ಎಸ್‌ಎಸ್‌ಸಿ ಸೈಂಟಿಫಿಕ್ ಅಸಿಸ್ಟೆಂಟ್ ೨೦೧೭ ಫಲಿತಾಂಶ ಪ್ರಕಟ

Written By: Rajatha

2017ರ ಎಸ್‌ಎಸ್‌ಸಿ ಸೈಂಟಿಫಿಕ್ ಅಸಿಸ್ಟೆಂಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಸ್ಟಾಫ್‌ ಸೆಲೆಕ್ಷನ್ ಕಮೀಷನ್ ಫಲಿತಾಂಶ ಪ್ರಕಟಸಿದ್ದು, ಎಸ್‌ಎಸ್‌ಸಿ ಅಧೀಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಇಂಡಿಯನ್‌ ಮೆಟೆರೋಲಾಜಿಕಲ್ ಡಿಪಾರ್ಟ್ಮೆಂಟ್ ನಲ್ಲಿ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಯ ನೇಮಕಾತಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. 2017ರ ನವಂಬರ್ 22 ರಿಂದ ನವಂಬರ್ 25ರ ವರೆಗೆ ಪರೀಕ್ಷೆ ನಡೆದಿತ್ತು. ಪರೀಕ್ಷೆಯ ಫಲಿತಾಂಶ 2018ರ ಫೆ.13ರಂದು ಪ್ರಕಟಗೊಳ್ಳುವುದು ಎಂದು ಸ್ಟಾಫ್‌ ಸೆಲೆಕ್ಷನ್ ಕಮೀಷನ್ ಜನವರಿ 31ರಂದು ಬಿಡುಗಡೆಗೊಳಿಸಿದ ನೋಟಿಸಿಫಿಕೇಶನ್‌ನಲ್ಲಿ ತಿಳಿಸಿತ್ತು. ಫಲಿತಾಂಶವನ್ನು ಈ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ.

ಪರೀಕ್ಷಾ ಫಲಿತಾಂಶ ನೋಡುವುದು ಹೇಗೆ ?

ಸ್ಟೆಪ್‌1

ಮೊದಲಿಗೆ ಸ್ಟಾಫ್‌ ಸೆಲೆಕ್ಷನ್ ಕಮೀಷನ್ ಅಧೀಕೃತ ವೆಬ್‌ಸೈಟ್ ಗೆ ಲಾಗಿನ್ ಆಗಿ.

ಸ್ಟೆಪ್2

ಸೈಂಟಿಫಿಕ್ ಅಸಿಸ್ಟೆಂಟ್ ಇನ್ ಐಎಮ್‌ಡಿ ಪರೀಕ್ಷೆ ೨೦೧೭ ರಿಸಲ್ಟ್ ಹಾಗೂ ಮಾರ್ಕ್ ಎನ್ನುವ ಲಿಂಕ್‌ನ್ನು ಕ್ಲಿಕ್ ಮಾಡಿ

ಸ್ಟೆಪ್ 3

ಫೇ. 13ರಂದು ಬಂದಿರುವ ಸೈಂಟಿಫಿಕ್ ಅಸಿಸ್ಟೆಂಟ್ ಇನ್ ಐಎಮ್‌ಡಿ ಪರೀಕ್ಷೆ ಫಲಿತಾಂಶದ ಲಿಂಕ್‌ ನಲ್ಲಿ ಬಲಗಡೆ ಕ್ಲಿಕ್ ಹಿಯರ್ ಎಂದಿದೆ. ಅದನ್ನು ಕ್ಲಿಕ್ ಮಾಡಿ.

 

 

ಸ್ಟೆಪ್4

ಪರೀಕ್ಷೆಗೆ ಸಂಬಂಧಿಸಿದಂತಹ ಕೆಲವು ಮಾಹಿತಿ ಇರುವ ನೋಟಿಸ್ ಸಿಗುತ್ತದೆ ಅದನ್ನ ಓದಿ

ಸ್ಟೆಪ್ 5

ಅದೇ ಪೇಜ್‌ನಲ್ಲಿ ಕೆಳಗೆ ಪರೀಕ್ಷೆಯ ಫಲಿತಾಂಶ ಹಾಗೂ ಮಾರ್ಕ್‌ಗಾಗಿ ಕೊಟ್ಟಿರುವ ಲಿಂಕ್‌ನ್ನು ಕ್ಲಿಕ್ ಮಾಡಿ

ಸ್ಟೆಪ್‌6

ಈಗ ಎಸ್‌ಎಸ್‌ಸಿ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬೇಕಾದರೆ ಲಾಗಿನ್ ಆಗಬೇಕಾಗುತ್ತದೆ. ಅದಕ್ಕೆ ಅದರಲ್ಲಿ ಕೇಳಲಾಗಿರುವ ನಿಮ್ಮ ರಿಜಿಸ್ಟ್ರೇಶನ್ ನಂಬರ್ ಹಾಗೂ ಪಾಸ್‌ವರ್ಡ್‌ನ್ನು ಹಾಕಿ ಸಬ್‌ಮಿಟ್‌ ಕೊಡಿ ಈಗ ನಿಮ್ಮ ಫಲಿತಾಂಶವನ್ನು ನೋಡಬಹುದು.

English summary
The SSC scientific assistant 2017 result has been declared. The results declared by the Staff Selection Commission is available on the official website.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia