ಎಸ್ ವಿ ಸಿ ಬ್ಯಾಂಕ್ನಲ್ಲಿ ಕಸ್ಟಮರ್ ರೆಪ್ರೆಸೆಂಟೇಟಿವ್ ಹುದ್ದೆಗಳ ಭರ್ತಿ

Posted By: Vinaykumar

ದೇಶದ ಅತ್ಯಂತ ಹಳೆಯ ಬ್ಯಾಂಕ್ ಗಳಲ್ಲಿ ಒಂದಾದ ಶ್ಯಾಮರಾವ್ ವಿಠ್ಠಲ್ ಬ್ಯಾಂಕ್ 1906 ರಲ್ಲಿ ಸ್ಥಾಪನೆಗೊಂಡ ಸಹಕಾರಿ ಬ್ಯಾಂಕ್ . ಸುಮಾರು ಒಂದು ಶತಮಾನಕ್ಕಿಂತಲೂ ಹಿಂದಿನಿಂದ ಸೇವೆ ಸಲ್ಲಿಸುತ್ತಿರುವ ಎಸ್ ವಿ ಸಿ ಬ್ಯಾಂಕ್ ಮುಂಬೈ, ಕರ್ನಾಟಕ, ದೆಹಲಿ, ತಮಿಳುನಾಡು, ಗೋವಾ ಸೇರಿದಂತೆ ದೇಶಾದ್ಯಂತ ಸುಮಾರು 190 ಕ್ಕೂ ಹೆಚ್ಚು ಶಾಖೆ ಹೊಂದಿದೆ.

ಎಸ್ ವಿ ಸಿ ಬ್ಯಾಂಕ್ನಲ್ಲಿ ಉದ್ಯೋಗಾವಕಾಶ

110 ವರ್ಷಗಳ ಇತಿಹಾಸ ಹೊಂದಿರುವ ಮುಂಬೈ ಮೂಲದ ಎಸ್.ವಿ.ಸಿ ನಲ್ಲಿ 40 ಕಸ್ಟಮರ್ ರೆಪ್ರೆಸೆಂಟೇಟಿವ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ವಿದ್ಯಾರ್ಹತೆ

  • ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರು
  • ಪದವಿಯಲ್ಲಿ ಒಟ್ಟಾರೆ ಶೇ.45 ಅಂಕ ಪಡೆದಿರಬೇಕು, ಕಂಪ್ಯೂಟರ್ ಜ್ಞಾನ ಇದ್ದವರಿಗೆ ಆಧ್ಯತೆ.

ವಯೋಮಿತಿ

ಮಾರ್ಚ್ 31,2017ಕ್ಕೆ ಅಭ್ಯರ್ಥಿಗಳಿಗೆ 30 ವರ್ಷ ಮೀರಿರಬಾರದು

ತಿಂಗಳ ವೇತನ

ರೂ.14,400/-

ಅಭ್ಯರ್ಥಿಗಳ ಆಯ್ಕೆ

  • ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ  ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
  • ರೀಸನಿಂಗ್, ನ್ಯೂಮೆರಿಕ್ ಎಬಿಲಿಟಿ, ಇಂಗ್ಲಿಷ್ ಲ್ಯಾಂಗ್ವೇಜ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್ ಟೆಸ್ಟ್ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು.

ಪರೀಕ್ಷಾ ಕೇಂದ್ರಗಳು

ಬೆಂಗಳೂರು, ದೆಹಲಿ, ಗುಜರಾತ್, ಪುಣೆ, ಮುಂಬೈ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 16 -02 -2017
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 07 -03 -2017
ಪ್ರವೇಶ ಪತ್ರವನ್ನು ಪಡೆದುಕೊಳ್ಳಲು ತಾತ್ಕಾಲಿಕವಾಗಿ ನಿಗದಿ ಪಡಿಸಿರುವ ದಿನಾಂಕ 29 -03 -2017
ತಾತ್ಕಾಲಿಕವಾಗು ನಿಗದಿ ಪಡಿಸಲಾದ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ 09 -04 -2017
ಅರ್ಜಿ ಸಲ್ಲಿಸುವ ವಿಧಾನ : ಎಸ್.ವಿ ಸಿ ಬ್ಯಾಂಕ್ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.
ಅರ್ಜಿ ಶುಲ್ಕ
ರೂ.600/- (ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಆನ್ಲೈನ್ ಮೂಲಕ ಪಾವತಿಸಲು ಮಾತ್ರ ಅವಕಾಶ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07 -03 -2017
ಹೆಚ್ಚಿನ ಮಾಹಿತಿಗಾಗಿ www.svcbank.com

English summary
Applications are invited from the candidates, fulfilling the following criteria, for 40 vacancies for pan-India branches of the Bank

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia