ಯು ಪಿ ಎಸ್ ಸಿ 179 ಸಹಾಯಕ ಕಮಾಂಡೆಂಟ್ಸ್ ಹುದ್ದೆ ನೇಮಕಾತಿ

Posted By:

ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್ಸಿ)ದ ಗ್ರೂಪ್ ಎ ವಿಭಾಗದಲ್ಲಿ 179 ಸಹಾಯಕ ಕಮಾಂಡೆಂಟ್ಸ್ ಹುದ್ದೆಗಳಿಗೆ ಆರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಬಿಎಸ್ಎಫ್, ಸಿ ಆರ್ ಪಿ ಎಫ್, ಸಿಐಎಫ್ ಮತ್ತು ಎಸ್ ಎಸ್ ಬಿ ವಿಭಾಗದಲ್ಲಿ ಹುದ್ದೆಗಳ ಖಾಲಿ ಇದ್ದು,  ಅರ್ಹ ಅಭ್ಯರ್ಥಿಗಳು ಮೇ 05,2017ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಹಾಯಕ ಕಮಾಂಡೆಂಟ್ಸ್ ಹುದ್ದೆ ನೇಮಕಾತಿ

ಹುದ್ದೆ ವಿವರ

ಹುದ್ದೆಗಳು: ಸಹಾಯಕ ಕಮಾಂಡಂಟ್ಸ್
ಎಲ್ಲಿ : ಭಾರತದೆಲ್ಲೆಡೆ
ಗ್ರೂಪ್ ಎ ಹುದ್ದೆ:

 • BSF-28
 • CRPF-65
 • CISF-23
 • SSB-63

ಒಟ್ಟು 179 ಹುದ್ದೆಗಳು

ವಿದ್ಯಾರ್ಹತೆ

ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಡೀಮ್ಡ್ ವಿಶ್ವವಿದ್ಯಾಲಯ ಮುಂತಾದವುಗಳಿಂದ ಪದವಿ ಪಡೆದಿದ್ದರೆ ಯುಜಿಸಿ ಕಾಯ್ದೆ 1956ರ ಅನ್ವಯ ಅರ್ಹತೆ ಪಡೆದಿರಬೇಕು.

ವಯೋಮಿತಿ

20 to 25 ವರ್ಷ as on 01/08/2017 SC/ST ಅಭ್ಯರ್ಥಿಗಳಿಗೆ 5ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ವಿನಾಯಿತಿ ಇದೆ.

ಆಯ್ಕೆ ಪ್ರಕ್ರಿಯೆ

ನೇಮಕಾತಿಯನ್ನು ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಹಾಗೂ ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಮಾಡಲಾಗುತ್ತದೆ.

ಲಿಖಿತ ಪರೀಕ್ಷೆ

ಲಿಖಿತ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ಮೊದಲ ಪತ್ರಿಕೆ ಬಹುಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಎರಡನೇ ಪತ್ರಿಕೆಯು ಬರವಣಿಗೆಯನ್ನಾಧರಿಸಿರುತ್ತದೆ.

ಮೊದಲ ಪತ್ರಿಕೆ

 • ಮೆಂಟಲ್ ಎಬಿಲಿಟಿ, ಜನರಲ್ ಸೈನ್ಸ್, ಪ್ರಚಲಿತ ವಿದ್ಯಮಾನ, ಭಾರತೀಯ ಇತಿಹಾಸ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆ, ಭಾರತೀಯ ಭೌಗೋಳಿಕ ಕುರಿತಾದ ಪ್ರಶ್ನೆಗಳನ್ನು  ಒಳಗೊಂಡಿರುತ್ತದೆ.
 • ನಕಾರಾತ್ಮಕ ಉತ್ತರಗಳಿಗೆ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ (negative marking)

ಎರಡನೇ ಪತ್ರಿಕೆ

ಎರಡನೇ ಪತ್ರಿಕೆಯು ಎರಡು ವಿಭಾಗಗಳನ್ನು ಒಳಗೊಂಡಿದ್ದು ಮೊದಲನೇ ವಿಭಾಗದಲ್ಲಿ ಪ್ರಬಂಧ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಎರಡನೇ ವಿಭಾಗದಲ್ಲಿ ಸಂವಹನ ಕೌಶಲ್ಯ ಮತ್ತು ಭಾಷೆಗೆ ಸಂಬಂಧಿಸಿದ ಗಧ್ಯ ರೂಪದಲ್ಲಿ ಉತ್ತರಿಸುವಂತ ಪ್ರಶ್ನೆಗಳನ್ನು ಕೇಳಲಾಗುತ್ತದೆ

ಅರ್ಜಿ ಸಲ್ಲಿಕೆ

 • ಅಭ್ಯರ್ಥಿಗಳು ಆನ್-ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
 • ಆನ್-ಲೈನ್ ಅರ್ಜಿ ಸಲ್ಲಿಸುವ ವಿಳಾಸ www.upsconline.nic.in.

ಅರ್ಜಿ ಶುಲ್ಕ

 • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ : ರೂ.200/-
 • ಎಸ್ ಸಿ/ ಎಸ್ಟಿ/ ಮಹಿಳಾ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕ ವಿಧಿಸಿಲ್ಲ.
 • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿ ನಗದು ಅಥವಾ ಆನ್ ಲೈನ್ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು.

ಪ್ರಮುಖ ದಿನಾಂಕಗಳು

 • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 12-04-2017
 • ಅರ್ಜಿ ಸಲ್ಲಿಕೆ ಕೊನೆಯ ದಿನಾಮಕ: 05-05-2017

ಪರೀಕ್ಷಾ ಕೇಂದ್ರ

ಕರ್ನಾಟಕದಲ್ಲಿ ಬೆಂಗಳೂರು ನಗರದಲ್ಲಿ ಪರೀಕ್ಷೆ ನಡೆಯಲಿದೆ.

ಹೆಚ್ಚಿನ ವಿವರಗಳಿಗಾಗಿ www.upsc.gov.in ಗಮನಿಸಿ

English summary
UPSC INVITES ONLINE APPLICATION FOR THE RECRUITMENT OF CENTRAL ARMED POLICE FORCES (ASSISTANT COMMANDANTS)

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia