗಳ ವಿವರ

ಡೆಪ್ಯುಟಿ ಜನರಲ್ ಮ್ಯಾನೇಜರ್ (ಸೈಬರ್ ಸೆಕ್ಯುರಿಟಿ)-01 ಹುದ್ದೆ
ವಿದ್ಯಾರ್ಹತೆ: ಬಿಇ ಅಥವಾ ಬಿಟೆಕ್ ಪದವಿಯೊಂದಿಗೆ ಇನ್ಫರ್ಮೇಷನ್ ಸೆಕ್ಯುರಿಟಿ/ಐಟಿ ರಿಸ್ಕ್ ಮ್ಯಾನೇಜ್ಮೆಂಟ್/ಇನ್ಫರ್ಮೇಷನ್ ಅಷ್ಯುರೆನ್ಸ್/ಸೈಬರ್ ಸೆಕ್ಯುರಿಟಿ ಮತ್ತು ಡಿಜಿಟಲ್ ಥ್ರೆಟ್ ಮ್ಯಾನೇಜ್ಮೆಂಟ್ ಜ್ಞಾನ ಹೊಂದಿದ್ದು, ಸಿಸ್ಟಂ ಸೆಕ್ಯುರಿಟಿಗೆ ಸಂಬಂಧಿಸಿದ ಸರ್ಟಿಫಿಕೇಟ್ ಹೊಂದಿರಬೇಕು.
ವಯೋಮಿತಿ: 28 ರಿಂದ 45 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ವೇತನ ಶ್ರೇಣಿ: ರೂ.68680-1960/4-76520

ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಸೈಬರ್ ಸೆಕ್ಯುರಿಟಿ)-01 ಹುದ್ದೆ
ವಿದ್ಯಾರ್ಹತೆ: ಬಿಇ ಅಥವಾ ಬಿಟೆಕ್ ಪದವಿಯೊಂದಿಗೆ ಇನ್ಫರ್ಮೇಷನ್ ಸೆಕ್ಯುರಿಟಿ/ಐಟಿ ರಿಸ್ಕ್ ಮ್ಯಾನೇಜ್ಮೆಂಟ್/ಇನ್ಫರ್ಮೇಷನ್ ಅಷ್ಯುರೆನ್ಸ್/ಸೈಬರ್ ಸೆಕ್ಯುರಿಟಿ ಮತ್ತು ಡಿಜಿಟಲ್ ಥ್ರೆಟ್ ಮ್ಯಾನೇಜ್ಮೆಂಟ್ ಜ್ಞಾನ ಹೊಂದಿದ್ದು, ಸಿಸ್ಟಂ ಸೆಕ್ಯುರಿಟಿಗೆ ಸಂಬಂಧಿಸಿದ ಸರ್ಟಿಫಿಕೇಟ್ ಹೊಂದಿರಬೇಕು.
ವಯೋಮಿತಿ: 28 ರಿಂದ 40 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ವೇತನ ಶ್ರೇಣಿ: ರೂ.59170-1650/2-62470-1800/ 2-66070

ಡೆಪ್ಯುಟಿ ಮ್ಯಾನೇಜರ್ (ಐಸ್ ಆಡಿಟ್)-05 ಹುದ್ದೆಗಳು
ವಿದ್ಯಾರ್ಹತೆ: ಇನ್ಫರ್ಮೇಷನ್ ಟೆಕ್ನಾಲಜಿ/ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಅಪ್ಲಿಕೇಷನ್/ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಅಂಡ್ ಇನ್ಸ್ಟ್ರುಮೆಂಟೇಷನ್ ವಿಷಯಗಳಲ್ಲಿ ಬಿಇ/ಬಿ.ಟೆಕ್ ಗಳಿಸಿರಬೇಕು. ಜೊತೆಗೆ ಸಿಐಎಸ್ಎ ಸರ್ಟಿಫಿಕೇಟ್ ಪಡೆದಿರಬೇಕು.
ವಯೋಮಿತಿ: 21 ರಿಂದ 35 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ವೇತನ ಶ್ರೇಣಿ: ರೂ.31705 -1145/1- 32850 -1310/10 - 45950

ಉಪಾಧ್ಯಕ್ಷ-ಕಸ್ಟಮರ್ ಅನಾಲಿಟಿಕ್ಸ್-01 ಹುದ್ದೆ (ಮೂರು ವರ್ಷಗಳ ಗುತ್ತಿಗೆ)
ವಿದ್ಯಾರ್ಹತೆ: ಸ್ಟಾಟಿಸ್ಟಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ/ಎಂಬಿಎ (ಮಾರ್ಕೆಟಿಂಗ್/ಫೈನಾನ್ಸ್)/ಎಂಸಿಎ ಪೂರ್ಣಗೊಳಿಸಿರಬೇಕು.
ವಯೋಮಿತಿ: 26 ರಿಂದ 45 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.

ಸಿನಿಯರ್ ಮ್ಯಾನೇಜರ್(ಪ್ರಾಡಕ್ಟ್ ಸ್ಪೆಷಲಿಸ್ಟ್)-02 ಹುದ್ದೆಗಳು (ಮೂರು ವರ್ಷಗಳ ಗುತ್ತಿಗೆ)
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಎ ಪಡೆದಿರಬೇಕು
ವಯೋಮಿತಿ: 27 ರಿಂದ 35 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.

ಉಪಾಧ್ಯಕ್ಷ (ಕಂಪ್ಲೈಂಟ್ಸ್ ಮ್ಯಾನೇಜ್ಮೆಂಟ್)-01 ಹುದ್ದೆ (ಮೂರು ವರ್ಷಗಳ ಗುತ್ತಿಗೆ)
ವಿದ್ಯಾರ್ಹತೆ: ಇಂಜಿನಿಯರಿಂಗ್ ಪದವಿಯೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಎ (ಮಾರ್ಕೆಟಿಂಗ್) ಪಡೆದಿರಬೇಕು
ವಯೋಮಿತಿ: 27 ರಿಂದ 35 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.

ಸಹಾಯಕ ಉಪಾಧ್ಯಕ್ಷ (ಐಸ್ ಆಡಿಟ್)-05 ಹುದ್ದೆಗಳು (ಮೂರು ವರ್ಷಗಳ ಗುತ್ತಿಗೆ)
ವಿದ್ಯಾರ್ಹತೆ: ಇನ್ಫರ್ಮೇಷನ್ ಟೆಕ್ನಾಲಜಿ/ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಅಪ್ಲಿಕೇಷನ್/ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಅಂಡ್ ಇನ್ಸ್ಟ್ರುಮೆಂಟೇಷನ್ ವಿಷಯಗಳಲ್ಲಿ ಬಿಇ/ಬಿ.ಟೆಕ್ ಗಳಿಸಿರಬೇಕು. ಜೊತೆಗೆ ಸಿಐಎಸ್ಎ ಸರ್ಟಿಫಿಕೇಟ್ ಪಡೆದಿರಬೇಕು.
ವಯೋಮಿತಿ: 32 ರಿಂದ 45 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.

ಸೀನಿಯರ್ ಮ್ಯಾನೇಜರ್ (ಐಸ್ ಆಡಿಟ್)-05 ಹುದ್ದೆಗಳು (ಮೂರು ವರ್ಷಗಳ ಗುತ್ತಿಗೆ)
ವಿದ್ಯಾರ್ಹತೆ: ಇನ್ಫರ್ಮೇಷನ್ ಟೆಕ್ನಾಲಜಿ/ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಅಪ್ಲಿಕೇಷನ್/ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಅಂಡ್ ಇನ್ಸ್ಟ್ರುಮೆಂಟೇಷನ್ ವಿಷಯಗಳಲ್ಲಿ ಬಿಇ/ಬಿ.ಟೆಕ್ ಗಳಿಸಿರಬೇಕು. ಜೊತೆಗೆ ಸಿಐಎಸ್ಎ ಸರ್ಟಿಫಿಕೇಟ್ ಪಡೆದಿರಬೇಕು.
ವಯೋಮಿತಿ: 28 ರಿಂದ 40 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ವೆಬ್ಸೈಟ್ ವಿಳಾಸದಿಂದ ಅರ್ಜಿಗಳನ್ನು ಪಡೆದು, ಸ್ವಯಂ ದೃಢೀಕರಿಸಿದ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ತಲುಪಿಸಲು ಕೋರಿದೆ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.600/-
  • ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/-

ಪ್ರಮುಖ ದಿನಾಂಕಗಳು

  • ಆನ್-ಲೈನ್ ಮೂಲಕ ಅರ್ಜಿ ನೋಂದಾಯಿಸಲು ಕೊನೆಯ ದಿನಾಂಕ: 10-08-2017
  • ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಲು ಕೊನೆಯ ದಿನಾಂಕ: 21-08-2017

ಹೆಚ್ಚಿನ ಮಾಹಿತಿಗಾಗಿ www.sbi.co.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
State Bank of India (SBI) has advertised a notification for the recruitment of Specialist Cadre Officer (DGM. AGM, Dy. Manager, Vice President, Senior Manager, Vice President & other vacancies in on regular & contract basis.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X