ಯುಪಿಎಸ್‍ಸಿ ಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Posted By:

ಕೇಂದ್ರ ಲೋಕ ಸೇವಾ ಆಯೋಗವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಉದ್ದೇಶಿಸಿದ್ದು, ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಗ್ರಾಹಕ ವ್ಯವಹಾರಗಳ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಪದವಿ ಮತ್ತು ಇಂಜಿನಿಯರಿಂಗ್ ಗಳಿಸಿದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ಜೂನಿಯರ್ ಟೆಕ್ನಿಕಲ್ ಆಫಿಸರ್(ಶುಗರ್ ಟೆಕ್ನಾಲಜಿ)-1 ಹುದ್ದೆ
ಸ್ಪೆಷಲಿಸ್ಟ್ ಗ್ರೇಡ್-3(ಆಬ್ಸೆಟ್ರಿಕ್ಸ್ ಆಂಡ್ ಗೈನಕಾಲಜಿ-14 ಹುದ್ದೆಗಳು
ಸ್ಪೆಷಲಿಸ್ಟ್ ಗ್ರೇಡ್ 3(ಸರ್ಜರಿ)-10 ಹುದ್ದೆಗಳು
ಡೆಪ್ಯೂಟಿ ಡೈರೆಕ್ಟರ್ (ಮೆಕ್ಯಾನಿಕಲ್)-20 ಹುದ್ದೆಗಳು
ಯೂತ್ ಆಫೀಸರ್-08 ಹುದ್ದೆಗಳು

ಯುಪಿಎಸ್‍ಸಿ ವಿವಿಧ ಹುದ್ದೆಗಳ ನೇಮಕಾತಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಲ್ಲಿ ಆಬ್ಸೆಟ್ರಿಕ್ಸ್ ಆ್ಯಂಡ್ ಗೈನಕಾಲಜಿ ವಿಭಾಗದಲ್ಲಿ 14 ಸ್ಪೆಷಲಿಸ್ಟ್ ಗ್ರೇಡ್-3 ಹುದ್ದೆಗಳಿಗೆ ಮತ್ತು ಸರ್ಜರಿ ವಿಭಾಗದಲ್ಲಿರುವ 10 ಸ್ಪೆಷಲಿಸ್ಟ್ ಹುದ್ದೆಗಳಿಗೆ ಎಂಬಿಬಿಎಸ್ ವಿದ್ಯಾರ್ಹತೆ ಹೊಂದಿರಬೇಕು..
ಗರಿಷ್ಠ ವಯೋಮಿತಿ: 40 ವರ್ಷ

ಗ್ರಾಹಕ ವ್ಯವಹಾರಗಳ ಸಚಿವಾಲಯದಡಿ ಬರುವ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯಲ್ಲಿ 1 ಜೂನಿಯರ್ ಟೆಕ್ನಿಕಲ್ ಆಫೀಸರ್ ಹುದ್ದೆಯಿದ್ದು, ವಿಜ್ಞಾನ/ಎಂಜಿನಿಯರಿಂಗ್ ಪದವಿ ಮತ್ತು ಶುಗರ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು
ಗರಿಷ್ಠ ವಯೋಮಿತಿ: 35 ವರ್ಷ

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಡಿ ಬರುವ ಗಣಿ ಸುರಕ್ಷತೆ ನಿರ್ದೇಶನಾಲಯದಲ್ಲಿ 20 ಡೆಪ್ಯೂಟಿ ಡೈರೆಕ್ಟರ್(ಮೆಕ್ಯಾನಿಕಲ್) ಹುದ್ದೆಗಳಿವೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷವಾಗಿದೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ಗರಿಷ್ಠ ವಯೋಮಿತಿ: 35 ವರ್ಷ

ಅರ್ಜಿ ಪ್ರಕ್ರಿಯೆ

ಅರ್ಜಿಗಳನ್ನು ಅನ್-ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.
ವೆಬ್ಸೈಟ್ ನಲ್ಲಿ ಹುದ್ದೆಗಳಿಗೆ ಸಂಬಂಧಪಟ್ಟ ವಿವರಗಳು ಮತ್ತು ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಮಾನದಂಡಗಳಿದ್ದು, ಪೂರ್ತಿ ಮಾಹಿತಿಯನ್ನು  ಅಧಿಸೂಚನೆಯಿಂದ ಪಡೆದುಕೊಂಡು ಅರ್ಜಿ ಸಲ್ಲಿಸತಕ್ಕದ್ದು.

ಆಯ್ಕೆ ಪ್ರಕ್ರಿಯೆ

ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ

25 ರೂಪಾಯಿ. ಶುಲ್ಕವನ್ನು ಎಸ್ ಬಿಐ ಆನ್ ಲೈನ್ ಬ್ಯಾಂಕಿಂಗ್ ಮೂಲಕ ಅಥವಾ ಎಸ್ ಬಿಐ ಶಾಖೆಗಳಲ್ಲಿ ಪಾವತಿಸಬಹುದು.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 27, 2017

ಹೆಚ್ಚಿನ ಮಾಹಿತಿಗೆ ವೆಬ್ಸೈಟ್ www.upsc.gov.in ಗಮನಿಸಿ

English summary
UNION PUBLIC SERVICE COMMISSION INVITES ONLINE RECRUITMENT APPLICATIONS (ORA)FOR RECRUITMENT BY SELECTION TO THE VARIOUS POSTS.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia