ಎಸ್‌ಬಿಐನಲ್ಲಿ 2313 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

Posted By: Vinaykumar

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬೆಷನರಿ ಆಫೀಸರ್‌ಗಳ ನೇಮಕಕ್ಕೆ ಮುಂದಾಗಿದೆ,ರಾಜ್ಯದ ಒಂಬತ್ತು ಕೇಂದ್ರಗಳಲ್ಲಿ ಆನ್‌ಲೈನ್‌ ಪರೀಕ್ಷೆ ನಡೆಯಲಿದ್ದು ಅರ್ಹ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.

ಪ್ರೊಬೆಷನರಿ ಆಫೀಸರ್‌ಗಳ ನೇಮಕ

ಎಸ್‌ಬಿಐನಲ್ಲಿ ಪ್ರೊಬೆಷನರಿ ಆಫೀಸರ್ ಹುದ್ದೆಗಳ ನೇಮಕ

 ಖಾಲಿ ಹುದ್ದೆಗಳ ಸಂಖ್ಯೆ 2313
 ಅರ್ಜಿ ಸಲ್ಲಿಸಲು ಕೊನೆಯ ದಿನ
 ಮಾರ್ಚ್‌ 6, 2017
 ಪೂರ್ವಭಾವಿ ಪರೀಕ್ಷೆ
 ಏಪ್ರಿಲ್ 29,30 ಮತ್ತು ಮೇ 06,07
 ಮುಖ್ಯ ಪರೀಕ್ಷೆ
 ಜೂನ್ 04, 2017
 ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು
 09

 ಮುಖ್ಯ ಪರೀಕ್ಷಾ ಕೇಂದ್ರ

 ಬೆಂಗಳೂರು
 ಗುಂಪು ಚರ್ಚೆ ಮತ್ತು ಸಂದರ್ಶನ
 ಜುಲೈ 10ರ ನಂತರ
 ಅಂತಿಮ ಫಲಿತಾಂಶ ಪ್ರಕಟಣೆ
 ಆಗಸ್ಟ್ 04, 2017

ಎಸ್ ಬಿ ಐ ಈ ಬಾರಿ 2313 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಅದರಲ್ಲಿ 313 ಬ್ಯಾಕ್ ಲಾಗ್ ಹುದ್ದೆಗಳು ಸೇರಿವೆ . ಒಟ್ಟು 2313 ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ 347, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 350 ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 606 ಹುದ್ದೆಗಳನ್ನು ಮೀಸಲಿಡಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 7ರಿಂದ ಮಾರ್ಚ್‌ 6ರ ತನಕ ಅವಕಾಶ ನೀಡಲಾಗಿದೆ. ಏಪ್ರಿಲ್‌ ಮತ್ತು ಮೇನಲ್ಲಿ ಪ್ರಿಲಿಮ್ಸ್‌ ನಡೆಯಲಿದ್ದು, ಜೂನ್‌ನಲ್ಲಿ ಮೇನ್‌ ಎಗ್ಸಾಮ್‌ ನಡೆಯಲಿದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು

ಯಾವುದೇ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಂತೆಯೇ ಅಂತಿಮ ವರ್ಷದ /ಸೆಮಿಸ್ಟರ್‌ ಪದವಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 21ರಿಂದ 30 ವರ್ಷ.

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 600 ರೂ. ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆ

ನಿಗದಿ ಪಡಿಸಿದ ದಿನಾಂಕದಂದು ಮೊದಲ ಹಂತದ ಪೂರ್ವಭಾವಿ (ಪ್ರಿಲಿಮ್ಸ್‌) ಪರೀಕ್ಷೆ ನಡೆಯಲಿದೆ. ರಾಜ್ಯದಲ್ಲಿ ಬೆಳಗಾವಿ, ಬೆಂಗಳೂರು, ಬೀದರ್‌, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ. ಈ ಪರೀಕ್ಷೆಯಲ್ಲಿ ಬ್ಯಾಂಕ್‌ ನಿಗದಿಪಡಿಸಿದಷ್ಟು ಅಂಕ ಪಡೆದು ತೇರ್ಗಡೆಯಾದವರು ಮುಖ್ಯ (ಮೇನ್‌) ಪರೀಕ್ಷೆ ಬರೆಯಲು ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ ನಡೆಯಲಿದೆ.ಈ ಎರಡೂ ಮಾದರಿಯ ಪರೀಕ್ಷೆಗಳು ಆನ್‌ಲೈನ್‌ನಲ್ಲೇ ನಡೆಯಲಿದ್ದು, ವಸ್ತುನಿಷ್ಠ ಮತ್ತು ವಿವರಣಾತ್ಮಕ ಮಾದರಿಯ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರು ಮುಂದಿನ ಹಂತದಲ್ಲಿ ನಡೆಯಲಿರುವ ಗುಂಪು ಚರ್ಚೆ ಮತ್ತು ಸಂದರ್ಶನದಲ್ಲಿ ಭಾಗವಹಿಸಿ ನೇಮಕಕ್ಕೆ ಅರ್ಹತೆ ಪಡೆಯಬೇಕಾಗುತ್ತದೆ.

ಪ್ರೊಬೆಷನರಿ ಆಫೀಸರ್‌ ಆಗಿ ಆಯ್ಕೆಯಾದವರು ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಎರಡು ವರ್ಷದ ತರಬೇತಿಯ ನಂತರ ಅಭ್ಯರ್ಥಿಗಳನ್ನು ಆಫೀಸರ್‌ಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಹೆಚ್ಚಿನ ವಿವರಗಳಿಗೆ: www.sbi.co.in

English summary
The most awaited recruitment notification of SBI PO Recruitment Exam 2017 is released at the official website i.e sbi.co.in

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia