ತುಮಕೂರು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

Posted By:

ತುಮಕೂರು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಡ್ವೊಕೇಟ್ ಜನರಲ್‍ರವರ ಕಛೇರಿಯಲ್ಲಿ ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರ ನೇಮಕಾತಿ

ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸಿಂಡಿಕೇಟ್ ಬ್ಯಾಂಕ್: ಬ್ಯಾಂಕಿಂಗ್ ಪಿಜಿ ಕೋರ್ಸ್ ಗೆ ಅರ್ಜಿ ಆಹ್ವಾನ

ತುಮಕೂರು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದಲ್ಲಿ ನೇಮಕಾತಿ

ಹುದ್ದೆಗಳ ವಿವರ

ಜಿಲ್ಲಾ ಕಾರ್ಯಕ್ರಮ ಸಂಯೋಜಕ-01 ಹುದ್ದೆ
ವಿದ್ಯಾರ್ಹತೆ: ಎಂಬಿಎ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮ್ಯಾನೇಜ್ಮೆಂಟ್/ ಹೆಲ್ತ್ ಅಡ್ಮಿನಿಸ್ಟ್ರೇಷನ್ ವಿಷಯಗಳಲ್ಲಿ ಪಿಜಿ ಡಿಪ್ಲೋಮ ಕೋರ್ಸ್ ಪೂರೈಸಿರಬೇಕು. ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು
ವೇತನ: ರೂ.24150/-

ಹಿರಿಯ ಚಿಕಿತ್ಸಾ ಮೇಲ್ವಿಚಾರಕರು-2 ಹುದ್ದೆಗಳು
ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ ಅಥವಾ ಮಾನ್ಯತೆ ಪಡೆದ ಸ್ಯಾನಿಟರಿ ಇನ್ಸ್ಪೆಕ್ಟರ್ ಕೋರ್ಸ್ ಪಡೆದಿರಬೇಕು. ಎರಡು ತಿಂಗಳ ಕಂಪ್ಯೂಟರ್ ಸೆರ್ಟಿಫಿಕೇಟ್ ಕೋರ್ಸ್ ಮಾಡಿರಬೇಕು. ಶಾಶ್ವತ ದ್ವಿಚಕ್ರ ವಾಹನ ಚಲನ ಪರವಾನಗಿ ಹೊಂದಿರಬೇಕು.
ವೇತನ: ರೂ.21000/-

ಪ್ರಯೋಗಶಾಲಾ ತಂತ್ರಜ್ಞರು-01 ಹುದ್ದೆ
ವಿದ್ಯಾರ್ಹತೆ: ದ್ವಿತೀಯ ಪಿಯುಸಿ (10+2) ತೇರ್ಗಡೆಯೊಂದಿಗೆ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞತೆಯ ಡಿಪ್ಲೋಮ ಅಥವಾ ಸೆರ್ಟಿಫಿಕೇಟ್ ಕೋರ್ಸ್ ಅಥವಾ ಅದಕ್ಕೆ ಸಮನಾದ ಕೋರ್ಸ್ ಮಾಡಿರಬೇಕು.
ವೇತನ:ರೂ.13000/-

ಅರ್ಜಿ ಸಲ್ಲಿಕೆ

ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರದ ಜೊತೆಗೆ ತಮ್ಮ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ತಲುಪಿಸಲು ಕೋರಲಾಗಿದೆ.

ಕಚೇರಿ ವಿಳಾಸ

ತುಮಕೂರು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ತುಮಕೂರು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-01-2018

English summary
Tumkur District Tuberculosis control office recruiting various posts. Candidates can submit their application in prescribed format on before January 06, 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia