ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 200 ಹುದ್ದೆಗಳ ನೇಮಕಾತಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಟ್ಟು 200 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಕ್ಟೋಬರ್ 21, 2017 ಕೊನೆ ದಿನಾಂಕವಾಗಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಸಹಾಯಕರ ನೇಮಕಾತಿಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಸಹಾಯಕರ ನೇಮಕಾತಿ

ಒಟ್ಟು 200 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಕ್ಟೋಬರ್ 21, 2017 ಕೊನೆ ದಿನಾಂಕವಾಗಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ

ಹುದ್ದೆಗಳ ವಿವರ

ಹುದ್ದೆ ಹೆಸರು: ಸ್ಪೆಷಲಿಸ್ಟ್ ಅಧಿಕಾರಿ
ವೇತನ : ರೂ.31705 - 45950/-
ವಯೋಮಿತಿ: 23 ರಿಂದ 32 ವರ್ಷ

ವಿದ್ಯಾರ್ಹತೆ

ಹುದ್ದೆಗ ಅರ್ಜಿ ಸಲ್ಲಿಸಲು ಬಯಸುವವರು ಶೇ 60ರಷ್ಟು ಅಂಕಗಳೊಂದಿಗೆ ಪದವಿ ಪಡೆದಿರಬೇಕು. ಭಾರತ ಸರ್ಕಾರ ಅಥವಾ ಸರ್ಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ವಿದ್ಯಾಸಂಸ್ಥೆಯಿಂದ ಪದವಿ ಗಳಿಸಿರಬೇಕು.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್-ಲೈನ್ ನಲ್ಲಿ ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.600/-
  • ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/-

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಎರಡು ವರ್ಷ ಪರಿವೀಕ್ಷಣಾ ಅವಧಿಯಲ್ಲಿರಬೇಕು.

ಪರೀಕ್ಷಾ ವಿವರ

ಆನ್-ಲೈನ್ ಪರೀಕ್ಷೆಯು 200 ಅಂಕಗಳಿಗೆ ನಡೆಯಲಿದ್ದು, ಪರೀಕ್ಷೆಯು ರೀಸನಿಂಗ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ , ಸಂಬಂಧಪಟ್ಟ ಹುದ್ದೆಗೆ ತಕ್ಕ ಸಾಮಾನ್ಯ ಜ್ಞಾನ ಮತ್ತು ಆಂಗ್ಲ ಭಾಷೆ ಸೇರಿದಂತೆ ಒಟ್ಟು ನಾಲ್ಕು ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ: 04/10/2017
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 21/10/2017
  • ಪರೀಕ್ಷೆ ನಡೆಯುವ ದಿನಾಂಕ: 25/11/2017 (ತಾತ್ಕಾಲಿಕ)

ಪರೀಕ್ಷಾ ಕೇಂದ್ರಗಳು

ಬೆಂಗಳೂರು, ದೆಹಲಿ, ಕೋಲ್ಕತ, ಲಕ್ನೋ, ಮುಂಬೈ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಎಸ್ಎಫ್: ಕ್ರೀಡಾ ಕೋಟಾದಡಿಯಲ್ಲಿ 196 ಹುದ್ದೆಗಳ ನೇಮಕಾತಿಬಿಎಸ್ಎಫ್: ಕ್ರೀಡಾ ಕೋಟಾದಡಿಯಲ್ಲಿ 196 ಹುದ್ದೆಗಳ ನೇಮಕಾತಿ

For Quick Alerts
ALLOW NOTIFICATIONS  
For Daily Alerts

English summary
Union Bank of India invites On-line Applications for recruitment to the specialist officer post.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X