ಎಸ್ ಬಿ ಐ ನಲ್ಲಿ 554 ಹುದ್ದೆಗಳ ನೇಮಕಾತಿ

Posted By:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ದಲ್ಲಿ ಭಾರತದಾದ್ಯಂತ 554 ಸ್ಪೆಶಲ್ ಮ್ಯಾನೇಜ್ ಮೆಂಟ್ ಎಗ್ಸಿಕ್ಯುಟಿವ್ ಹುದ್ದೆಗಳು ಖಾಲಿ ಇದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಮೇ 18, 2017 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹುದ್ದೆಗಳ ವಿವರ

ಒಟ್ಟು ಹುದ್ದೆ: 554

ಹುದ್ದೆ: ಸ್ಪೆಶಲಿಸ್ಟ್ ಕೆಡರ್ ಆಫಿಸರ್ (ಎಸ್ ಎಂಇ) (ಬ್ಯಾಂಕಿಂಗ್)

  • ಮಿಡ್ಲ್ ಮ್ಯಾನೇಜ್ ಮೆಂಟ್ ಗ್ರೇಡ್ ಸ್ಕೇಲ್- II
  • ಮಿಡ್ಲ್ ಮ್ಯಾನೇಜ್ ಮೆಂಟ್ ಗ್ರೇಡ್ ಸ್ಕೇಲ್ -III

ವೇತನ ಶ್ರೇಣಿ : 31705 - 45950 (ತಿಂಗಳಿಗೆ)

ಎಸ್ ಬಿ ಐ ನೇಮಕಾತಿ

ವಿದ್ಯಾರ್ಹತೆ

ಸಿಎ/ ಐಸಿಡಬ್ಲ್ಯುಎ/ ಎಸಿಎಸ್/ ಎಂಬಿಎ (ಹಣಕಾಸು/ ಅಥವಾ ಸಮಾನ ಕೋರ್ಸ್) ಅಥವಾ ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಪದವಿ.

ಇತರೆ ಅರ್ಹತೆ

  • ಮಿಡ್ಲ್ ಮ್ಯಾನೇಜ್ ಮೆಂಟ್ ಗ್ರೇಡ್ ಸ್ಕೇಲ್- II : ಮ್ಯಾನೇಜ್ಮೇಂಟ್ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷದ ಸೇವಾ ಅನುಭವ.
  • ಮಿಡ್ಲ್ ಮ್ಯಾನೇಜ್ ಮೆಂಟ್ ಗ್ರೇಡ್ ಸ್ಕೇಲ್ -III : ಮ್ಯಾನೇಜ್ಮೇಂಟ್ ಕ್ಷೇತ್ರದಲ್ಲಿ ಐದು ವರ್ಷಗಳ ಅನುಭವ ಮತ್ತು ಕಾರ್ಪೋರೇಟ್ ಕ್ಷೇತ್ರದಲ್ಲಿ ಎರಡು ವರ್ಷಗಳ ಅನುಭವ.

ವಯೋಮಿತಿ

31 ಮಾರ್ಚ್ 2017 ಕ್ಕೆ ಅನ್ವಯವಾಗುವಂತೆ 25 ರಿಂದ 40 ವರ್ಷದೊಳಗಿನವರಾಗಿರಬೇಕು.

ಅರ್ಜಿ ಸಲ್ಲಿಕೆ

  • ಅಭ್ಯರ್ಥಿಗಳು ಆನ್-ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ಆನ್-ಲೈನ್ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನದ ಮೂಲಕ ಆಯ್ಜೆ ಮಾಡಿಕೊಳ್ಳಲಾಗುವುದು. ಮೊದಲು ಲಿಖಿತ ಪರೀಕ್ಷೆ ನಡೆಸಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ಗುಂಪು ಚರ್ಚೆಗೆ ಒಳಪಡಿಸಲಾಗುತ್ತದೆ. ಆ ನಂತರ ಸಂದರ್ಶನ ಮಾಡಿ ದಾಖಲೆಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ

ಆಸಕ್ತರು ಆನ್ ಲೈನ್ ಮೂಲಕವೇ ದೆಬಿಟ್/ ಕ್ರೆಡಿಟ್/ ನೆಟ್ ಬ್ಯಾಂಕಿಂಗ್ ಬಳಸಿ ಅರ್ಜಿ ಸಲ್ಲಿಸತಕ್ಕದ್ದು.

  • ಅರ್ಜಿ ಶುಲ್ಕ ಸಾಮಾನ್ಯರಿಗೆ 600/- ರೂ.
  • ಎಸ್ಸಿ/ಎಸ್ಟಿ/ವಿಕಲಚೇತನರಿಗೆ 100 ರೂ.

ಪರೀಕ್ಷಾ ಕೇಂದ್ರ

ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮೈಸೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ.

ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕ 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 18, 2017
ಪರೀಕ್ಷೆ ನಡೆಯುವ ದಿನಾಂಕ: 18-06-2017

English summary
State bank of India released new notification on their official website for the recruitment of total 554 (Five Hundred fifty Four) jobs for special management Executive (Banking) vacancies. Job seekers should apply online before 18th May 2017

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia