ಎಸ್ ಎಸ್ ಸಿ 183 ಹುದ್ದೆಗಳ ನೇಮಕಾತಿ

Posted By:

ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಡಿ ಕಾರ್ಯನಿರ್ವಹಿಸುವ ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ (ಎಸ್‌ಎಸ್‌ಸಿ) ಕರ್ನಾಟಕ-ಕೇರಳ ವಲಯದಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಕರ್ನಾಟಕ-ಕೇರಳ ವಲಯದಲ್ಲಿ ಅಸಿಸ್ಟಂಟ್, ಜೂನಿಯರ್‌ ಎಂಜಿನಿಯರ್‌, ಡ್ರಾಫ್ಟ್ಸ್ ಮನ್‌, ಟೆಕ್ಸ್ ಟೈಲ್‌ ಡಿಸೈನಲ್, ಲೇಡಿ ಮೆಡಿಕಲ್ ಅಟೆಂಡಂಟ್ ಸೇರಿದಂತೆ 20ಕ್ಕೂ ಹೆಚ್ಚು ವಿಭಾಗಗಳಲ್ಲಿ 183 ಹುದ್ದೆ ಖಾಲಿಯಿದ್ದು, ಅಭ್ಯರ್ಥಿಗಳು ಜೂನ್‌ 7ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ಎಸ್‌ಎಸ್‌ಸಿ 183 ಹುದ್ದೆ
ವಿದ್ಯಾರ್ಹತೆ: ಪದವಿ, ಪಿಯುಸಿ ಸೇರಿದಂತೆ ಹುದ್ದೆಗಳ ಅನ್ವಯ ವಿದ್ಯಾರ್ಹತೆ ನಿಗದಿಯಾಗಿದೆ.
ವೇತನ ಶ್ರೇಣಿ: 9300 ರಿಂದ 34800 ರು. ತಿಂಗಳಿಗೆ.

ಎಸ್ ಎಸ್ ಸಿ ನೇಮಕಾತಿ

ವಯೋಮಿತಿ

ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳ ಅನ್ವಯ ವಯೋಮಿತಿ ಬದಲಾವಣೆಯಿದೆ. ನಿಗದಿತ ವಯೋಮಿತಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷ ಸಡಿಲಿಕೆಯಿದೆ.

ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಕೆ

ಎಸ್ಎಸ್ ಸಿ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು. ಅರ್ಜಿ ಭರ್ತಿ ನಂತರ ರೂ.100/- ಪರೀಕ್ಷಾ ಶುಲ್ಕ ಪಾವತಿಸಬೇಕು. ಎಸ್‌ಸಿ, ಎಸ್‌ಟಿ, ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಭರ್ತಿ ಮಾಡಿದ ಅರ್ಜಿ ಪ್ರತಿ ಹಾಗೂ ಫೋಟೋ ಸೇರಿದಂತೆ ಅಗತ್ಯ ದಾಖಲೆಯೊಂದಿಗೆ ಎಸ್ಎಸ್ ಸಿ ವಲಯ ಕಚೇರಿಗೆ ತಲುಪಿಸಬೇಕು.

ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-06-2017

ಕಛೇರಿ ವಿಳಾಸ

The Regional Director,
Staff Selection Commission,
Karnataka Kerala Region,
1st Floor „E‟ Wing, Kendriya Sadan,
Koramangala,BENGALURU - 560 034.

ಆಯ್ಕೆ ವಿಧಾನ

ಕಂಪ್ಯೂಟರ್‌ ಆಧಾರಿತ ಬಹು ಆಯ್ಕೆ ಮಾದರಿ ಪರೀಕ್ಷೆಯಲ್ಲಿ ಗಳಿಸುವ ಅಂಕಗಳನ್ನು ಪರಿಗಣಿಸಿ ಮುಂದಿನ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ ssconline.nic.in ಗಮನಿಸಿ

English summary
Staff Selection commission (SSCKKR) Karnataka Kerala region released new notification on their official website for the recruitment of total 183 jobs.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia