ಕೇಂದ್ರ ಲೋಕ ಸೇವಾ ಆಯೋಗವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಉದ್ದೇಶಿಸಿದ್ದು, ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಅಗ್ರಿಕಲ್ಚರ್ ಮಾರ್ಕೆಟಿಂಗ್ , ಸ್ಪೆಷಲಿಸ್ಟ್ ಮತ್ತು ಅಸಿಸ್ಟೆಂಟ್ ಕೆಮಿಸ್ಟ್ ಹುದ್ದೆಗಳ ನೇಮಕಾಗಿ ಮಾಡಿಕೊಳ್ಳುತ್ತಿದ್ದು, ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ಮಾರ್ಕೆಟಿಂಗ್ ಆಫಿಸರ್ (ಗ್ರೂಪ್-1)-28 ಹುದ್ದೆ
ವೇತನ ಶ್ರೇಣಿ: ರೂ.44900-142400/-
ವಿದ್ಯಾರ್ಹತೆ: ಕೃಷಿ/ಸಸ್ಯಶಾಸ್ತ್ರ/ಅಗ್ರಿಕಲ್ಚರ್ ಎಕನಾಮಿಕ್ಸ್/ಅಗ್ರಿಕಲ್ಚರ್ ಮಾರ್ಕೆಟಿಂಗ್/ಎಕನಾಮಿಕ್ಸ್/ಕಾಮರ್ಸ್ ವಿತ್ ಎಕನಾಮಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಎರಡು ವರ್ಷಗಳ ಸೇವಾ ಅನುಭವ ಹೊಂದಿರಬೇಕು.
ವಯೋಮಿತಿ: 30 ವರ್ಷ
ಸ್ಪೆಷಲಿಸ್ಟ್ ಗ್ರೇಡ್-III(ಬಯೋಕೆಮಿಸ್ಟ್ರಿ): 03 ಹುದ್ದೆಗಳು
ವೇತನ ಶ್ರೇಣಿ: ರೂ.15600-69100/- + ಗ್ರೇಡ್ ಪೇ 6000/-
ವಯೋಮಿತಿ: 40 ವರ್ಷಗಳು
ವಿದ್ಯಾರ್ಹತೆ: ಎಂಬಿಬಿಎಸ್/ಡಾಕ್ಟರ್ ಅಫ್ ಮೆಡಿಸಿನ್ (ಬಯೋಕೆಮಿಸ್ಟ್ರಿ)/ಎಂ.ಎಸ್ಸಿ (ಮೆಡಿಕಲ್ ಬಯೋಕೆಮಿಸ್ಟ್ರಿ)
ಅಸಿಸ್ಟೆಂಟ್ ಕೆಮಿಸ್ಟ್-01 ಹುದ್ದೆ
ವೇತನ ಶ್ರೇಣಿ: ರೂ.9300-34800/- + ಗ್ರೇಡ್ ಪೇ 4800/-
ವಯೋಮಿತಿ: 30 ವರ್ಷಗಳು
ವಿದ್ಯಾರ್ಹತೆ: ಎಂ.ಎಸ್ಸಿ (ಕೆಮಿಸ್ಟ್ರಿ/ಸಾಯಿಲ್ ಸೈನ್ಸ್/ಫಿಸಿಕಲ್ ಕೆಮಿಸ್ಟ್ರಿ/ಇನಾರ್ಗಾನಿಕ್ ಕೆಮಿಸ್ಟ್ರಿ/ಅನಾಲಿಟಿಕಲ್ ಕೆಮಿಸ್ಟ್ರಿ)
ಅರ್ಜಿ ಪ್ರಕ್ರಿಯೆ
ಅರ್ಜಿಗಳನ್ನು ಅನ್-ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ವೆಬ್ಸೈಟ್ ನಲ್ಲಿ ಹುದ್ದೆಗಳಿಗೆ ಸಂಬಂಧಪಟ್ಟ ವಿವರಗಳು ಮತ್ತು ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಮಾನದಂಡಗಳಿದ್ದು, ಪೂರ್ತಿ ಮಾಹಿತಿಯನ್ನು ಅಧಿಸೂಚನೆಯಿಂದ ಪಡೆದುಕೊಂಡು ಅರ್ಜಿ ಸಲ್ಲಿಸತಕ್ಕದ್ದು.
ಸಂಪೂರ್ಣ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ
ಆಯ್ಕೆ ಪ್ರಕ್ರಿಯೆ
ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಶುಲ್ಕ 25 ರೂಪಾಯಿ. ಶುಲ್ಕವನ್ನು ಎಸ್ ಬಿಐ ಆನ್ ಲೈನ್ ಬ್ಯಾಂಕಿಂಗ್ ಮೂಲಕ ಅಥವಾ ಎಸ್ ಬಿಐ ಶಾಖೆಗಳಲ್ಲಿ ಪಾವತಿಸಬಹುದು.
ಪ್ರಮುಖ ದಿನಾಂಕಗಳು
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-08-2017
ಅನ್-ಲೈನ್ ಅರ್ಜಿ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ: 11-08-2017
ಹೆಚ್ಚಿನ ಮಾಹಿತಿಗೆ ವೆಬ್ಸೈಟ್ www.upsc.gov.in ಗಮನಿಸಿ