ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತವು ನೂತನ ಶಾಖೆಯನ್ನು ಆರಂಭಿಸುತ್ತಿದ್ದು 250 ಹುದ್ದೆಗಳನ್ನು ಭರ್ತಿ ಮಾಡುವುದುದಾಗಿ ಪ್ರಕಟಣೆ ಹೊರಡಿಸಿದೆ. ಅಭ್ಯರ್ಥಿಗಳು ಪ್ರಕಟಣೆಯನ್ನು ಓದಿಕೊಳ್ಳಬಹುದು.
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 50 ನೂತನ ಶಾಖೆಗಳು ಶೀಘ್ರದಲ್ಲಿ ಪ್ರಾರಂಭವಾಗಲಿದ್ದು, ಯಾವುದೇ ಶಾಖೆಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಸೆಪ್ಟೆಂಬರ್ 13,2019 ರೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು, ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.
CRITERIA | DETAILS |
Name Of The Posts | ಹಿರಿಯ ಅಧಿಕಾರಿ,ಕಿರಿಯ ಅಧಿಕಾರಿ, ಚಾಲಕರು ಮತ್ತು ಇತರೆ ಹುದ್ದೆಗಳು |
Organisation | ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ |
Educational Qualification | ಬಿ,ಕಾಂ / ಎಂ.ಕಾಂ ಎಂಬಿಎ / ಎಂಸಿಎ,ಬಿ.ಎಸ್ಸಿ / ಬಿಸಿಎ /ಬಿಬಿಎ,ಡಿಪ್ಲೋಮಾ / ಐಟಿಐ, ಡಿ.ಫಾರ್ಮಾ / ಬಿ.ಫಾರ್ಮಾ, ಹತ್ತನೇ ತರಗತಿ |
Job Location | ಕರ್ನಾಟಕ |
Salary Scale | ನೇಮಕಾತಿ ನಿಯಮಾನುಸಾರ |
Application Start Date | August 9, 2019 |
Application End Date | September 13, 2019 |
ಶೈಕ್ಷಣಿಕ ವಿದ್ಯಾರ್ಹತೆ:
ಹಿರಿಯ ಅಧಿಕಾರಿ ಹುದ್ದೆಗಳಿಗೆ ಬಿ,ಕಾಂ / ಎಂ.ಕಾಂ ಎಂಬಿಎ / ಎಂಸಿಎ, ಕಿರಿಯ ಅಧಿಕಾರಿ ಹುದ್ದೆಗಳಿಗೆ ಬಿ.ಎಸ್ಸಿ / ಬಿಸಿಎ /ಬಿಬಿಎ, ಕಂಪ್ಯೂಟರ್ ಹಾರ್ಡ್‌ವೇರ್ ನಿರ್ವಹಣೆ ಹುದ್ದೆಗಳಿಗೆ ಬಿಸಿಎ / ಡಿಪ್ಲೋಮಾ / ಐಟಿಐ, ಡಿ.ಫಾರ್ಮಾ / ಬಿ. ಫಾರ್ಮಾ ಹುದ್ದೆಗಳಿಗೆ ಡಿ.ಫಾರ್ಮಾ / ಬಿ.ಫಾರ್ಮಾ ಮತ್ತು ಅಟೆಂಡರ್ /ಚಾಲಕ ಹುದ್ದೆಗಳಿಗೆ ಹತ್ತನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ:
ಹಿರಿಯ ಅಧಿಕಾರಿ ಹುದ್ದೆಗಳಿಗೆ 23 ರಿಂದ 35 ವರ್ಷ, ಕಿರಿಯ ಅಧಿಕಾರಿ ಹುದ್ದೆಗಳಿಗೆ 21 ರಿಂದ 35, ಕಂಪ್ಯೂಟರ್ ಹಾರ್ಡ್‌ವೇರ್ ನಿರ್ವಹಣೆ ಮತ್ತು ಡಿ.ಫಾರ್ಮಾ / ಬಿ.ಫಾರ್ಮಾ ಹುದ್ದೆಗಳಿಗೆ ಕನಿಷ್ಟ 21 ರಿಂದ ಗರಿಷ್ಟ 40 ವರ್ಷ ಮತ್ತು ಸಿಪಾಯಿ / ವಾಹನ ಚಾಲಕರು ಹುದ್ದೆಗಳಿಗೆ ಕನಿಷ್ಟ 19 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅಜರ್ಜಿಯನ್ನು ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು 300/-ರೂ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಂತೆ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಅರ್ಜಿಯನ್ನು ಸೆಪ್ಟೆಂಬರ್ 13,2019ರೊಳಗೆ ಪೋಷ್ಟ್ ಮೂಲಕ ಸಲ್ಲಿಸಬಹುದು.
ಕಚೇರಿಯ ವಿಳಾಸ:
ಸಿದ್ಧಸಿರಿ ಸೌಹಾರ್ದ ಸಹಕಾರಿ ಲಿಮಿಟೆಡ್,
ವಿಜಯಪುರ ಆಡಳಿತ ಕಚೇರಿ,
ಶ್ರೀ ಸಿದ್ದೇಶ್ವರ ದೇವಾಲಯ ಆವರಣ,
ಸಿದ್ಧೇಶ್ವರ ಮುಖ್ಯ ರಸ್ತೆ, ವಿಜಯಪುರ-586101.
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಪ್ರಕಟಣೆಯನ್ನು ಓದಲು ಮುಂದೆ ನೋಡಿ