ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ 38 ಹುದ್ದೆಗಳ ನೇಮಕಾತಿ

ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ 13 ಬೆರಳಚ್ಚು ನಕಲುಗಾರ ಮತ್ತು 25 ಜವಾನ ಸೇರಿದಂತೆ ಒಟ್ಟು 38 ಹುದ್ದೆಗಳನ್ನು ನೇಮಕ ಕೊಳ್ಳಲಾಗುತ್ತಿದೆ.

ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಖಾಲಿ ಇರುವ ಬೆರಳಚ್ಚು ನಕಲುಗಾರ ಮತ್ತು ಜವಾನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬೆರಳಚ್ಚುಗಾರ ಹುದ್ದೆಗಳ ನೇಮಕಾತಿತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬೆರಳಚ್ಚುಗಾರ ಹುದ್ದೆಗಳ ನೇಮಕಾತಿ

13 ಬೆರಳಚ್ಚು ನಕಲುಗಾರ ಮತ್ತು 25 ಜವಾನ ಸೇರಿದಂತೆ ಒಟ್ಟು 38 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 17 ರೊಳಗೆ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್: ವಿವಿಧ ಹುದ್ದೆಗಳ ನೇಮಕಾತಿಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್: ವಿವಿಧ ಹುದ್ದೆಗಳ ನೇಮಕಾತಿ

ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ನೇಮಕಾತಿ

ಹುದ್ದೆಯ ವಿವರ

ಬೆರಳಚ್ಚು ನಕಲುಗಾರ-13 ಹುದ್ದೆಗಳು

ವೇತನ ಶ್ರೇಣಿ: ರೂ.11600-21000/-
ವಿದ್ಯಾರ್ಹತೆ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು. ಕನ್ನಡ ಮತ್ತು ಆಂಗ್ಲ ಬೆರಳಚ್ಚು ಕಿರಿಯ ದರ್ಜೆ (ಜುನಿಯರ್ ಗ್ರೇಡ್) ಅಥವಾ ಸತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿಗಳನ್ನು ಸ್ವೀಕರಿಸಲು ನಿಗದಿ ಪಡಿಸಿದರುವ ಕೊನೆಯ ದಿನಾಂಕದೊಳಗೆ ಹೊಂದಿರಬೇಕು.

ಜವಾನ-25 ಹುದ್ದೆಗಳು

ವೇತನ ಶ್ರೇಣಿ: ರೂ.9600-14550/-
ವಿದ್ಯಾರ್ಹತೆ: ಏಳನೇ ತರಗತಿ ತೇರ್ಗಡೆ ಹೊಂದಿರಬೇಕು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ (ಒಬಿಸಿ ಅಭ್ಯರ್ಥಿಗಳಿಗೆ 38, ಎಸ್.ಸಿ/ಎಸ್.ಟಿ/ಪ್ರ-1 ರ ಅಭ್ಯರ್ಥಿಗಳಿಗೆ 40 ವರ್ಷ)

ಅರ್ಜಿ ಸಲ್ಲಿಕೆ

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹಾಸನ ಜಿಲ್ಲಾ ಕೋರ್ಟ್ ನ ವೆಬ್ ಸೈಟ್ ನಲ್ಲಿ ಜನವರಿ 17, 2018, ರಾತ್ರಿ 11.59 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.200/- (ಜವಾನ ಹುದ್ದೆಗೆ 100/-)
  • ಎಸ್.ಸಿ/ಎಸ್.ಟಿ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/- (ಜವಾನ ಹುದ್ದೆಗೆ 50/-)

ಶುಲ್ಕವನ್ನು ಆನ್-ಲೈನ್ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ State Bank Collect ಮೂಲಕ online payment through net banking / credit card / debit card/ Challan download ಸೌಲಭ್ಯದ ಮೂಲಕ ಪಾವತಿಸತಕ್ಕದ್ದು.

ಆಯ್ಕೆ ವಿಧಾನ

ಬೆರಳಚ್ಚು ನಕಲುಗಾರ ಹುದ್ದೆಗೆ

ನಿಗದಿಪಡಿಸಿದ ವಿದ್ಯಾರ್ಹತೆಯ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇಕಡವಾರುವಿನಲ್ಲಿ ಆಧಾರದ ಮೇಲೆ 1:5 (ಒಂದು ಹುದ್ದೆಗೆ 5 ಅಭ್ಯರ್ಥಿಗಳು) ಪ್ರಮಾಣದಲ್ಲಿ ಅಧಿಸೂಚನೆಯಲ್ಲಿ ಪ್ರಕಟಿಸಲಾದ ಖಾಲಿ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

ಸಂದರ್ಶನವು 5 ಅಂಕಗಳನ್ನು ಒಳಗೊಂಡಿರುತ್ತದೆ. ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.

ಜವಾನ ಹುದ್ದೆಗೆ

ಏಳನೇ ತರಗತಿ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇಕಡವಾರುವಿನಲ್ಲಿ ಆಧಾರದ ಮೇಲೆ 1:10 (ಒಂದು ಹುದ್ದೆಗೆ 5 ಅಭ್ಯರ್ಥಿಗಳು) ಪ್ರಮಾಣದಲ್ಲಿ ಅಧಿಸೂಚನೆಯಲ್ಲಿ ಪ್ರಕಟಿಸಲಾದ ಖಾಲಿ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

ಸಂದರ್ಶನವು 10 ಅಂಕಗಳನ್ನು ಒಳಗೊಂಡಿರುತ್ತದೆ. ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.
ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-01-2018

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Recruitment Notification of Tumakuru District Court for post of Typist-copyist and peons. Interested candidates can apply before Jan 17, 2018
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X