ಎಸ್ ಎಸ್ ಬಿ 355 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ

ಸಶಸ್ತ್ರ ಸೀಮಾ ಬಲದಲ್ಲಿ ಅವಶ್ಯವಿರುವ 355 ಕಾನ್ಸ್ಟೇಬಲ್ (ಜಿಡಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸ್ಪೋರ್ಟ್ಸ್ ಕೋಟಾ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳು ಹಂಗಾಮಿಯಾಗಿದ್ದು ನಂತರದ ದಿನಗಳಲ್ಲಿ ನೇಮಕಾತಿ ಹೊಂದಿದವರನ್ನೇ ಮುಂದುವರೆಸುವ ಸಾಧ್ಯತೆ ಇದೆ.

ಹುದ್ದೆಯ ವಿವರ

ಹುದ್ದೆಯ ಹೆಸರು: ಕಾನ್ಸ್ಟೇಬಲ್ (ಜಿಡಿ)

ಒಟ್ಟು ಹುದ್ದೆ: 355

ಸಂಸ್ಥೆ: ಸಶಸ್ತ್ರ ಸೀಮಾ ಬಲ

ಹುದ್ದೆಯ ಸ್ಥಳ: ಭಾರತದಾದ್ಯಂತ

ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ

 

ವಿದ್ಯಾರ್ಹತೆ

  • ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಮೆಟ್ರಿಕ್ಯುಲೇಷನ್ ಅಥವಾ ಅದಕ್ಕೆ ಸಮಾನವಾದ ಶಿಕ್ಷಣ ಹೊಂದಿರಬೇಕು.
  • ಯಾವುದಾದರು ಅಂತಾರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ತಂಡದ ಸದಸ್ಯರಾಗಿ ಗುರುತಿಸಿಕೊಂಡು ಭಾಗವಹಿಸಿರಬೇಕು.

ವೇತನ: ರೂ.5200-20200/-

ವಯೋಮಿತಿ

  • ಕನಿಷ್ಠ 18 ಮತ್ತು ಗರಿಷ್ಠ 23
  • ಒಬಿಸಿ ಮತ್ತು ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸರ್ಕಾರದ ನಿಯಮದಂತೆ ಸಡಿಲಿಕೆ ನೀಡಲಾಗುವುದು.

ಆಯ್ಕೆ ವಿಧಾನ

  • ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
  • ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.100/-
  • ಎಸ್.ಸಿ/ಎಸ್.ಟಿ/ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.
  • ಶುಲ್ಕವನ್ನು PHO, SSB, MHA, New Delhi ಇವರ ಹೆಸರಿಗೆ ಎಸ್ ಬಿ ಐ ಬ್ಯಾಂಕಿನಲ್ಲಿ ಸಂದಾಯವಾಗುವಂತೆ ಪೋಸ್ಟ್ ಲ್ ಆರ್ಡರ್/ ಬ್ಯಾಂಕ್ ಡ್ರಾಫ್ಟ್/ ಚೆಕ್ ಮೂಕ ಪಾವತಿಸಬಹುದಾಗಿದೆ.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಸೂಕ್ತ ದಾಖಲೆಗಳನ್ನು ಲಗತ್ತಿಸಿ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿ ಕಛೇರಿಯ ವಿಳಾಸಕ್ಕೆ ಅಂಚೆ ಮೂಲಕ ತಲುಪಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಳಾಸ

ಸಹಾಯಕ ನಿರ್ದೇಶಕರು (ಕ್ರೀಡೆ)

ಫೋರ್ಸ್ ಮುಖ್ಯ ಕಛೇರಿ, ಎಸ್ ಎಸ್ ಬಿ

ಈಸ್ಟ್ ಬ್ಲಾಕ್ V, ಆರ್.ಕೆ.ಪುರಂ

ನವದೆಹಲಿ: 110066

Assistant Director (Sports),

Force HQR, SSB,

East block V, R.K Puram,

New Delhi:- 110066

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-06-2017

ಹೆಚ್ಚಿನ ಮಾಹಿತಿಗಾಗಿ www.ssbrectt.gov.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
Applications are invited from Indian citizens (male & female) for filling up the post of Constable (GD) under Sports Quota for the year 2016-17 & 2017-18 in Sashastra Seema Bal, Government of India, Ministry of Home Affairs.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X