ಸಿಂಡಿಕೇಟ್ ಬ್ಯಾಂಕಿನಲ್ಲಿ ಕನ್ಸಲ್ಟೆಂಟ್ ಹುದ್ದೆ ನೇಮಕಾತಿ

Posted By:

ಸಿಂಡಿಕೇಟ್ ಬ್ಯಾಂಕಿನಲ್ಲಿ ಅವಶ್ಯವಿರುವ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2017-18 ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಕನ್ಸಲ್ಟೆಂಟ್ ಹುದ್ದೆಗೆ ಗುತ್ತಿಗೆ ಆಧಾರಿತ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಗೆ ನವೆಂಬರ್ 30, 2017 ಕೊನೆ ದಿನಾಂಕವಾಗಿದೆ.

ಕನ್ಸಲ್ಟೆಂಟ್ ಹುದ್ದೆ ನೇಮಕಾತಿ

ವಿದ್ಯಾರ್ಹತೆ

ಸಿಂಡಿಕೇಟ್ ಬ್ಯಾಂಕಿನ ಎಂಎಂಜಿಎಸ್ -111/ ಎಸ್ಎಂಜಿಎಸ್ IV/ ಎಸ್ಎಂಜಿಎಸ್ V ಶ್ರೇಣಿಯ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರಿಗೆ ಆದ್ಯತೆ. ಬ್ಯಾಂಕಿನ ಇ ಲರ್ನಿಂಗ್ ವ್ಯವಸ್ಥೆ ಅಳವಡಿಕೆಗಾಗಿ ಗುತ್ತಿಗೆ ಆಧಾರಿತ ನೇಮಕಾತಿ ಇದಾಗಿದೆ.

ವಯೋಮಿತಿ

01 ಅಕ್ಟೋಬರ್ 2017ರಂತೆ ಗರಿಷ್ಠ 62 ವರ್ಷ.
ಸಂಬಳ ನಿರೀಕ್ಷೆ : ರೂ.60000/-

ನೇಮಕಾತಿ ಪ್ರಕ್ರಿಯೆ

ವೈಯಕ್ತಿಕ ಸಂದರ್ಶನ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸರಿಯಾದ ಮಾದರಿಯಲ್ಲಿ ಭರ್ತಿ ಮಾಡಿ, ಸರಿಯಾದ ದಾಖಲೆಗಳೊಂದಿಗೆ ಸಿಂಡಿಕೇಟ್ ಬ್ಯಾಂಕಿನ ಇಮೇಲ್ ಐಡಿ ಪತ್ರ ಕಳಿಸಬಹುದು.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸ್ಕ್ಯಾನ್ ಮಾಡಿ ಇ-ಮೇಲ್ ಮೂಲಕ ಕಳುಹಿಸಲು ಕೋರಲಾಗಿದೆ. ಇ-ಮೇಲ್ ವಿಳಾಸ horecruitments@syndicatebank.co.in

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30 ನವೆಂಬರ್ 2017.

ವಿವರ ಹಾಗೂ ಇನ್ನಿತರ ಮಾಹಿತಿಗೆ ಸಿಂಡಿಕೇಟ್ ಬ್ಯಾಂಕಿನ ವೆಬ್ ಸೈಟ್ ಗೆ ಭೇಟಿ ಕೊಡಿ.

English summary
Syndicate Bank (A Government of India Undertaking) invites applications for engagement of retired executives/ officers of Syndicate Bank as consultants on contractual basis.
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia