ತುಮಕೂರು ವೀರಶೈವ ಸಹಕಾರ ಬ್ಯಾಂಕ್ ನಲ್ಲಿ ಖಾಯಂ ನೇಮಕಾತಿ

Posted By:

ತುಮಕೂರಿನ ವೀರಶೈವ ಸಹಕಾರ ಬ್ಯಾಂಕ್ ನಲ್ಲಿ ವಿವಿಧ ಖಾಯಂ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಇರುವವರು ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 28, 2017.

ಹುದ್ದೆಗಳ ವಿವರ

ಸಹಾಯಕ ವ್ಯವಸ್ಥಾಪಕರು (ಟೆಕ್ನಿಕಲ್)-02 ಹುದ್ದೆಗಳು

ವೇತನ ಶ್ರೇಣಿ: ರೂ.22800-43200/-
ವಿದ್ಯಾರ್ಹತೆ: ಕಂಪ್ಯೂಟರ್ ಸೈನ್ಸ್/ಇನ್ಫರ್ಮೇಷನ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್/ಎಂಸಿಎ

ವೀರಶೈವ ಸಹಕಾರ ಬ್ಯಾಂಕ್ ನಲ್ಲಿ ನೇಮಕಾತಿ

ಹಿರಿಯ ಸಹಾಯಕರು-05 ಹುದ್ದೆಗಳು

ವೇತನ ಶ್ರೇಣಿ: ರೂ.21600-40050/-
ವಿದ್ಯಾರ್ಹತೆ: ಬಿ.ಕಾಂ/ಬಿಬಿಎಂ/ಬಿಸಿಎ

ಕಿರಿಯ ಸಹಾಯಕರು-12 ಹುದ್ದೆಗಳು

ವೇತನ ಶ್ರೇಣಿ: ರೂ.20000-36300/-
ವಿದ್ಯಾರ್ಹತೆ: ಬಿ.ಕಾಂ/ಬಿಬಿಎಂ/ಬಿಸಿಎ

ಸಹಾಯಕರು-08 ಹುದ್ದೆಗಳು

ವೇತನ ಶ್ರೇಣಿ: ರೂ.14550-26700/-
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ

ವಯೋಮಿತಿ

ದಿನಾಂಕ 30-07-2017 ರಲ್ಲಿದ್ದಂತೆ ಸಾಮಾನ್ಯ ವರ್ಗಕ್ಕೆ 35 ವರ್ಷ, ಹಿಂದುಳಿದ ವರ್ಗ/ಬಿಸಿಎಂ ವರ್ಗಕ್ಕೆ 38 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಇಂತಹ ಹಿಂದುಳಿದ ಪಂಗಡದ ಪ್ರವರ್ಗ(1) ಗುಂಪಿಗೆ 40 ವರ್ಷ

ಅಗತ್ಯ ಅರ್ಹತೆ

ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಪ್ರಥಮ ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು ಹಾಗೂ ಹಿರಿಯ ಮತ್ತು ಕಿರಿಯ ಸಹಾಯಕರ ಹುದ್ದೆಗಳಿಗೆ ಗಣಕಯಂತ್ರ ಜ್ಞಾನ ಅತ್ಯಗತ್ಯ ಹಾಗೂ ಸಹಕಾರ ಬ್ಯಾಂಕುಗಳಲ್ಲಿ ಎರಡು ವರ್ಷ ಮತ್ತ ಮೇಲ್ಪಟ್ಟು ಅನುಭವ ಹೊಂದಿರುವವರಿಗೆ ಆಧ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ

ಬ್ಯಾಂಕಿನ ಆಡಳಿತ ಕಚೇರಿಯಲ್ಲಿ ನಿಗದಿತ ನಮೂನೆಯ ಅರ್ಜಿಯನ್ನು ಪಡೆದು ಭರ್ತಿಮಾಡಿ ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸಂಬಂಧಿಸಿದ ಎಲ್ಲಾ ವರ್ಷಗಳ ಪದವಿ ಪರೀಕ್ಷೆಯ ಅಂಕಪಟ್ಟಿ, ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ (ಹಿಂದುಳಿದ ವರ್ಗ) ಹುಟ್ಟಿದ ತಾರೀಖಿನ ದೃಢೀಕರಣ ನಕಲು ಮತ್ತು ಅನುಭವ ಪತ್ರಗಳನ್ನು ಮತ್ತು ಅರ್ಜಿ ಶುಲ್ಕವನ್ನು ಪಾವತಿ ಮಾಡಿರುವ ರಶೀದಿಯೊಂದಿಗೆ ಲಗತ್ತಿಸಿ ಲಕೋಟೆ ಮೇಲೆ ಇಂತಹ ಹುದ್ದೆಗಾಗಿ ಅರ್ಜಿ ಎಂದು ನಮೂದಿಸಿ ಬ್ಯಾಂಕಿನ ಆಡಳಿತ ಕಚೇರಿ ವಿಳಾಸಕ್ಕೆ ಕಳುಹಿಸಬೇಕು.

ಲಿಖಿತ ಪರಿಕ್ಷೆ ಮತ್ತು ಕರೆಪತ್ರಗಳು

ಸಹಾಯಕ ವ್ಯವಸ್ಥಾಪಕರು, ಹಿರಿಯ ಮತ್ತು ಕಿರಿಯ ಸಹಾಯಕರುಗಳ ಹುದ್ದೆಗಳಿಗೆ ನಿಗದಿತ ವಿದ್ಯಾರ್ಹತೆ ಆದಾರದಲ್ಲಿ ಲಿಖಿತ ಪರೀಕ್ಷೆಗೆ 1:20 ರ ಅನುಪಾತದಲ್ಲಿ ಹಾಜರಾಗಲು ಅಭ್ಯರ್ಥಿಗಳಿಗೆ ಆಹ್ವಾನಪತ್ರವನ್ನು ಕಳುಹಿಸಲಾಗುವುದು.
ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಸಂದರ್ಶನಕ್ಕೆ 1:5 ಅನುಪಾತದಲ್ಲಿ ಆಹ್ವಾನ ಪತ್ರ ಕಳುಹಿಸಲಾಗುವುದು.

ಸಾಮಾನ್ಯ ಸೂಚನೆಗಳು

  • ನೇಮಕಾತಿ ಅರ್ಜಿ ಶುಲ್ಕ ಪ.ಜಾ/ಪ.ಪಂ ಕ್ಕೆ ರೂ.100/- ಹಾಗೂ ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.300/- ಗಳನ್ನು ಆಡಳಿತ ಕಚೇರಿಯಲ್ಲಿ ಹಣ ಪಾವತಿ ಮಾಡಿ ರಶೀದಿಯನ್ನು ಪಡೆದು ಅರ್ಜಿಗೆ ಲಗತ್ತಿಸಬೇಕು.
  • ಅಂಚೆ ಇಲಾಖೆಯಿಂದ ಅಥವಾ ಇನ್ಯಾವುದೇ ಕಾರಣದಿಂದ ಅರ್ಜಿಗಳು ನಿಗದಿತ ದಿನಾಂಕಕ್ಕಿಂತ ತಡವಾಗಿ ಬಂದರೆ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
  • ಅಪೂರ್ಣ ಅರ್ಜಿ ಮತ್ತು ಅರ್ಜಿ ಶುಲ್ಕವನ್ನು ಪಾವತಿ ಮಾಡದೆ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
  • ಸಹಕಾರ ಬ್ಯಾಂಕುಗಳಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳು ಕಾರ್ಯನಿರ್ವಹಿಸುತ್ತಿರುವ ಸಂಘ/ಸಂಸ್ಥೆಗಳಿಂದ ನಿರಪೇಕ್ಷಣಾ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.
  • ಅಭ್ಯರ್ಥಿಗಳು ಲಿಖಿತ ಪರೀಕ್ಷೆ/ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕಾಗುತ್ತದೆ.
  • ಅಭ್ಯರ್ಥಿಗಳ ಅರ್ಹತೆ. ಲಿಖಿತ ಪರೀಕ್ಷೆ, ಸಂದರ್ಶನ ಅಥವಾ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನೇಮಕಾತಿ ಸಮಿತಿಯ ತೀರ್ಮಾನ ಅಂತಿಮ.
  • ಹಿರಿಯ ಸಹಾಯಕರ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆಯೊಂದಿಗೆ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
  • ಸಹಾಯಕರ ಹುದ್ದೆಗೆ ನೇಮಕಾತಿ ಹುದ್ದೆಯ 1:5 ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸೂಚಿಸಲಾದ ಅರ್ಹತಾ ಪರೀಕ್ಷೆಯಲ್ಲಿ ಅವರು ಪಡೆದ ಅಂಕದ ಆಧಾರದ ಮೇಲೆ ಸಂದರ್ಶನಕ್ಕಾಗಿ ಆಹ್ವಾನಪತ್ರಿಕೆ ಕಳುಹಿಸಲಾಗುವುದು.

ಆಡಳಿತ ಕಛೇರಿ ವಿಳಾಸ

ತುಮಕೂರು ವೀರಶೈವ ಸಹಕಾರ ಬ್ಯಾಂಕ್ ನಿ.,
ಡಾ.ರಾಧಕೃಷ್ಣನ್ ರಸ್ತೆ, ಎಸ್ ಎಸ್, ಪುರಂ, ತುಮಕೂರು-572102

ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ : 0816-2279414/2254027

English summary
Veerashaiva co-operaive bank ltd, Tumkaru invited applications from eligible candidates for various posts.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia