ಕರ್ನಾಟಕ ರಾಜ್ಯ ಸಹಕಾರ ಮಾರಟ ಮಹಾಮಂಡಳದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

Posted By:

ಕರ್ನಾಟಕ ರಾಜ್ಯ ಸಹಕಾರ ಮಾರಟ ಮಹಾಮಂಡಳದಲ್ಲಿ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನೇಮಕಾತಿ

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದಲ್ಲಿ 45 ಹುದ್ದೆಗಳ ನೇಮಕಾತಿ

 ಕೆ ಎಸ್ ಸಿ ಎಂ ಎಫ್ ವಿವಿಧ ಹುದ್ದೆಗಳ ನೇಮಕಾತಿ

ಹುದ್ದೆಗಳ ವಿವರ

ಸಹಾಯಕ ಅಭಿಯಂತರರು-02 ಹುದ್ದೆಗಳು ಹುದ್ದೆ (01+01 ಹೈ.ಕ)

ವೇತನ: ರೂ.22800-43200/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಇ(ಸಿವಿಲ್)/ಬಿ.ಆರ್ಚ್ ಪದವಿ ಹೊಂದಿರಬೇಕು.

ಶಾಖಾ ವ್ಯವಸ್ಥಾಪಕರು (ದರ್ಜೆ 01)-05 ಹುದ್ದೆಗಳು

ವೇತನ: ರೂ.22800-43200/-
ವಿದ್ಯಾರ್ಹತೆ: ಅಂಗೀಕೃತ ವಿವಿ ಯಿಂದ ಯಾವುದೇ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ, ಕನ್ನಡ ಭಾಷಾ ಜ್ಞಾನ ಇರಬೇಕು.

ಶಾಖಾ ವ್ಯವಸ್ಥಾಪಕರು (ದರ್ಜೆ 02)-07 ಹುದ್ದೆಗಳು (05+02 ಹೈ.ಕ)

ವೇತನ: ರೂ.21600-40050/-
ವಿದ್ಯಾರ್ಹತೆ: ಅಂಗೀಕೃತ ವಿವಿ ಯಿಂದ ಯಾವುದೇ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ, ಕನ್ನಡ ಭಾಷಾ ಜ್ಞಾನ ಇರಬೇಕು.

ಶಾಖಾ ವ್ಯವಸ್ಥಾಪಕರು (ದರ್ಜೆ 03)-04 ಹುದ್ದೆಗಳು

ವೇತನ: ರೂ.17650-32000/-
ವಿದ್ಯಾರ್ಹತೆ: ಅಂಗೀಕೃತ ವಿವಿ ಯಿಂದ ಯಾವುದೇ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ, ಕನ್ನಡ ಭಾಷಾ ಜ್ಞಾನ ಇರಬೇಕು.

ಆಂತರಿಕ ಲೆಕ್ಕಪರಿಶೋಧಕರು-05 ಹುದ್ದೆಗಳು (04+01 ಹೈ.ಕ)

ವೇತನ: ರೂ.22800-43200/-
ವಿದ್ಯಾರ್ಹತೆ: ಅಂಗೀಕೃತ ವಿವಿ ಯಿಂದ ವಾಣಿಜ್ಯ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ, ಕನ್ನಡ ಭಾಷಾ ಜ್ಞಾನ ಇರಬೇಕು.

ಹಿರಿಯ ಕಂಪ್ಯೂಟರ್ ಅನಾಲಿಸ್ಟ್-01 ಹುದ್ದೆ

ವೇತನ: ರೂ.17650-32000/-
ವಿದ್ಯಾರ್ಹತೆ: ಅಂಗೀಕೃತ ವಿವಿ ಯಿಂದ ಎಂಸಿಎ ಪದವಿ ಪಡೆದಿರಬೇಕು. ಕಂಪ್ಯೂಟರ್ ನಿರ್ವಹಣೆಯಲ್ಲಿ ಎರಡು ವರ್ಷದ ಅನುಭವವಿರಬೇಕು, ಕನ್ನಡ ಭಾಷಾ ಜ್ಞಾನ ಇರಬೇಕು.

ಹಿರಿಯ ಸಹಾಯಕರು-24 ಹುದ್ದೆಗಳು (18+06 ಹೈ.ಕ)

ವೇತನ: ರೂ.14550-26700/-
ವಿದ್ಯಾರ್ಹತೆ: ಅಂಗೀಕೃತ ವಿವಿ ಯಿಂದ ಯಾವುದೇ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ, ಕನ್ನಡ ಭಾಷಾ ಜ್ಞಾನ ಇರಬೇಕು.

ಹಿರಿಯ ಲೆಕ್ಕ ಸಹಾಯಕರು-12 ಹುದ್ದೆಗಳು (08+04 ಹೈ.ಕ)

ವೇತನ: ರೂ.14550-26700/-
ವಿದ್ಯಾರ್ಹತೆ: ಅಂಗೀಕೃತ ವಿವಿ ಯಿಂದ ವಾಣಿಜ್ಯ ಅಥವಾ ಸಹಕಾರ ಅಥವಾ ವ್ಯವಸ್ಥಾಪನೆ ವಿಷಯದಲ್ಲಿ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ, ಕನ್ನಡ ಭಾಷಾ ಜ್ಞಾನ ಇರಬೇಕು.

ಶೀಘ್ರಲಿಪಿಗಾರರು-02 ಹುದ್ದೆ (01+01 ಹೈ.ಕ)

ವೇತನ: ರೂ.14550-26700/-
ವಿದ್ಯಾರ್ಹತೆ: ದ್ವಿತೀಯ ಪಿಯುಸಿ ತೇರ್ಗಡೆ ಅಥವಾ 3 ವರ್ಷಗಳ ವಾಣಿಜ್ಯ ವ್ಯವಹಾರಗಳ ಡಿಪ್ಲೊಮ ಪಡೆದಿರಬೇಕು. ಹಿರಿಯ ಕನ್ನಡ ಮತ್ತು ಅಂಗ್ಲ ಶೀಘ್ರಲಿಪಿಯಲ್ಲಿ ತೇರ್ಗಡೆಯಾಗಿರಬೇಕು-ಹಿರಿಯ ಕನ್ನಡ/ಆಂಗ್ಲ ಬೆರಳಚ್ಚು ತೇರ್ಗಡೆಯಾಗಿರಬೇಕು. ಕಂಪ್ಯೂಟರ್ ಜ್ಞಾನ, ಕನ್ನಡ ಭಾಷಾ ಜ್ಞಾನ ಇರಬೇಕು.

ಕಿರಿಯ ಕಂಪ್ಯೂಟರ್ ಅನಾಲಿಸ್ಟ್-02 ಹುದ್ದೆ (01+01 ಹೈ.ಕ)

ವೇತನ: ರೂ.14550-26700/-
ವಿದ್ಯಾರ್ಹತೆ: ಅಂಗೀಕೃತ ವಿವಿ ಯಿಂದ ಬಿಸಿಎ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ೨ ವರ್ಷಗಳ ಅನುಭವ ಹೊಂದಿರಬೇಕು, ಕನ್ನಡ ಭಾಷಾ ಜ್ಞಾನ ಇರಬೇಕು.

ಕಿರಿಯ ಸಹಾಯಕರು-55 ಹುದ್ದೆಗಳು (40+15 ಹೈ.ಕ)

ವೇತನ: ರೂ.11600-21000/-
ವಿದ್ಯಾರ್ಹತೆ: ಅಂಗೀಕೃತ ವಿವಿ ಯಿಂದ ಯಾವುದೇ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ, ಕನ್ನಡ ಭಾಷಾ ಜ್ಞಾನ ಇರಬೇಕು.

ಕಿರಿಯ ಲೆಕ್ಕ ಸಹಾಯಕರು-25 ಹುದ್ದೆಗಳು (24+01 ಹೈ.ಕ)

ವೇತನ: ರೂ.11600-19000/-
ವಿದ್ಯಾರ್ಹತೆ: ಅಂಗೀಕೃತ ವಿವಿ ಯಿಂದ ವಾಣಿಜ್ಯ ಅಥವಾ ಸಹಕಾರ ಅಥವಾ ವ್ಯವಸ್ಥಾಪನೆ ವಿಷಯದಲ್ಲಿ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ, ಕನ್ನಡ ಭಾಷಾ ಜ್ಞಾನ ಇರಬೇಕು.

4ನೇ ದರ್ಜೆ ನೌಕರರು-19 ಹುದ್ದೆಗಳು (08+11 ಹೈ.ಕ)

ವೇತನ: ರೂ.9600-14550/-
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಮತ್ತು ಕನ್ನಡ ಒಂದು ಭಾಷೆಯಾಗಿ ಅಭ್ಯಸಿಸಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ (ಒಬಿಸಿ ಅಭ್ಯರ್ಥಿಗಳಿಗೆ 38, ಎಸ್.ಸಿ/ಎಸ್.ಟಿ/ಪ್ರ-1 ರ ಅಭ್ಯರ್ಥಿಗಳಿಗೆ 40 ವರ್ಷ)

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸತಕ್ಕದ್ದು. ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದಲ್ಲಿ ಪ್ರತಿ ಅರ್ಜಿಗೂ ಪ್ರತ್ಯೇಕ ಶುಲ್ಕ ಪಾವತಿಸಬೇಕು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:09-01-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-02-2018

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
The Karnataka State cooperative marketing federation (KSCMF)invites online applications to fill the various posts.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia