ಎಸ್ ಬಿ ಐ 31ವಿಶೇಷ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 31 ವಿಶೇಷ ಕೇಡರ್ ಅಧಿಕಾರಿ ಹುದ್ದೆಗಳನ್ನು ಒಪ್ಪಂದ ಅಥವಾ ನಿಯಮಿತ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಜನವರಿ 30,2019 ರೊಳಗೆ ಸಲ್ಲಿಸಬಹುದು. ಅರ್ಜಿಗಳ ಪ್ರಿಂಟೌಟ್ ಅನ್ನು ತೆಗೆದುಕೊಳ್ಳಲು ಫೆಬ್ರವರಿ 14,2019ಕೊನೆಯ ದಿನವಾಗಿರುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡೆಪ್ಯೂಟಿ ಮ್ಯಾನೇಜರ್ (ಸ್ಟ್ಯಾಟಿಸ್ಟೀಶಿಯನ್), ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ (ಡಿಜಿಟಲ್ ಇನಿಶಿಯೇಟಿವ್ಸ್), ಮ್ಯಾನೇಜರ್ (ಸರ್ವೀಸಿಂಗ್), ಮ್ಯಾನೇಜರ್ (ಬ್ಯುಸಿನೆಸ್ ಅನಾಲಿಸ್ಟ್), ಮ್ಯಾನೇಜರ್ (ಆನ್ ಲೈನ್ ಫುಲ್ ಫಿಲ್ಮೆಂಟ್/ಸೂಪರ್ ಸ್ಟೋರ್/ಇಂಟಿಗ್ರೇಶನ್ ಮತ್ತು ಜರ್ನೀಸ್), ಮ್ಯಾನೇಜರ್ (ಡಿಜಿಟಲ್ ಮಾರ್ಕೆಟಿಂಗ್), ಹೆಡ್ (ಲೀಗಲ್ ಮತ್ತು ಪ್ರಾಡಕ್ಟ್, ಇನ್ವೆಸ್ಟ್ ಮೆಂಟ್ ಮತ್ತು ರಿಸರ್ಚ್), DGM(NCLT),DGM(ಕಾನೂನು) ಮತ್ತು ಎಕ್ಸಿಕ್ಯೂಟಿವ್ (ಕ್ರೆಡಿಟ್ ಮಾನಿಟರಿಂಗ್) ಸ್ಥಾನಗಳನ್ನು ಭರ್ತಿ ಮಾಡಲಿದೆ.

SBI ವಿವಿಧ 31 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

CRITERIA DETAILS
Name Of The Posts ಸ್ಪೆಶಲ್ ಕೇಡರ್ ಆಫೀಸರ್ಸ್ ( 31ಸ್ಥಾನಗಳು)
Organisation ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
Educational Qualification LLB/LLM/MBA/BE/B.Tech/CA/ಹುದ್ದೆಗೆ ಸಂಬಂಧಪಟ್ಟ ಪದವೀದರರು
Experience ಅಪೇಕ್ಷಣೀಯ
Job Responsibilities ಹುದ್ದೆಗಳ ಅನುಸಾರ
Skills Required ಕಾನೂನು/ಆಡಳಿತ/ ಮಾರ್ಕೆಟಿಂಗ್ ಕೌಶಲ್ಯಗಳು
Job Location ಭಾರತ, ಮುಂಬೈ
Salary Scale ವರ್ಷಕ್ಕೆ 15 ರಿಂದ 52 ಲಕ್ಷ
Industry ಬ್ಯಾಂಕಿಂಗ್
Application Start Date January 9, 2019
Application End Date January 30, 2019

ವಿದ್ಯಾರ್ಹತೆ:

ಡೆಪ್ಯೂಟಿ ಮ್ಯಾನೇಜರ್ (ಸ್ಟ್ಯಾಟಿಸ್ಟೀಶಿಯನ್)- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯನ್ನು ಸ್ಟ್ಯಾಟಿಸ್ಟಿಕ್ಸ್ ಅಥವಾ ಡಾಟಾ ಅನಾಲಿಟಿಕ್ಸ್ ನಲ್ಲಿ ಶೇ 60%ರಷ್ಟು ಅಂಕಗಳೊಂದಿಗೆ ಸರ್ಕಾರ/AICTE ಇಂದ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಲ್ಲಿ ಉತ್ತೀರ್ಣರಾಗಿರಬೇಕು.

ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ ಮತ್ತು ಮ್ಯಾನೇಜರ್ಸ್ - ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್ ಸೈನ್ಸ್ / ಇನ್ಫರ್ಮೇಶನ್ ಟೆಕ್ನಾಲಜಿಯಲ್ಲಿ ಬಿ.ಇ ಅಥವಾ ಬಿ.ಟೆಕ್ ನಲ್ಲಿ ಮಾನ್ಯತೆ ಪಡೆದ ಸಂಸ್ಥೆ / ವಿಶ್ವವಿದ್ಯಾನಿಲಯದಲ್ಲಿ ಉತ್ತೀರ್ಣರಾಗಿರಬೇಕು. ಎಂ.ಬಿ.ಎ ಅಥವಾ ಹುದ್ದೆಗಳಿಗೆ ಸಂಬಂಧಪಟ್ಟಂತೆ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಹೆಡ್ (ಲೀಗಲ್)DGM (NCLT ಮತ್ತು ಕಾನೂನು- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಾನೂನಿನಲ್ಲಿ ಪದವಿ (3/5ವರ್ಷಗಳು) ಅಥವಾ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ / ವಿಶ್ವವಿದ್ಯಾನಿಲಯದಲ್ಲಿ ಉತ್ತೀರ್ಣರಾಗಿರಬೇಕು.

ಎಕ್ಸಿಕ್ಯೂಟಿವ್ (ಕ್ರೆಡಿಟ್ ಮಾನಿಟರಿಂಗ್): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಚಾರ್ಟೆಡ್ ಅಕೌಂಟ್ ಅರ್ಹತೆಯನ್ನು ಹೊಂದಿರಬೇಕು

ಹೆಡ್ ( ಪ್ರಾಡಕ್ಟ್, ಇನ್ವೆಸ್ಟ್ ಮೆಂಟ್ ಮತ್ತು ರಿಸರ್ಚ್): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ/ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು ಮತ್ತು ಮಾರ್ಕೆಟ್ ಅನಾಲಿಟಿಕ್ಸ್ ನಲ್ಲಿ ಕೆಲಸ ಜ್ಞಾನ ಮತ್ತು ಮಾನ್ಯತೆಯನ್ನು ಹೊಂದಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಖಾಲಿ ಹುದ್ದೆಗಳ ಮತ್ತು ವಯೋಮಿತಿ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ ವಯೋಮಿತಿ (ಡಿಸೆಂಬರ್ ೧,೨೦೧೮ ಕ್ಕೆ)
ಡೆಪ್ಯೂಟಿ ಮ್ಯಾನೇಜರ್ (ಸ್ಟ್ಯಾಟಿಸ್ಟೀಶಿಯನ್) 2 ಕನಿಷ್ಠ 35 ವರ್ಷ ಮತ್ತು 42ವರ್ಷ ವಯಸ್ಸು ಮೀರಿರಬಾರದು
ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ (ಡಿಜಿಟಲ್ ಇನಿಶಿಯೇಟಿವ್ಸ್) 3 ಕನಿಷ್ಠ 25 ವರ್ಷ ಮತ್ತು 35ವರ್ಷ ವಯಸ್ಸು ಮೀರಿರಬಾರದು
ಮ್ಯಾನೇಜರ್ (ಸರ್ವೀಸಿಂಗ್,ಬ್ಯುಸಿನೆಸ್ ಅನಾಲಿಸ್ಟ್, ಆನ್ ಲೈನ್ ಫುಲ್ ಫಿಲ್ಮೆಂಟ್/ಸೂಪರ್ ಸ್ಟೋರ್/ಇಂಟಿಗ್ರೇಶನ್ ಮತ್ತು ಜರ್ನೀಸ್, ಡಿಜಿಟಲ್ ಮಾರ್ಕೆಟಿಂಗ್) 12 ಕನಿಷ್ಠ 25 ವರ್ಷ ಮತ್ತು 35 ವರ್ಷ ವಯಸ್ಸು ಮೀರಿರಬಾರದು
ಹೆಡ್ (ಲೀಗಲ್) 1 ಕನಿಷ್ಠ 50ವರ್ಷ ಮತ್ತು 62ವರ್ಷ ವಯಸ್ಸು ಮೀರಿರಬಾರದು
DGM (NCLT ಮತ್ತು ಕಾನೂನು) 2 ಕನಿಷ್ಠ 42 ವರ್ಷ ಮತ್ತು 62ವರ್ಷ ವಯಸ್ಸು ಮೀರಿರಬಾರದು
ಎಕ್ಸಿಕ್ಯೂಟಿವ್ (ಕ್ರೆಡಿಟ್ ಮಾನಿಟರಿಂಗ್) 10 ಕನಿಷ್ಠ 22ವರ್ಷ ಮತ್ತು 30ವರ್ಷ ವಯಸ್ಸು ಮೀರಿರಬಾರದು
ಹೆಡ್ ( ಪ್ರಾಡಕ್ಟ್, ಇನ್ವೆಸ್ಟ್ ಮೆಂಟ್ ಮತ್ತು ರಿಸರ್ಚ್) 1 ಕನಿಷ್ಠ 35 ವರ್ಷ ಮತ್ತು 50 ವರ್ಷ ವಯಸ್ಸು ಮೀರಿರಬಾರದು
ಒಟ್ಟು 31

ಆಯ್ಕೆ ವಿಧಾನ ಮತ್ತು ವೇತನದ ವಿವರ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಕಿರುಪಟ್ಟಿಯನ್ನು ತಯಾರಿಸಲಾಗುತ್ತದೆ ಮತ್ತು ಬ್ಯಾಂಕ್ ವಿವೇಚನೆಯ ಪ್ರಕಾರ ಸಂದರ್ಶನವನ್ನು ಕೈಗೊಳ್ಳಲಾಗುತ್ತದೆ.

ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸೂಚನೆಯಂತೆ ವರ್ಷಕ್ಕೆ 15 ಲಕ್ಷದಿಂದ 52 ಲಕ್ಷದ ವರೆಗೆ

ವೇತನ ನೀಡಲಾಗುತ್ತದೆ.(ಅಧಿಸೂಚನೆ ನೋಡಿ)

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ/ ಓಬಿಸಿ ಅಭ್ಯರ್ಥಿಗಳು ಅರ್ಜಿ ಶುಲ್ಕ ರೂ.600/-, SC/ST/PWD ಅಭ್ಯರ್ಥಿಗಳು ಅರ್ಜಿ ಶುಲ್ಕ 100/- ರೂ ಅನ್ನು ಆನ್ ಲೈನ್ (ಡೆಬಿಟ್/ಕ್ರೆಡಿಟ್/ನೆಟ್ ಬ್ಯಾಂಕಿಂಗ್) ಮೂಲಕ ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ https://www.sbi.co.in/careers/ongoing-recruitment.html ಇಲ್ಲಿ ರಿಜಿಸ್ಟರ್ ಮಾಡಿ ಅಥವಾ ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

SBI ನಿರ್ದೇಶನದಂತೆ ಆನ್ ಲೈನ್ ಪೇಮೆಂಟ್ ಗೇಟ್ವೇ ಮೂಲಕ ಅರ್ಜಿಯನ್ನು ಸಲ್ಲಿಸುವಲ್ಲಿ ಅಭ್ಯರ್ಥಿಗಳು ನಿಗದಿತ ಶುಲ್ಕವನ್ನು ಪಾವತಿಸಬೇಕು.

SBI 2019 ನೇಮಕಾತಿಯ ಪ್ರಕ್ರಿಯೆ ಮತ್ತು ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
SBI has invited online applications from eligible candidates for recruiting 31 Specialist Cadre Officers under various positions on contractual and regular basis
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X