ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಿಶೇಷ ಕೇಡರ್ ಅಧಿಕಾರಿ (SCO) ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
2021ನೇ ಸಾಲಿಗೆ 606 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತರು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಭಾರತದಾದ್ಯಂತ ಪೂರ್ಣ ಸಮಯದ ಆಧಾರದ ಮೇಲೆ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಈ ಹುದ್ದೆಗಳಿಗೆ ಆನ್‌ಲೈನ್ ನೋಂದಣಿ ಮತ್ತು ಅರ್ಜಿ ಪ್ರಕ್ರಿಯೆಯು ಸೆಪ್ಟೆಂಬರ್ 28, 2021 ರಿಂದ ಪ್ರಾರಂಭಾಗಿ ಅಕ್ಟೋಬರ್ 18, 2021 ರಂದು ಕೊನೆಗೊಳ್ಳುತ್ತದೆ.

ಎಸ್‌ಬಿಐ ಎಸ್‌ಒ ನೇಮಕಾತಿ 2021 ಖಾಲಿ ಹುದ್ದೆಗಳ ವಿವರ:
ಎಸ್‌ಬಿಐ ನೇಮಕಾತಿಯ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳ ವಿವರ ಇಲ್ಲಿದೆ.
ಸಂಬಂಧ ವ್ಯವಸ್ಥಾಪಕ - 334 ಹುದ್ದೆಗಳು
ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ - 217 ಹುದ್ದೆಗಳು
ಉಪ ವ್ಯವಸ್ಥಾಪಕ (ಮಾರ್ಕೆಟಿಂಗ್) - 26 ಹುದ್ದೆಗಳು
ಮ್ಯಾನೇಜರ್ (ಮಾರ್ಕೆಟಿಂಗ್) - 12 ಹುದ್ದೆಗಳು
ಹೂಡಿಕೆ ಅಧಿಕಾರಿ - 12 ಹುದ್ದೆಗಳು
ಕೇಂದ್ರ ಸಂಶೋಧನಾ ತಂಡ (ಉತ್ಪನ್ನ ಮುನ್ನಡೆ/ಬೆಂಬಲ)- 04 ಹುದ್ದೆಗಳು
ಕಾರ್ಯನಿರ್ವಾಹಕ (ದಾಖಲೆ ಸಂರಕ್ಷಣೆ-ದಾಖಲೆಗಳು)- 01 ಹುದ್ದೆ
ಒಟ್ಟು 606 ಹುದ್ದೆಗಳು

ಎಸ್‌ಬಿಐ ಎಸ್‌ಒ ನೇಮಕಾತಿ 2021 ವಿದ್ಯಾರ್ಹತೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ/ಸ್ನಾತಕೋತ್ತರ ಪದವಿ ಹೊಂದಿರಬೇಕು; MBA/PGDM ಪದವಿ; ಇತಿಹಾಸದಲ್ಲಿ ಅಥವಾ ಸಾಮಾಜಿಕ ವಿಜ್ಞಾನದ ಇತರ ಸ್ಟ್ರೀಮ್‌ಗಳಲ್ಲಿ ಎಂಎ; MBA/PGDBM ಅಥವಾ ಅದಕ್ಕೆ ಸಮನಾದ ಮಾರ್ಕೆಟಿಂಗ್/ಫೈನಾನ್ಸ್‌ನಲ್ಲಿ ವಿಶೇಷತೆ; ವಾಣಿಜ್ಯ, ಹಣಕಾಸು, ಅರ್ಥಶಾಸ್ತ್ರ, ನಿರ್ವಹಣೆ, ಗಣಿತ ಅಥವಾ ಅಂಕಿಅಂಶಗಳಲ್ಲಿ ಪದವಿ/ಸ್ನಾತಕೋತ್ತರ ಪದವಿ ಅನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರುವುದರ ಜೊತೆಗೆ ಎಸ್‌ಬಿಐ ಎಸ್‌ಒ ಅಧಿಸೂಚನೆ 2021 ರಲ್ಲಿ ವಿವರಿಸಿದಂತೆ ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಎಸ್‌ಬಿಐ ಎಸ್‌ಒ ನೇಮಕಾತಿ 2021 ವಯೋಮಿತಿ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ಕನಿಷ್ಟ 30 ರಿಂದ ಗರಿಷ್ಟ 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಎಸ್‌ಬಿಐ ಎಸ್‌ಒ ಅಧಿಸೂಚನೆ 2021 ರಲ್ಲಿ ನಿರ್ದಿಷ್ಟಪಡಿಸಿದಂತೆ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಎಸ್‌ಬಿಐ ಎಸ್‌ಒ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2021ರ ನೇಮಕಾತಿಯ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಆನ್‌ಲೈನ್ ಲಿಖಿತ ಪರೀಕ್ಷೆ-ಸಂವಾದ, ಶಾರ್ಟ್‌ಲಿಸ್ಟಿಂಗ್-ಕಮ್-ಇಂಟರಾಕ್ಷನ್/ವೈಯಕ್ತಿಕ/ದೂರವಾಣಿ ಮೂಲಕ/ವೀಡಿಯೊ ಸಂದರ್ಶನ ಮೂಲಕ ಮಾಡಲಾಗುತ್ತದೆ.

ಎಸ್‌ಬಿಐ ಎಸ್‌ಒ ನೇಮಕಾತಿ 2021 ವೇತನ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2021ರ ನೇಮಕಾತಿಯ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ SBI SO ಅಧಿಸೂಚನೆ 2021ರಲ್ಲಿ ಉಲ್ಲೇಖಿಸಿರುವಂತೆ ನಿಯಮಗಳ ಪ್ರಕಾರ ವೇತನವನ್ನು ನೀಡಲಾಗುತ್ತದೆ.

ಎಸ್‌ಬಿಐ ಎಸ್‌ಒ ನೇಮಕಾತಿ 2021 ಅರ್ಜಿ ಶುಲ್ಕ:
ಎಸ್‌ಬಿಐ ನೇಮಕಾತಿಯ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಮೊತ್ತ ರೂ. 750 (ಜನ್/ಇಡಬ್ಲ್ಯೂಎಸ್/ಒಬಿಸಿ) ಅನ್ನು ಅರ್ಜಿ ಶುಲ್ಕವಾಗಿ ಆನ್‌ಲೈನ್ (ನೆಟ್-ಬ್ಯಾಂಕಿಂಗ್/ಕ್ರೆಡಿಟ್/ಡೆಬಿಟ್) ಮೋಡ್ ಮೂಲಕ ಮಾತ್ರ ಪಾವತಿಸಬೇಕಿರುತ್ತದೆ. ಅಧಿಕೃತ SBI SO ಅಧಿಸೂಚನೆ 2021 ರಲ್ಲಿ ಉಲ್ಲೇಖಿಸಿರುವಂತೆ SC/ST/PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.

ಎಸ್‌ಬಿಐ ಎಸ್‌ಒ ನೇಮಕಾತಿ 2021 ಅರ್ಜಿ ಸಲ್ಲಿಕೆ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2021ರ ನೇಮಕಾತಿಯ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://sbi.co.in/web/careers/current-openings ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅಕ್ಟೋಬರ್ 18,2021ರೊಳಗೆ ಅರ್ಜಿಯನ್ನು ಹಾಕಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2021ರ ಎಸ್‌ಒ ನೇಮಕಾತಿಯ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.