ಐಟಿಐ ಆದವರಿಗೆ ದಕ್ಷಿಣ ರೈಲ್ವೆಯಲ್ಲಿ ಅಪ್ರೆಂಟಿಸ್ ತರಬೇತಿ

Posted By:

ಐಟಿಐ ಮುಗಿಸಿದ ಅಭ್ಯರ್ಥಿಗಳಿಂದ ದಕ್ಷಿಣ ರೈಲ್ವೆ ಚೆನ್ನೈ ವಿವಿಧ ಹುದ್ದೆಗಳಿಗೆ ಅಪ್ರೆಂಟಿಸ್ ಶಿಪ್ ನೀಡಲು ಅರ್ಜಿ ಆಹ್ವಾನಿಸಿದೆ.

ಒಟ್ಟು 658 ಅಭ್ಯರ್ಥಿಗಳು ಅಪ್ರೆಂಟಿಸ್ ಶಿಪ್ ಪಡೆಯುವ ಅವಕಾಶವಿದ್ದು,ಆಸಕ್ತ ಮತ್ತ ಅರ್ಹ ಅಭ್ಯರ್ಥಿಗಳು ಜುಲೈ 15ರೊಳಗೆ  ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.  

ಹುದ್ದೆಗಳು

ಫಿಟ್ಟರ್, ಕಾರ್ಪೆಂಟರ್, ಪೇಂಟರ್, ವೆಲ್ಡರ್, ಎಂಎಂವಿ, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಕೇಬಲ್ ಜಾಯಿಂಟರ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಅಪ್ರೆಂಟಿಸ್ ಶಿಪ್ ಪಡೆಯಬಹುದು.

ಐಟಿಐ ಆದವರಿಗೆ  ಅಪ್ರೆಂಟಿಸ್ ತರಬೇತಿ

ವಿದ್ಯಾರ್ಹತೆ

  • ಎಸ್ಎಸ್ಎಲ್ ಸಿ ಬಳಿಕ ಆಯಾ ಹುದ್ದೆಗಳಿಗೆ ಸಂಬಂಧಪಟ್ಟಂತೆ ಐಟಿಐ ಕೋರ್ಸ್‌ ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಮೆಡಿಕಲ್ ಲ್ಯಾಬೋರೇಟರಿ ಟೆಕ್ನಿಷಿಯನ್ (ರೇಡಿಯೋಲಜಿ, ಪೆಥಾಲಜಿ ಮತ್ತು ಕಾರ್ಡಿಯಾಲಜಿ) ಅಪ್ರೆಂಟಿಸ್ ಶಿಪ್ ಪಡೆಯುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು.

ವಯೋಮಿತಿ

  • ಮೆಡಿಕಲ್ ಲ್ಯಾಬೋರೇಟರಿ ಟೆಕ್ನಿಷಿಯನ್ ಹುದ್ದೆಗಳಲ್ಲಿ ಅಪ್ರೆಂಟಿಸ್ ಶಿಪ್ ಪಡೆಯುವ ಅಭ್ಯರ್ಥಿಗಳ ವಯೋಮಿತಿ 15ರಿಂದ 24 ವರ್ಷ.
  • ಮೆಡಿಕಲ್ ಲ್ಯಾಬೊರೇಟರಿ ಟೆಕ್ನಿಷಿಯನ್ ಹೊರತು ಪಡಿಸಿ ಉಳಿದ ಹುದ್ದೆಗಳಲ್ಲಿನ ಅಪ್ರೆಂಟಿಸ್ ಶಿಪ್ ಗಳಿಗೆ 15ರಿಂದ 22 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
  • ಸರ್ಕಾರಿ ನಿಯಮಾನುಸಾರ ಎಸ್ ಸಿ/ಎಸ್ ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ 100 ರೂ.

ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 15,2017

ಸ್ವವಿವರಗಳೊಂದಿಗೆ ಅರ್ಜಿ ಕಳುಹಿಸಬೇಕಾದ ವಿಳಾಸ

Workshop personnel officer,
Office of the chief workshop
manager, Carriage and waggon works,
Southern Railway, Ayanavaram,
Chennai-600023

ಹೆಚ್ಚಿನ ವಿವರಗಳಿಗೆ www.sr.indianrailways.gov.in ಗಮಿನಿಸಿ

English summary
southern railway chennai invites application from iti passed candidates for apprenticeship. total 658 vacancies are available for apprenticeship and candidates should apply before July 15.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia